Showing posts with label ಳಳ- RSS- ವಂದಿಸುವೆ ಭಗವಾ ಗುಡಿ others VANDISUVE BHAGAVA GUDI rss. Show all posts
Showing posts with label ಳಳ- RSS- ವಂದಿಸುವೆ ಭಗವಾ ಗುಡಿ others VANDISUVE BHAGAVA GUDI rss. Show all posts

Friday, 24 December 2021

ವಂದಿಸುವೆ ಭಗವಾ ಗುಡಿ others VANDISUVE BHAGAVA GUDI rss

   


RSS song .

ವಂದಿಸುವೆ ಭಗವಾ ಗುಡಿ

ಬ್ರಹ್ಮ ಕ್ಷಾತ್ರವ ಜಗದಿ ಮೆರೆಸಿದ ಹಿಂದು ತೇಜದ ಪ್ರತಿನಿಧಿ ||ಪ||


ಅರುಣ ಕಾಂತಿಯ ವಿಹಗದಂತೆ ನೀಲಗಗನದಿ ನಿನ್ನ ಲಾಸ್ಯ

ಅಗ್ನಿಶಿಖೆಯೊಲು ನಿನ್ನ ರೂಪವು ಯಜ್ಞಮಯ ಸಂಸ್ಕೃತಿಯ ಭಾಷ್ಯ

ದೇಶಧರ್ಮದ ಭಕ್ತಿ ದೀಕ್ಷೆಯು, ನಿನ್ನ ಛಾಯೆಯ ಸನ್ನಿಧಿ ||೧||


ಏರು ಹೃದಯದ ಪೀಠದಲಿ ನಿಲಿಸಿರುವ ದೃಢಸಂಕಲ್ಪ ಸ್ತಂಭ

ಬೀರು ಸಾಹಸ ಶೀಲ ಜ್ಞಾನವ ತ್ಯಾಗ ಭಾವನೆ ಮನದಿ ತುಂಬ

ಹಾರು ವಿಶ್ವವಿಜೇತ ಕೇತನ ದಾಟಿ ನಾಡಿನ ಗಡಿಗಡಿ ||೨||


ಭ್ರಾಂತ ತರತಮ ಕೃತಕ ಭೇದದಿ, ಕವಲುಗೊಂಡಿಹ ಹಿಂದುಸ್ರೋತ

ಒಂದುಗೂಡಿಸಿ ಐಕ್ಯಬೆಸೆಯುತ ಬಂಧುಭಾವದಿ ಓತಪ್ರೋತ

ಪ್ರಣವದಂಕಿತ ನಿನ್ನ ದರುಶನ, ಹಿಂದು ಹೆದ್ದೆರೆ ಗಾರುಡಿ ||೩||


ನಿನ್ನ ಪೂಜೆಗೆ ತಂದಿರುವೆ ನಾ ಬಾಳಸುಮ ಸಾಧಾರಣ

ಬಣ್ಣ ಬಂಡು ಸುಗಂಧ ಅಂದಗಳೆಲ್ಲ ಸಹಿತ ಸಮರ್ಪಣ

ಅನ್ಯ ಮೋಕ್ಷವ ಮನವು ಬಯಸದು ಪೂಜ್ಯ ಗುರು ಭಗವಾಗುಡಿ ||೪||

***

vaMdisuve BagavA guDi

brahma kShAtrava jagadi meresida hiMdu tEjada pratinidhi ||pa||


aruNa kAMtiya vihagadaMte nIlagaganadi ninna lAsya

agniSikheyolu ninna rUpavu yaj~jamaya saMskRutiya BAShya

dESadharmada Bakti dIkSheyu, ninna CAyeya sannidhi ||1||


Eru hRudayada pIThadali nilisiruva dRuDhasaMkalpa staMbha

bIru sAhasa SIla j~jAnava tyAga BAvane manadi tuMba

hAru viSvavijEta kEtana dATi nADina gaDigaDi ||2||


BrAMta taratama kRutaka BEdadi, kavalugoMDiha hiMdusrOta

oMdugUDisi aikyabeseyuta baMdhuBAvadi OtaprOta

praNavadaMkita ninna daruSana, hiMdu heddere gAruDi ||3||


ninna pUjege taMdiruve nA bALasuma sAdhAraNa

baNNa baMDu sugaMdha aMdagaLella sahita samarpaNa

anya mOkShava manavu bayasadu pUjya guru BagavAguDi ||4||

***