ಕಮಲದಮೊಗದೋಳೆ,
ಕಮಲದ ಕಣ್ಣೋಳೆ,ಕಮಲವ ಕೈಯಲ್ಲಿ ಹಿಡಿದೋಳೆ
||ಕಮಲದ||
ಕಮಲನಾಭನ ಹೃದಯ ಕಮಲದಲಿ ನಿಂತೋಳೆ
ಕಮಲೆ ನೀ ಕರಮುಗಿವೆ ಬಾಮ್ಮ,ಪೂಜೆಯ ಸ್ವೀಕರಿಸೆ
ದಯಮಾಡಿಸಮ್ಮ
||ಕಮಲದ||
ಕಾವೇರಿ ನೀರ ಅಭಿಷೇಕಕಾಗಿ
ನಿನಗಾಗಿ ನಾ ತಂದೆನಮ್ಮ
ಕಂಪನ್ನು ಚೆಲ್ಲೊ ಸುಮರಾಶಿಯಿಂದ
ಹೂ ಮಾಲೆ ಕಟ್ಟಿರುವೆನಮ್ಮ
ಬಂಗಾರ ಕಾಲ್ಗೆಜ್ಜೆನಾದ
ನಮ್ಮ ಮನೆಯೆಲ್ಲವ ತುಂಬುವಂತೆ ||ಬಂಗಾರ||
ನಲಿಯುತ,ಕುಣಿಯುತ,ಒಲಿದು ಬಾ ನಮ್ಮ ಮನೆಗೆ ಬಾ
||ಕಮಲದ||
ಶ್ರೀದೇವಿ ಬಾಮ್ಮ ಧನಲಕ್ಷ್ಮಿ ಬಾಮ್ಮಮನೆಯನ್ನು ಬೆಳಕಾಗಿ
ಮಾಡು ದಯೆ ತೋರಿ ಬಂದು
ಮನದಲ್ಲಿ ನಿಂತು ಸಂತೋಷ
ಸೌಭಾಗ್ಯನೀಡು
ಸ್ಥಿರವಾಗಿ ಬಂದಿಲ್ಲಿ ನೆಲೆಸು
ತಾಯೇ ವರಮಹಾಲಕ್ಷ್ಮಿಯೇ ಹರಸು ||ಸ್ಥಿರ||
ಕರವನು.......ಮುಗಿಯುವೆ....
ಆರತಿ.......ಈಗ ಬೆಳಗುವೆ
||ಕಮಲದ||
************