ರಾಗ ಬೃಂದಾವನಸಾರಂಗ ಆದಿತಾಳ
1st Audio by Mrs. Nandini Sripad
ಜನ್ಮ ಸಫಲವಾಯಿತು ॥ ಪ ॥ or ಜನ್ಮ ಸಾರ್ಥಕವಾಯಿತು
ನಮ್ಮ ಆದಿ ಅನಂತ ಜನಾರ್ದನನ ಕಂಡು ಎನ್ನ ॥ ಅ ಪ ॥
ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ ಅ - ।
ಗಮ್ಯ ಗೋಚರನೆಂದು ಸ್ತುತಿ ಸುರರೇ ॥
ಬ್ರಹ್ಮಾ ರುದ್ರಾದಿಗಳು ಇಂದ್ರ ಚಂದ್ರಾದಿಗಳು ।
ನಿರ್ಮಲಾ ಮೂರುತಿ ನಿಮ್ಮ ನಿಜವ ತೋರಿದ ಮ್ಯಾಲೆ ॥ 1 ॥
ಚತುರಮುಖನು ಬಂದು ಪೃಥುವಿ ವಳಗೆ ನಿಂದೂ ।
ಕ್ರತುಗಳ ಮಾಡಿ ಆಹುತಿ ಕೊಡಲು ಅರೆ ಘ್ರಾಸವಾ - ॥
ಯಿತೆಂದು ಅನಲ ಬಂದೂ ಮೊರೆ ಇಡಲು ।
ದ್ವಿತೀಯ ಘ್ರಾಸಕ್ಕೆ ಕೈಯ ವಡ್ಡಿ ನಿಂತದ್ದು ಕಂಡು ॥ 2 ॥
ಮೊದಲು ಬಾಗಿಲಿ ನಿಮ್ಮ ಮುಖಕಮಲ ಕಂಡೆ ।
ಮುದದಿಂದ ಮಕರಕುಂಡಲ ಕಿರೀಟವ ಕಂಡೆ ॥
ಭುಜದ್ವಯವನು ಕಂಡೆ ಶ್ರೀವತ್ಸ ಕೌಸ್ತುಭ ಕೊರಳ ।
ವೈಜಯಂತೀ ಮಾಲಿಕೆಗಳ ಕಂಡು ಎನ್ನ ॥ 3 ॥
ನಡುವಿನ ಬಾಗಿಲಿ ನಾಭಿ ಕಮಲ ಕಂಡೆ ।
ಉದ್ಭವಿಸಿ ಮೆರೆವ ವಿರಂಚಿಯ ಕಂಡೆ ॥
ಜಡಿವೋ ಪೀತಾಂಬರ ನಡುವಿನೊಡ್ಯಾಣ ।
ಉಡಿಗೆಜ್ಜೆ ಮೇಲಿನ ಕಿರುಗೆಜ್ಜಿಗಳ ಕಂಡು ॥ 4 ॥
ಮೂರನೇ ಬಾಗಿಲಿ ಮುದ್ದು ಶ್ರೀ ಚರಣವು ।
ಶ್ರೀದೇವಿ ಭೂದೇವಿ ಸೇವೆ ಮಾಳ್ಪದ ಕಂಡೆ ॥
ಸುರರು ಮಾನವರ ಕಂಡೆ ಸ್ತೋತ್ರ ಮಾಳ್ಪದ ಕಂಡೆ ।
ಉರಗಶಯನ ಮ್ಯಾಲೆ ಹಯವದನನ ಕಂಡು ಎನ್ನ ॥ 5 ॥
********
ರಾಗ ಬೃಂದಾವನಸಾರಂಗ ಆದಿತಾಳ
ಜನ್ಮ ಸಫಲವಾಯಿತು ॥ ಪ ॥
ಆದಿ ಅನಂತ ಜನಾರ್ದನನ ಕಂಡು , ಎನ್ನ ॥ ಅ.ಪ ॥
ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ ಅ -
ಗಮ್ಯ ಗೋಚರನೆಂದು ಸ್ತುತಿಸುತಿರೆ ॥
ಬ್ರಹ್ಮರುದ್ರಾದಿಗಳು ಇಂದ್ರ ಚಂದ್ರಾದಿಗಳು
ನಿರ್ಮಲ ಮೂರುತಿ ನಿಮ್ಮ ನಿಜವ ತೋರಿದ ಮೇಲೆ ॥ 1 ॥
ಚತುರಮುಖನು ಬಂದು ಪೃಥುವಿಯೊಳಗೆ ನಿಂದು
ಕ್ರತುಗಳ ಮಾಡಿ ಆಹುತಿ ಕೊಡಲು ॥
ಅತಿಗ್ರಾಸವಾಯಿತೆಂದು ಅನಲ ಬಂದು ಮೊರೆಯಿಡಲು
ದ್ವಿತೀಯ ಗ್ರಾಸಕ್ಕೆ ಕೈಯ ಒಡ್ಡಿ ನಿಂತದ್ದು ಕಂಡು ॥ 2 ॥
ಮೊದಲ ಬಾಗಿಲಲಿ ನಿಮ್ಮ ಮುಖಕಮಲವ ಕಂಡೆ
ಮುದದಿಂದ ಮಕರಕುಂಡಲ ಕಿರೀಟವ ಕಂಡೆ
ಭುಜದ್ವಯವನು ಕಂಡೆ ಶ್ರೀವತ್ಸ ಕೌಸ್ತುಭ ಕೊರಳ
ವೈಜಯಂತಿ ಮಾಲಿಕೆಗಳ ಕಂಡು ಎನ್ನ ॥ 3 ॥
ನಡುವಿನ ಬಾಗಿಲಲಿ ನಾಭಿಕಮಲವ ಕಂಡೆ
ಉದ್ಭವಿಸಿ ಮೆರೆವ ವಿರಿಂಚಿಯ ಕಂಡೆ
ಜಡಿವೊ ಪೀತಾಂಬರ ನಡುವಿನೊಡ್ಯಾಣವ
ಉಡಿಗೆಜ್ಜೆ ಮೇಲಿನ ಕಿರುಗೆಜ್ಜೆಗಳ ಕಂಡು ॥ 4 ॥
ಮೂರನೆ ಬಾಗಿಲಲಿ ಮುದ್ದು ಶ್ರೀಚರಣವು
ಶ್ರೀದೇವಿ ಭೂದೇವಿ ಸೇವೆಮಾಳ್ಪುದ ಕಂಡೆ
ಸುರರು ಮಾನವರ ಕಂಡೆ ಸ್ತೋತ್ರ ಮಾಳ್ಪುದ ಕಂಡೆ
ಉರಗಶಯನ ನಮ್ಮ ಹಯವದನನ ಕಂಡು , ಎನ್ನ ॥ 5 ॥
****
Janma sarthakavaitu | Janardhanananta padmanabhana kandu || p ||
Modalane baagilali ninna muddu mukhava kande | mudadinda kirita karna kundalava kande | muddu kaigala kande shrivatsa kaustubha kande | koralolu vaijayanti maaleya na kande || 1 ||
Eradane baagilali ninna naabhi kamalava kande | melaada holeva peetambaravannu kande | naduvina odyana holeva kanchiya dama | kirugejje modalaada valliya na kande || 2 ||
Moorane baagilali ninna muddu charanava kande | shreedevi bhudevi seve malpuda kande | suraru maanavarella stotra malpuda kande | uragashayana hayavadanana charanava na kande || 3 ||
***