ಕದವನಿಕ್ಕಿದ ಕಾರಣೇನೆ ಮುದದಿ ಕೇಳೆ ಮೋಹನಾಂಗಿ
ಸದನಕ್ಕಾಗಿ ಬಂದೆ ನಾನು ಸರಸವ್ಯಾತಕೆ ಸುಂದರಾಗಿ ಪ
ಇಂದು ನಾನು ಬಂದೆ ದ್ರೌಪದಿ
ಬಂದು ಬಾಗಿಲನ್ಹಾಕುವೋದು
ಚೆಂದವೇನೆ ಚಂದ್ರಮುಖಿಯೆ
ಬಂದು ಬಾಗಿಲು ತೆಗೆಯೆ ನೀನು 1
ಅಂಧಕಾರ ರಾತ್ರಿಯಲಿ
ಬಂದವರ್ಯಾರೆಂದು ಅರಿಯೆ
ನಿಂದು ಗುರುತೇನೆಂದು ಪೇಳಲು
ಬಂದು ಬಾಗಿಲು ತೆಗೆವೆ ನಾನು 2
ಕಂಡರಿಯೆ ಎನ್ನ ಪರಾಕ್ರಮ
ಖಾಂಡವವನವ ದಹಿಸಿದೆನೆ
ಅಂಬುಧಿಯಲ್ಲಾಡೊ ಮಚ್ಛÀನ್ವಲಿಸಿದ
ಗಾಂಡೀವಾರ್ಜುನರಾಯ ನಾನು 3
ಗಾಂಡೀವಾರ್ಜುನರಾಯನಾದರೆ
ದುಂಡು ಬಳೆ ಕಂಕಣಗಳಿಟ್ಟು
ಗೊಂಡ್ಯ ರಾಗಟೆ ಹೆರಳಲ್ಹಾಕಿ ನೀ
ಷÀಂಡರೂಪವ ಧರಿಸ್ಹೋಗೊ 4
ಕ್ಷೀರಸಾಗರದಲ್ಲೆ ತಾ ಮಂ-
ದರ ಪೊತ್ತಮೃತವನೆ ತಂದ
ಧೀರ ಕೂರ್ಮಗೆ ಮೈದುನಾದಂಥ
ಶೂರ ಫಲ್ಗುಣರಾಯ ನಾನೆ 5
ಫಲ್ಗುಣರಾಯನಾದರೇನೊ
ಸದ್ಗುಣ ಸಂಪನ್ನ ಬಿರುದು
ಭದ್ರದೇವಿಯ ಕದ್ದು ತರುವಾಗ
ಬುದ್ಧಿ ದಾರಲ್ಲಿಟ್ಟೆದ್ದಿರ್ಹೇಳೊ 6
ಪರಮೇಶ್ವರನ ಒಲಿಸಿಕೊಂಡು
ಪಾಶುಪತಾಸ್ತ್ರ ಪಡೆದೆ ನಾನು
ಪರಮ ಆಪ್ತ ವರಾಹನ ಕರುಣಕ್ಕೆ
ಪಾತ್ರನಾದಂಥ ಪಾರ್ಥರಾಯನೆ 7
ಪಾಶುಪತಾಸ್ತ್ರ ಪಡೆದರೇನು ದೇಶ-
ದೇಶ್ಯಾತ್ರೆತೀರ್ಥ ಚರಿಸಿ
ಆಸೆ ಬಿಡದೆ ಸನ್ಯಾಸಿಯಾದಂಥ
ಮೋಸಗಾರನೆ ಮನೆಗೆ ಪೋಗು 8
ಕೋಟಿ ದೈತ್ಯರ ಕೊಂದೆ ಎನ್ನಸರಿ-
ಸಾಟಿಯಾರೀ ಲೋಕದೊಳಗೆ ಆ-
ರ್ಭಟದವತಾರ ನಾರಸಿಂಹನೆ
ನೀಟಾದಭಕ್ತ ಕಿರೀಟಿಯಲ್ಲವೆ 9
ಕೋಟಿ ದೈತ್ಯರ ಕೊಂದು ಜೂಜಿ-
ನಾಟ ಸೋತ್ವನ ತೋಟ ತಿರುಗಿ
ಪಾಟುಬಟ್ಟು ವಿರಾಟನಲ್ಲೆ
ನಾ(ನ?)ಟರಾಟಕೆ ನಿಂತಿರ್ಯಾಕೊ 10
ಮಾತಿಗೆ ಮಾತಾಡೋರೇನೆ ಅ-
ಜಾತ ಶತ್ರುನನುಜ ನಾನು
ಭೂತಳವ ಬೇಡಿದ್ವಾಮನಗೆ
ದೂತ ನಾ ಶ್ವೇತೂವಾಹನನೆ 11
ಶ್ವೇತೂವಾಹನ ನಿಮ್ಮ ಸತಿಗೆ
ನಾಥರಿದ್ದೂ ಅನಾಥಳಂತೆ ಅ-
ಜÁ್ಞತದಲ್ಲಿ ಸುದೇಷ್ಣೆ ಸೇವೆಗೆ
ದೂತಿಯಾದ ಪ್ರಖ್ಯಾತಿ ದಾರದೊ 12
ಹೆತ್ತತಾಯಿ ಶಿರವನಳಿದ ಕ್ಷತ್ರೇ-
ರಂತಕ ಭಾರ್ಗವಗೆ
ನಿತ್ಯದಲಿ ನಿಜಸೇವಕ ಭೀ-
ಭತ್ಸುರಾಯ ನಾನಲ್ಲವೇನೆ 13
ಧೀರ ಭೀಭತ್ಸುರಾಯ ನಿನ್ನ
ನಾರಿಯ ಸಭೆಗೆಳೆದು ತಂದು
ಸೀರೆ ಸೆಳೆವಾಗ ಶೂರರಾದರೆ
ದಾರದಾರಂತೆ ನೋಡಿರ್ಯಾಕೊ 14
ಕಾಮ ಮೋಹಗಳಿಂದ ನಿನ್ನಲ್ಲೆ
ಪ್ರೇಮದಿ ನಾ ಬಂದೆನೀಗ
ರಾಮರಾಜÉ್ಞಗೆ ನಿಜ ಸೇವಕ-
ನಾದ ವಿಜಯರಾಯ ನಾನೆ 15
ವಿಜಯರಾಯ ನೀನ್ಹೌದೊ ತೇಜಿದಿ-
ಗ್ವಿಜಯಕೆನುತದರ್ಹಿಂದೆ ಪೋಗಿ
ಮಗನ ಕೈಯಿಂದ ವಧೆಯು ನೀತವೆ
ಮೊದಲೆ ಪರಾಜಿತನಾದಿರ್ಯಾಕೊ 16
ಶ್ರೇಷ್ಠರೊಳು ಮಹಾಶ್ರೇಷ್ಠ ನಾನೆ
ಅಸ್ತ್ರವಿದ್ಯದಲ್ಲಧಿಕನೆಂದು
ಕೃಷ್ಣಮೂರುತಿ ಒಲಿಸಿಕೊಂಡಂಥ
ಕೃಷ್ಣೆ ನಲ್ಲನೆ ಕೃಷ್ಣೆ ಕೇಳೆ 17
ಶ್ರೇಷ್ಠರೊಳು ಮಹಾಶ್ರೇಷ್ಠ ನಮ್ಮಣ್ಣ
ಕೃಷ್ಣ ಸಾರಥಿ ಆದ್ದರಿಂದ
ಹಸ್ತಿನಾವತಿ ಪಟ್ಟಣಾಳ್ವುದು
ಇಷ್ಟು ದಾರ ದಯದಿಂದ್ಹೇಳೊ 18
ಅಂಗನಾಮಣಿ ನಿನ್ನ ಅಂಗ-
ಸಂಗ ಬಯಸಿ ನಾ ಬಂದೆನೀಗ
ಅಂಗದ್ವಸ್ತ್ರವಬಿಟ್ಟ ಬೌದ್ಧಗೆ
ಸಖನು ನಾ ಸವ್ಯಸಾಚಿ ಅಲ್ಲವೆ 19
ಭುಜ ಪರಾಕ್ರಮಿ ಸವ್ಯಸಾಚಿ
ನಿನ್ನೆರಡು ಕೈದಡ್ಡಿನ್ಯಾತಕೇಳೊ
ದ್ವಿಜರ ಸುತರ ತಂದುಕೊಡದೆ
ಮೊದಲೆ ಮಾಡಿದ ಪ್ರತಿಜ್ಞವೇನೊ 20
ಅಂಜೋನಲ್ಲ ನಾನರಿಗಳಿಗೆ ಕಲಿ-
ಭಂಜನ ಕಲ್ಕ್ಯಾವತಾರಗೆ
ಕಂಜಚರಣಕ್ಕೆ ವಂದಿಸುವೆ ಧ-
ನಂಜಯ ನಾನಲ್ಲವೇನೆ 21
ಸೈಯೊ ನೀ ಧನಂಜಯರೇಯ
ಸುರಪತಿಗೆ ಪತ್ರವನೆ ಬರೆದು
ಶರದ ಪಂಜರ ಕಟ್ಟಿ ನೀ ಕುಂ-
ಜರವನಿಳಿಸಿದ ಕಾರಣೇನೊ 22
ನಿನ್ನ ಸರಿ ಮಾತಾಡುವೋರ
ಧನ್ಯರ ನಾ ಕಾಣೆನೆಲ್ಲು
ಪನ್ನಂಗವೇಣಿ ಎನ್ನ ನಾಮಗ-
ಳನ್ನು ಕೇಳಿದಿನ್ಯಾಕೆ ತಡೆವೆ 23
ದಶ ನಾಮಗಳ ಕೇಳಿ ದ್ರೌಪದಿ
last lines may be missing
****