by ಪ್ರಸನ್ನವೆಂಕಟದಾಸರು
ಕೃಷ್ಣ ಲೀಲಾನಂದ ನೋಡಿರೈ
ಕೃಷ್ಣಾಕೃತಿಯ ಚಂದ ನೋಡಿರೈ
ಕೃಷ್ಣ ಗೋಪಿಗಮ್ಮೆಂದ ನೋಡಿರೈ
ಕೃಷ್ಣ ಬಾಲಮುಕುಂದನ ನೋಡಿರೈ ಪ.
ಬಾಲರ ವಿಭು ಬೆಣ್ಣೆ ಮೊಸರ ಸವಿದು ಗೋಪಬಾಲೇರ ವಿಭಾಡಿಸಿ ಮೆಲುವಬಾಲರವಿಭಾ ನಖತೇಜನೊಳಾಡುವಬಾಲರ ವಿಭವವ ನೋಡಿರೈ 1
ಸಮವಾಯಿ ಕಾರಣನಲ್ಲಾ ಜಗಕೆ ತಾನುಸಮವಯ ಗೋವರ್ಗೆಳೆಯನಾದನುಸಮವೆ ಇಲ್ಲೆಶೋದೆನಂದರ ಭಾಗ್ಯ ಮಗನಾದಶಾಮಮೈಯವನ ಮುದ್ದು ನೋಡಿರೈ 2
ಕಣ್ಣಲ್ಲಲಸದೆ ವಿಶ್ವವ ಹೊರೆದಕಣ್ಣಿಲ್ಲೊಲಿದು ಕಟ್ಟಿಸಿಕೊಂಡನುಕಣ್ಣಲ್ಲಾಲಯವುಳ್ಳ ಪ್ರಸನ್ವೆಂಕಟೇಶನಕಣ್ಣಲಿ ಲಯವಿಟ್ಟು ನೋಡಿರೈ 3
****