ರಾಮನಾಮವ ನೆನೆ ಮನವೆ ಪ
ರಾಮ ಎಂದವನೆ ಧನ್ಯನೆಂದು
ಶ್ರುತಿತತಿಗಳು ಪೊಗಳುತಿರೆ ಅ
ತರುಣತನದಿ ದಿನ ದಾಟಿತು ಸುಮ್ಮನೆ
ಶರೀರದೊಳು ಸ್ವರವಾಡುತಲೆತರುಣಿ
ಸುತರು ಸಂಸಾರವೆಂಬ
ಶರಧಿಯೊಳಗೆ ಮುಳುಗಿರದೆ ಮನವೆ 1
ಬಗೆಬಗೆ ಜನ್ಮದಿ ಜನಿಸಿದೆ ನಾಳೆಗೆ
ಸಿಗುವುದೆ ನಿಜದಿಂ ಈ ಸಮಯ
ಮುಗುಧನಾಗಿ ಮತ್ತೆ ಜನಿಸಿ ಬರುವುದು
ಸೊಗಸು ಕಾಣುವುದೆ ಛಿ ಮನವೆ 2
ಚಿಂತೆಯನೆಲ್ಲ ಒತ್ತಟ್ಟಿಗಿಟ್ಟು
ಅಂತರಂಗದಲಿ ಧ್ಯಾನಿಸುತಕಂತುಪಿತ
ಕನಕಾದಿಕೇಶವನಎಂತಾದರೂ
ನೀ ಬಿಡಬೇಡ ಮನವೆ 3
****
just scroll down for other devaranama