ನಂಬಿದೆನೊ ನಂಬಿದೆನೊ ಅಂಬುಜಾಕ್ಷ
ತೊಂಬಲಿಗೆ ಹಂಬಲಿಸಿ ಹಾರೈಸಿದೆ ನಿನ್ನ ಪ
ಮೊದಲುಂಡ ಪಾಪದಲಿ ಕಳೆಗುಂದಿ ಕಳೆಗುಂದಿ
ಮುದದಿಂದ ನಿತ್ರಾಣನಾದೆನಯ್ಯಾ
ಪದುಮನಾಭನೆ ನಿನ್ನಭಯದೊಂಬಲನಿತ್ತು
ವದನ ಚೇತನನಾಗುವಂತೆ ದಯಮಾಡೊ 1
ವಿಷವ ಸೇವಿಸಿದ ತರುಣನಂತೆ
ಮೆಲವು ಭಾವಿಸದೆ ಬೀಳುತೀ ನೀ ನೆಲೆಗಾಣದೆ
ಬಿಸಿಜಾಕ್ಷ ನೀನೆ ಕೃಪಾಳು ಎಂದೆಂದಿಗೆ
ರಸ ಸುರಿವ ಸುರಿವ ಬಾಯದೊಂಬಲಾನಿತ್ತು ಸಲಹೊ2
ಆವದಾದರುವಲ್ಲೆ ಅನಿಮಿತ್ತ ಬಂಧು ಕೇಳು
ಜೀವವೇ ನಿನ್ನ ಪಾದದಾಧೀನವೋ
ಶ್ರೀವಧುರಮಣ ನಮ್ಮ ವಿಜಯವಿಠ್ಠಲ ನೀನೆ ದೇವ ಯನಗ
ಹುದು ತೊಂಬಲನಿತ್ತು ಪೊರಿಯೊ 3
*********
ತೊಂಬಲಿಗೆ ಹಂಬಲಿಸಿ ಹಾರೈಸಿದೆ ನಿನ್ನ ಪ
ಮೊದಲುಂಡ ಪಾಪದಲಿ ಕಳೆಗುಂದಿ ಕಳೆಗುಂದಿ
ಮುದದಿಂದ ನಿತ್ರಾಣನಾದೆನಯ್ಯಾ
ಪದುಮನಾಭನೆ ನಿನ್ನಭಯದೊಂಬಲನಿತ್ತು
ವದನ ಚೇತನನಾಗುವಂತೆ ದಯಮಾಡೊ 1
ವಿಷವ ಸೇವಿಸಿದ ತರುಣನಂತೆ
ಮೆಲವು ಭಾವಿಸದೆ ಬೀಳುತೀ ನೀ ನೆಲೆಗಾಣದೆ
ಬಿಸಿಜಾಕ್ಷ ನೀನೆ ಕೃಪಾಳು ಎಂದೆಂದಿಗೆ
ರಸ ಸುರಿವ ಸುರಿವ ಬಾಯದೊಂಬಲಾನಿತ್ತು ಸಲಹೊ2
ಆವದಾದರುವಲ್ಲೆ ಅನಿಮಿತ್ತ ಬಂಧು ಕೇಳು
ಜೀವವೇ ನಿನ್ನ ಪಾದದಾಧೀನವೋ
ಶ್ರೀವಧುರಮಣ ನಮ್ಮ ವಿಜಯವಿಠ್ಠಲ ನೀನೆ ದೇವ ಯನಗ
ಹುದು ತೊಂಬಲನಿತ್ತು ಪೊರಿಯೊ 3
*********