..by modalakallu sheshadasaru
ಶ್ರೀ ಮೊದಲಕಲ್ಲು ಶೇಷದಾಸರು
ಗುರುಗಳ ಮನದಿ ಕಂಡು ಧನ್ಯನಾದೆ ।
ಸಿರಿ ಅರಸನಾ ದಾಸರು-
ವಿರಾಯರಾಯರು ।। ಪಲ್ಲವಿ ।।
ಶ್ಯಾಮಸುಂದರ ಕಾಯ -
ನಾಮ ದ್ವಾದಶ ಮುದ್ರೆ ।
ವಾಮನ ರೂಪವ ಧರಿಸಿ -
ಕೋಮಲ ತುಳಸಿಯು ।
ಕಮಲಾಕ್ಷಿ ಮಣಿಗಳಿಂದ-
ವಿಮಲ ಚಿತ್ತದಿ ।
ಕಾಮನಯ್ಯನ ಸಾಮ-
ಗಾನದಿ ಪೊಗಳುವ | ಚರಣ |
*ಹಿಂದೆ ಪುರಂದರದಾಸರ -
ಕಂದನಾಗಿ ಪುಟ್ಟಿ ।
ತಂದೆ ವಾಕ್ಯವ ತಾಳಿ -
ಇಂದು ಧರಿಗೆ ಬಂದು ।
ಇಂದಿರೇಶನ ಚರಿತ್ರೆಯು -
ಕುಂದದಲೆ ಬೀರಿ ।
ಮಂದ ಮತಿಗಳಿಗೆ -
ಮಂದರಧರನ ತೋರಿದ ।। ಚರಣ ।।
ಗುರುಗಳ ಹೃದಯವಾಸ-
ಗುರುವಿಜಯವಿಠ್ಠಲನ ।
ಸಿರಿ ಪಾದ ಪದುಮ -
ಕರುಣವ ತೋರಿಸಿ ।
ಸಾರ ಹೃದಯದಿ -
ಹರಿಯ ಕೊಂಡಾಡಿಸಿ ಎರಗೆ ।
ಪರಮ ಸುಖದೊಳೀ-
ರುವಂತೆ ಮಾಡಿದ ।। ಚರಣ ।।
****