Showing posts with label ತುಂಗಾತೀರದಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ abhinava janardhana vittala TUNGA TEERADI NINTA SUYATIVARANYARE PELAMMAYYA. Show all posts
Showing posts with label ತುಂಗಾತೀರದಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ abhinava janardhana vittala TUNGA TEERADI NINTA SUYATIVARANYARE PELAMMAYYA. Show all posts

Friday 17 December 2021

ತುಂಗಾತೀರದಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ ankita abhinava janardhana vittala TUNGA TEERADI NINTA SUYATIVARANYARE PELAMMAYYA






ರಾಗ ಮೋಹನ 



kruti by abhinava janardhana vittala dasa.

ತು೦ಗಾತೀರದಿ ನಿ೦ತ ಸುಯತಿವರನ್ಯಾರೇ ಪೇಳಮ್ಮಯ್ಯ
ಸ೦ಗೀತಪ್ರಿಯ ಮ೦ಗಳಸುಗುಣಿ ತರ೦ಗ ಮುನಿಕುಲೋತ್ತು೦ಗ ಪೇಳಮ್ಮ

ಚಲುವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯ
ಜಲಜಮಣಿಯು ಕೊರಳೊಳು ತುಳಸಿಮಾಲೆಗಳು ಪೇಳಮ್ಮಯ್ಯ
ಸುಲಲಿತಕಮ೦ಡಲದ೦ಡವನ್ನೆ ಧರಿಸಿಹನು ಪೇಳಮ್ಮಯ್ಯ
ಖುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ || ೧ ||

ಸು೦ದರಚರಣರವಿಂದ ಸುಭಕುತಿಯಲಿ೦ದ ಪೇಳಮ್ಮಯ್ಯ
ವ೦ದಿಸಿ ಸ್ತುತಿಸುವ ಭೂಸುರರಿಂದ ಪೇಳಮ್ಮಯ್ಯ
ಚ೦ದದಿಲ೦ಕೃತಿಯಿಂದ ಶೋಭಿಸುವ ಆನಂದ ಪೇಳಮ್ಮಯ್ಯ
ಹಿ೦ದೆ ವ್ಯಾಸಮುನಿಯೆ೦ದೆನಿಸಿದ ಕರ್ಮ೦ದಿಗಳರಸಘದಿಂದ ರಹಿತನೆ || ೨ ||

ಅಭಿನವ ಜನಾರ್ಧನವಿಠ್ಠಲನ ಧ್ಯಾನಿಸುವ ಪೇಳಮ್ಮಯ್ಯ
ಅಭಿವ೦ದಿತರಿಗೆ ಅಖಿಲಾರ್ಥಗಳ ಸಲ್ಲಿಸುವ ಪೇಳಮ್ಮಯ್ಯ
ನಭಮಣಿಯ೦ದದಿ ಭೂಮಿಯಲ್ಲಿ ರಾಜಿಸುವ ಪೇಳಮ್ಮಯ್ಯ
ಶುಭಗುಣನಿಧಿ ಶ್ರೀ ರಾಘವೇ೦ದ್ರಯತಿ ಅಬುಜ ಭವಾ೦ಡದೊಳು ಪ್ರಬಲ ಕಾಣಮ್ಮ || ೩ ||
***

.tuMgA teeradi niMta suyativaranyAre pELammaYya
saMgeetapriya maMgalasuguNataraMga munikulOttuMga kANamma ||

cheluva sumukha phaNeyalli tilaka nAmagaLu nODamma
jalamaNiya koraLalli tulasimAlegaLu pELamma
sulalita kamaMDalu daMDavane dharisihane nODamma
kShulla hiraNyakanalli janisida prahlAdanu tAnillihanamma ||1||

suMdara charaNAraviMdake bhakutiyaliMda nODamma
vaMdisi stutisuva bhUsuravRuMda nODamma
chaMdadalaMkRutiyiMda shObhisuvAnaMda nODamma
hiMde vyAsamuniyeMdenisida karmaMdigaLa rasaghadiMda rahitane ||2||

abhinava janArdhana viThalana dhyAnisuva nODamma
abhivaMdisidavarige akhilArthava sallisuva nODamma
nabhamaNiyaMdadi vividhadi shObhisuva nODamma
shubhaguNanidhi rAghavEMdra guru abujabhavAMDadi prabala kANamma ||3||
***



ತು೦ಗಾತೀರದಿ ನಿ೦ತ ಸುಯತಿವರನ್ಯಾರೇ – ಪೇಳಮ್ಮಯ್ಯ ||ಪ||
ಸ೦ಗೀತಪ್ರಿಯ ಮ೦ಗಳಸುಗುಣ ತರ೦ಗ 
ಮುನಿಕುಲೋತ್ತು೦ಗ ಕಾಣಮ್ಮ ||ಅ.ಪ.||

ಚಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು – ನೋಡಮ್ಮಯ್ಯ
ಜಲಜಮಣಿ ಕೊರಳಲಿ ತುಳಸಿಮಾಲೆಗಳು – ನೋಡಮ್ಮಯ್ಯ
ಸುಲಲಿತಕಮ೦ಡಲದ೦ಡವ ಧರಿಸಿಹನ್ಯಾರೇ – ಪೇಳಮ್ಮಯ್ಯ
ಖಳ ಹಿರಣ್ಯಕನಲ್ಲಿ ಜನಿಸಿದ ಪ್ರಲ್ಹಾದನು ತಾನಿಲ್ಲಿಹನಮ್ಮ  || ೧ ||

ಸು೦ದರಚರಣದ್ವ೦ದ್ವ ಸುಭಕುತಿಗಳಿ೦ದ – ನೋಡಮ್ಮಯ್ಯ
ವ೦ದಿಸಿ ಸ್ತುತಿಸುವ ಭೂಮಿಸುರರಿ೦ದ – ನೋಡಮ್ಮಯ್ಯ
ಚ೦ದದಿ೦ದಲ೦ಕೃತರಾಗಿ ಶೋಭಿಸುವರ – ನೋಡಮ್ಮಯ್ಯ
ಹಿ೦ದೆ ವ್ಯಾಸಮುನಿಯೆ೦ದೆನಿಸಿದ 
ಕರ್ಮ೦ದಿಗಳರಸ ಯತೀ೦ದ್ರ – ಕಾಣಮ್ಮ || ೨ ||

ಅಭಿನವ ಜನಾರ್ಧನವಿಠ್ಠಲನ ಧ್ಯಾನಿಸುವ – ನೋಡಮ್ಮಯ್ಯ
ನಭಮಣಿಯ೦ದದಿ ಭೂಮಿಯಲ್ಲಿ ರಾಜಿಸುವ – ನೋಡಮ್ಮಯ್ಯ
ಅಭಿವ೦ದಿತರಿಗೆ ಅಖಿಳಾರ್ಥಗಳ ಸಲ್ಲಿಸುವ – ನೋಡಮ್ಮಯ್ಯ


ಶುಭಗುಣನಿಧಿ ಶ್ರೀ ರಾಘವೇ೦ದ್ರಗುರು 
ಅಬ್ಜಭವಾ೦ಡದೊಳು ಪ್ರಬಲ ಕಾಣಮ್ಮ || ೩ ||
*********

another version

ತುಂಗಾ ತೀರದಿ ನಿಂತ ಸುಯತಿವರನ್ಯಾರೆ 
ಪೇಳಮ್ಮಯ್ಯ...ಪೇಳಮ್ಮಯ್ಯ.....
ಪೇಳಮ್ಮಯ್ಯ. ....ಪೇಳಮ್ಮಯ್ಯ
ಸಂಗೀತಪ್ರಿಯ ಮಂಗಳ 
ಸುಗುಣಾತರಂಗ ಮುನಿಕುಲೋತುಂಗ
ಕಾಣಮ್ಮ.....ಕಾಣಮ್ಮ. .....ಕಾಣಮ್ಮ. ....ಕಾಣಮ್ಮ. ...  
                      ||ತುಂಗಾ ತೀರದಿ||
          ಚೆಲುವ ಸುಮುಖ ಫಣಿಯಲಿ 
ತಿಲಕ ನಾಮಗಳು ನೋಡಮ್ಮಯ್ಯ...ನೋಡಮ್ಮಯ್ಯ
ಜಲಜಮಣಿಯು ಕೊರಳಲಿ ತುಳಸಿ 
ಮಾಲೆಗಳು ನೋಡಮ್ಮಯ್ಯ. ..ನೋಡಮ್ಮಯ್ಯ
ಸುಲಲಿತಕಮಂಡಲದಂಡವ ಧರಿಸಿಹನ್ಯಾರೆ 
ಪೇಳಮ್ಮಯ್ಯ. ...ಪೇಳಮ್ಮಯ್ಯ. ...
ಖಳಹಿರಣ್ಯಕನಲ್ಲಿ ಜನಿಸಿದ 
ಪ್ರಹ್ಲಾದನು ತಾನೆಲ್ಲಿಹನಮ್ಮ
                                ||ತುಂಗಾ ತೀರದಿ||

ಸುಂದರಚರಣಾರವಿಂದ 
ಶುಭಕುತಿಗಳಿಂದ  ನೋಡಮ್ಮಯ್ಯ...ನೋಡಮ್ಮಯ್ಯ....
ವಂದಿಸಿ ಸ್ತುತಿಸುವ ಭೂಮಿ ಸುರರಿಂದ 
ನೋಡಮ್ಮಯ್ಯ. ..ನೋಡಮ್ಮಯ್ಯ
ಚಂದದಿಂದ ಅಲಂಕ್ರತರಾಗಿ 
ಶೋಭಿಸುವವರ ನೋಡಮ್ಮಯ್ಯ. ...ನೋಡಮ್ಮಯ್ಯ...
ಹಿಂದೆ ವ್ಯಾಸಮುನಿಯೆಂದೆನಿಸಿದ 
ಕರ್ಮಂದಿಗಳರಸ ಯತೀಂದ್ರ 


ಕಾಣಮ್ಮ. ...ಕಾಣಮ್ಮ....ಕಾಣಮ್ಮ. ....ಕಾಣಮ್ಮ.  ||
ತುಂಗಾ ತೀರದಿ||
*****