Showing posts with label ಕೇಶವನೊಲುಮೆಯು ಆಗುವ ತನಕ purandara vittala. Show all posts
Showing posts with label ಕೇಶವನೊಲುಮೆಯು ಆಗುವ ತನಕ purandara vittala. Show all posts

Wednesday, 4 December 2019

ಕೇಶವನೊಲುಮೆಯು ಆಗುವ ತನಕ purandara vittala

ಪುರಂದರದಾಸರು
ಕೇಶವನೊಲುಮೆಯು ಆಗುವ ತನಕ ಹರಿದಾಸರೊಳಿರು ಮನವೆಕ್ಲೇಶ ಪಾಶಗಳ ಹರಿದು ವಿಳಾಸದಿ ದಾಸರ ನುತಿಗಳ ಪೊಗಳುತ ಮನದೊಳು ಪ.

ಮೋಸದಿ ಜೀವಿಯಘಾಸಿ ಮಾಡಿದ ಫಲಕಾಶಿಗೆ ಹೋದರೆ ಹೋದೀತೆದಾಸರ ಕರೆ ತಂದು ಕಾಸು ಕೊಟ್ಟ ಫಲ ಲೇಸಾಗದೆ ಸಸಿನಿದ್ದೀತೆಭಾಷೆಯ ಕೊಟ್ಟು (ನಿ) ರಾಸೆಯ ಮಾಡಿದಫಲ ಮೋಸವು ಮಾಡದೆ ಬಿಟ್ಟೀತೆಶಶಿವದನೆಯ ಅಧರಾಮೃತ ಸೇವಿಸಿ ಸುಧೆಯೆಂದಡೆ ನಿಜವಾದೀತೆ 1

ಕನಕದ ಪಾತ್ರದ ಘನತೆಯ ಪ್ರಭೆಗಳು ಶುನಕನಮನಸಿಗೆ ಸೊಗಸೀತೆಹೀನ ಮನುಜನಿಗೆ ಜಾÕನವ ಭೋಧಿಸೆ ಹೀನ ವಿಷಯಗಳು ಹೋದಿತೇಮಾನಿನಿ ಮನಸು ನಿಧಾನವು ಇಲ್ಲದಿರೆಮಾನಭಿಮಾನ ಉಳಿದೀತೆಭಾನುವಿಕಾಸನ ಭಜನೆಯ ಮಾಡದ ದೀನಗೆ ಮುಕುತಿಯು ದೊರಕೀತೆ 2

ಸತ್ಯದ ಧರ್ಮವ ನಿತ್ಯವು ಭೋಧಿಸೆ ತೊತ್ತಿನ ಮನಸಿಗೆ ಸೊಗಸೀತೆತತ್ವದ ಅರ್ಥ ವಿಚಿತ್ರದಿ ಪೇಳಲು ಕತ್ತೆಯ ಮನಸಿಗೆ ತಿಳಿದೀತೆಪುತ್ಥಳಿ ಬೊಂಬೆಯ ಚಿತ್ರದಿ ಬರೆದಿರೆ ಮುತ್ತುಕೊಟ್ಟರೆ ಮಾತಾಡೀತೆಕತ್ತುರಿ ತಿಲಕವನೊತ್ತಿ ಫಣೆಯೊಳಿಡೆ ಅರ್ತಿಯುತೋರದೆ ಇದ್ದೀತೆ 3

ನ್ಯಾಯವ ಬಿಟ್ಟು ಅನ್ಯಾಯ ಪೇಳುವ ನಾಯಿಗೆ ನರಕವು ತಪ್ಪೀತೆತಾಯಿ ತಂದೆಗಳ ನೋಯಿಸಿದ ಅನ್ಯಾಯಿಗೆ ಮುಕ್ತಿಯು ದೊರಕೀತೆಬಾಯಿ ಕೊಬ್ಬಿನಿಂದ ಬೈಯುವ ಮನುಜಗೆ ಘಾಯವುಆಗದೆ ಬಿಟ್ಟೀತೆಮಾಯಾವಾದಗಳ ಕಲಿತಾ ಮನುಜಗೆ ಕಾಯಕಷ್ಟ ಬರದಿದ್ದೀತೆ 4

ಸಾಧು ಸಜ್ಜನರನು ಬಾಧಿಸಿದಾ ಪರವಾದಿಗೆ ದೋಷವು ತಪ್ಪೀತೆಬಾಧಿಸಿ ಬಡವರ ಅರ್ಥವ ಒಯ್ವವಗೆ ವ್ಯಾಧಿ ರೋಗಗಳು ಬಿಟ್ಟೀತೆಬದ್ದ ಮನುಜ ಬಹು ಕ್ಷುದ್ರವ ಕಲಿತರೆಬುದ್ದಿ ಹೀನನೆಂಬುದು ಹೋದೀತೆಕದ್ದು ಒಡಲ ತಾ ಪೊರೆವನ ಮನೆಯೊಳಗೆಇದ್ದುದು ಹೋಗದೆ ಇದ್ದೀತೆ 5

ಅಂಗದ ವಿಷಯಂಗಳನು ತೊರೆದಾತಗೆ ಅಂಗನೆಯರಬಗೆ ಸೊಗಸೀತೆಸಂಗ ಸುಖಂಗಳು ಹಿಂಗಿದ ಮನುಜಗೆ ಶೃಂಗಾರದ ಬಗೆ ಸೊಗಸೀತೆಇಂಗಿತವರಿಯುವ ಸಂಗ ಶರೀರ ವಜ್ರಾಂಗಿಯಾಗದೆ ಇದ್ದೀತೆಮಂಗಳ ಮಹಿಮನ ಅಂಘ್ರಿಯ ಕಾಣದ ಭಂಗಗೆ ಮುಕ್ತಿಯು ದೊರಕೀತೆ 6

ಕರುಣಾಮೃತದಾ ಚರಣವ ಧರಿಸಿದ ಪರಮಗೆ ಸರಳಿ ಬಂದೀತೆಕರಣ ಪಾಶದುರವಣೆ ತೊರೆವಾತಗೆ ಶರಣರ ಪದ್ಧತಿ ತಪ್ಪೀತೆಆರುಶಾಸ್ತ್ರವನು ಮೀರಿದ ಯೋಗಿಗೆತಾರಕ ಬ್ರಹ್ಮವು ತಪ್ಪೀತೆವರದ ಪುರಂದರವಿಠಲನ ಚರಣಸ್ಮರಿಸುವವನಿಗೆ ಸುಖ ತಪ್ಪೀತೆ * 7
******