ಕಾಖಂಡಕಿ ಶ್ರೀ ಕೃಷ್ಣದಾಸರು
ಮನೋದಣಿಯಾ ಕುಲಮಣಿಯಾ ಪ
ಎಳೆಬಿಸಿಲೊಳು ಥಳ ಥಳಿಸುವಾ ಬೆಳಗಿನಾ| ಬಳದ ಒಬ್ಬುಳಿಯಂತೆ ದಿನಮಣಿಯಾ| ಕಳೆಶತ ಮಡಿಯೊಳು ಹೊಳೆವ ರನ್ನಮುಕುಟಾ| ಝಳ ಝಳಿಸುವ ರಳ ಕಾವಳಿ ದೋರಣಿಯಾ 1
ಚಲಾಚಲ ಭೂತಾವಳಿಗಳ ಸಲಹುವ ಭ್ರೂಲಲಿತ ಮೃಗಮದಾಂಕಿತದ ಫಣಿಯಾ| ವಿಮಲತರ ಕಮಲದೆಸಳ ಸುಗಂಗಳ| ನಾಸಿಕ ಸಂಪಿಗಿ ನೆನಿಯಾ 2
ಎಳೆನಗೆ ಚುಬುಕಾಗ್ರ ಚೆಲುವಾ ಕುಂದರದನಾ| ಇಳೆಯೊಳು ಕಾಣೆ ಕುಂಡಲಕ ಎಣಿಯಾ| ಕದಪು ವದನ ಮೋಹನಾರಾಯ| ಒಲಿವ ಮಹಿಪತಿ ಜನ ಪ್ರಭು ಗುಣಖಣಿಯಾ 3
***