Showing posts with label ಅದರಿಂದೇನು ಫಲ ಇದರಿಂದೇನು ಫಲ purandara vittala. Show all posts
Showing posts with label ಅದರಿಂದೇನು ಫಲ ಇದರಿಂದೇನು ಫಲ purandara vittala. Show all posts

Wednesday, 4 December 2019

ಅದರಿಂದೇನು ಫಲ ಇದರಿಂದೇನು ಫಲ purandara vittala

ರಾಗ ನಾದನಾಮಕ್ರಿಯ ಆದಿ ತಾಳ

ಅದರಿಂದೇನು ಫಲ ಇದರಿಂದೇನು ಫಲ, ನಮ್ಮ
ಪುರಂದರ ವಿಠಲನ ನಾಮವ ನೆನೆಯದೆ ||ಪ||

ಹೃದಯ ಕಮಲವನು ತೊಳೆಯಲಾರದೆ ವ್ಯರ್ಥ
ಉದಯಾಸ್ತಮಾನ ನೀರೊಳು ಮುಳುಗುವರು
ಅದಗಿಂತ ಸರ್ವದಾ ನೀರೊಳಗಿರುತಿಪ್ಪ
ಮುದಿಕಪ್ಪೆ ಮಾಡಿದ ತಪ್ಪೇನಯ್ಯ

ಹಲವು ಕಾಲ ಕಲ್ಲು ನೀರೊಳಗಿದ್ದರೇನು
ಬಲು ನೆನೆದಮೃತಶಿಲೆಯಾಗುವುದೆ
ಕರದಲಿ ಜಪ ಮಾಲೆ ಮಣಿಗಳನೆಣಿಸುತ
ಪರನಿಂದೆ ಬಾಯಲಿ ಮಾಡುವರಯ್ಯ

ಸ್ನಾನವ ಮಾಡುವರು ಆಸನ ಹಾಕುವರು
ಮೌನದಿ ಚಪ್ಪಾಳಿಟ್ಟು ಹಕ್ಕಿ ಬೆದರುವಂತೆ
ಕಣ್ಣನು ಮುಚ್ಚುವರು ಮೂಗನ್ನೆ ಹಿಡಿವರು
ಚೆನ್ನಾಗಿ ಮನವ ನಿಲ್ಲಿಸಲರಿಯರು ವ್ಯರ್ಥ

ನೇಮವನು ತಾಳುವರು ದಾನವ ಮಾಡುವರು
ಕಾಮಕ್ರೋಧ ಮದ ಮತ್ಸರ ಬಿಡದೆ ಇಂಥಾ
ನಾಯಿ ಕುನ್ನಿಗಳ ಕಂಡೊಳಗಿಟ್ಟುಕೊಂಡರೆ
ಕಾಶಿಯಲಿ ಮುಳುಗಿದ ಫಲವೇನಯ್ಯ

ಮೂರು ಜೋಡಿ ವನಮಾಲೆಯ ಜೋಗಿಣಿಯ
ಕೊರಳೊಳು ಕವಡೆಯ ಸರದಂತೆ
ಮೂರಾರು ಪುರಾಣ ತಿರುವಿ ಹಾಕುವರು
ಮಾರಪಿತನ ಮನಮುಟ್ಟಿ ಭಜಿಸದೆ ವ್ಯರ್ಥ

ಹಸಿವಾಯಿತೇಳು ದೇವರ ತೊಳೆಯೆಂಬರು
ಹಸನಾಗಿ ಮನಮುಟ್ಟಿ ಪೂಜಿಸರು
ಹೊಸ ಹಾವಿನ ಬುಟ್ಟಿಯಂತೆ ಮುಂದಿಟ್ಟುಕೊಂಡು
ವಸುಧೆಯೊಳ್ ಗಾರುಡಿಯಾಟವಾಡುವರು

ಪರಧನ ಪರಸತಿ ಪರನಿಂದೆಗಳುಕುತ
ತೊರೆಯೊಳು ಮಿಂದರೆ ದುರಿತ ಪೋಗುವುದೆ
ಸರುವವ ತೊರೆದು ಹರಿಯ ಧ್ಯಾನ ಮಾಡಲು
ವರವ ಕೊಡುವ ನಮ್ಮ ಪುರಂದರ ವಿಠಲ ||
***


pallavi

adarindEnu phala idarindEnu phala namma purandara viTTlana nAmava neneyade

caraNam 1

hrdaya kamalavanu toLeyalArade vyartta udayAstamAna nIroLu muLuguvaru
adaginta sarvadA nIroLagirutippa mudhikappe mADida tappEnayya

caraNam 2

halavu kAla kallu nIroLagiddarEnu balu nenedamrta shileyAguvude
karadali japa mAle maNIgaLaneNisuta para ninde bAyali mADuvarayya

caraNam 3

snAnava mADuvaru Asana hAkuvaru kAma krOdha mada matsara biDade inthA
nAyi kunnigaLa kaNDoLagiTTu koNDare kAshiyali muLugida balavEnayya

caraNam 4

mUru jODi vanamAleya jOgiNiya koraLoLu kavaDeya saradante
mUrAru purANa tiruvi hAkuvaru mArapitana manamuTTi bhajisade vyartta

caraNam 5

hasivAyidELu dEvara doLeyembaru hasanAgi manamuTTi pUjisaru
hosa hAvina buTTiyante mundiTTu koNDu vasudeyoL gAruDiyADavADuvaru

caraNam 6

para dhana para sati para nindegaLukuta toreyoLu mindhare durita pOguvudu
saruvava toredu hariya dhyAna mADalu varava koDuva namma purandara viTTala
***