ರಾಜತಾದ್ರಿ ನಿಲಯನ | ರಜನೀಶ ಧರನತೋರೆ ಪಾರ್ವತಿಯೆ||pa||
ಪಂಚಾನನ ಶಂಕರನ | ಶ್ರೀ ಹರಿಮಂಚಪದವ ಪಡೆದವನ
ಪಂಚಬಾಣ ಮದಹರನ ಉರುವಿರಂಚಿ ಕುವರ ದೂರ್ವಾಸ ಶುಕನ ತೋರೆ ಪಾರ್ವತಿಯೆ ||1||
ನಂದಿಸುಶ್ಯಂದನ ಶಿವನ ಗರಳಕಂಧರ ತ್ರಿಪುರಾಂತಕನ
ಮಂದಾಕಿನಿಧರ ಭವನ ಸುರವೃಂದ ವಿನುತ ನಗಚಾಪಭವನ ತೋರೆ ಪಾರ್ವತಿಯೆ||2||
ಸಾಮಜ ಚರ್ಮಾಂಬರನ | ಶುಭಕಾಮಿತ ಫಲದಾಯಕ
ನವಾಮದೇವ ಮುನಿಸುತನ | ಶ್ರೀವರಶಾಮಸುಂದರನ ಸುಖನ ತೋರೆ ಪಾರ್ವತಿಯೆ ||3||
*******