Showing posts with label ಕೊಟ್ಟು ಹೋಗೊ ಹೋಗೆನ್ನ ಎನ್ನ ಸಾಲವ purandara vittala KOTTU HOGO HOGENNA ENNA SAALAVA. Show all posts
Showing posts with label ಕೊಟ್ಟು ಹೋಗೊ ಹೋಗೆನ್ನ ಎನ್ನ ಸಾಲವ purandara vittala KOTTU HOGO HOGENNA ENNA SAALAVA. Show all posts

Saturday, 4 December 2021

ಕೊಟ್ಟು ಹೋಗೊ ಹೋಗೆನ್ನ ಎನ್ನ ಸಾಲವ purandara vittala KOTTU HOGO HOGENNA ENNA SAALAVA



ಕೊಟ್ಟು ಹೋಗೆನ್ನ ಸಾಲವ , ಕಣ್ಣ
ಬಿಟ್ಟರಂಜುವನಲ್ಲ ಹೊರುಕಲ್ಲ ಕೃಷ್ಣ ||ಪ||

ಕಾಲ ತೂಗಿ ಭೂಮಿ ದಾಡೆಯೊಳಿಟ್ಟರೆ
ಮೇಲೆ ನೆಗೆದು ಬಾಯಿ ಬಿಟ್ಟರೆ
ಏಳು ವರ್ಷದ ಬಡ್ಡಿ ಮೂಲ ಸಹಿತವಾಗಿ
ತಾಳುವನಲ್ಲೇಳೋ ತಿರುಕ ಮುಂಡಾಳಿ ||

ಕೊರಳಗೊಯಿಕ ಪೂರ್ವ ಸಾಲವ ಕೊಡದೆ
ತಿರುಗೋದು ವನವನ ಉಚಿತವೆ
ಎರಡೇಳು ವರ್ಷಕ್ಕೆ ಎನಗೆ ನೀ ಸಿಕ್ಕಿದೆ
ಒರಳಿಗೆ ಕಟ್ಟದೆ ಬಿಡುವೆನೆ ಕಳ್ಳ ||

ಬತ್ತಲೆ ನಿಂತರೂ ಬಿಡುವೆನೆ, ಬೆ
ನ್ಹತ್ತಿ ನಿನಗೆ ಸದಾ ತಿರುಗುವೆ
ಹತ್ತಿದ ಕುದುರೆ ಸಹಿತವಾಗಿ ಹಿಡಿತಂದು
ಚಿತ್ತಕ್ಕೆ ಕಟ್ಟುವೆ ಪುರಂದರವಿಠಲ ||
***

ರಾಗ ಶಂಕರಾಭರಣ ಅಟತಾಳ (raga tala may differ in audio)

pallavi

koTTu hOganna sAlava kanNa biTTaranjuvanalla horu kalla krSNa

caraNam 1

kAla tUgi bhUmi dEDeyoLiTTare mEle negedu bAyi biTTare
Elu varSada baDDi mUla sahitavAgi tALuvanellELO tiruga muNDALi

caraNam 2

koraLa gOyika pUrva sAlava koDade tirugOdu vana vana ucitava
eraDELu varuSakke enage nI sikkide oraLige kaTTade biDuvene kaLLa

caraNam 3

battale nintaru biDuvene benhatti ninage sadA tiruguve
hattida kudure sahitavAgi hiDitandu cittakke kaTTuve purandara viTTala
***

ಕೊಟ್ಟು ಹೋಗೊ ಎನ್ನ ಸಾಲವ-ಕಣ್ಣ-|
ಬಿಟ್ಟರಂಜುವನಲ್ಲ ಹೊರು ಕಲ್ಲ ಕೃಷ್ಣ ಪ

ಕಾಲನೂರಿ ಅಡಿಯಿಟ್ಟರೆ-ಭೂ-|ಪಾಲನಾಣೆ ನರಸಿಂಗನೆ ||ಏಳು ವರ್ಷ ಬಡ್ಡಿ ಮೂಲಸಹಿತವಾಗಿ |ತಾಳುವನಲ್ಲವೊ ತಿರುಕ ಹಾರುವನೆ 1

ಕೊರಳುಗೊಯ್ಕ ನೀನು ಸಾಲವ ತೆಗೆದು |ತಿರುಗುವುದುಚಿತವೆ ವನವನವ ||ಎರಡೇಳು ವರ್ಷಕೆ ಎನಗಿಂದು ಸಿಕ್ಕಿದೆ |ಒರಳಿಗೆ ಕಟ್ಟದೆ ಬಿಡುವೆನೆ ಕೃಷ್ಣ 2

ಬತ್ತಲೆ ನಿಂತರೂ ಬಿಡುವೆನೆ ನಿನ್ನ |ಉತ್ತಮ ಗುಣಗಳ ತೋರಿದೆ ||ಹತ್ತಿದ್ದ ಕುದುರೆ ಸಹಿತವಾಗಿ ಹಿಡಿತಂದು |ಚಿತ್ತದಿ ಕಟ್ಟುವೆ ಪುರಂದರವಿಠಲ 3
******