Showing posts with label ಜಯಪತ್ರವ ತಾರೆ ಜಾಣೆಮುಂದಕೆ ಬಾರೆವೈಭವದಿ ramesha. Show all posts
Showing posts with label ಜಯಪತ್ರವ ತಾರೆ ಜಾಣೆಮುಂದಕೆ ಬಾರೆವೈಭವದಿ ramesha. Show all posts

Monday, 11 November 2019

ಜಯಪತ್ರವ ತಾರೆ ಜಾಣೆಮುಂದಕೆ ಬಾರೆವೈಭವದಿ ankita ramesha

by ಗಲಗಲಿಅವ್ವನವರು
ಜಯಪತ್ರವ ತಾರೆ ಜಾಣೆಮುಂದಕೆ ಬಾರೆವೈಭವದಿ ಆಣಿಯಿಟ್ಟುಓಡಿದ್ಯಾತಕೆ ನೀರೆ ಪ

ಬಿಂಕಬಿಡಿಸಿಕೊಂಡೆವೆಂದುದ್ರೌಪತಿ ಶಂಕಿಸಿಕೊಂಡೆ ನೀರೆಪಂಕಜಾಕ್ಷಿ ರುಕ್ಮಿಣಿ ಮುಂದೆಕಿಂಕರಳೆನ್ನು ಬಾರೆ ನೀರೆ 1

ಸೋಗೆಗಣ್ಣಿನ ಭದ್ರೆ ನೀನುಆಣಿಇಟ್ಟ ಬಗೆಯೆ ನಮಗೆನಾಗವೇಣಿ ರುಕ್ಮಿಣಿ ಮುಂದೆಮೂಗಿನ ಗೆರೆಯ ತೆಗಿಯೆ 2

ಇಟ್ಟ ಆಣೆತಪ್ಪಿಗೆಕೈಯ ಕಟ್ಟಿಕೊಂಡು ಬಾರೆಕೊಟ್ಟು ಬಿರುದು ಸೋತೆವೆಂದುಅಟ್ಟಾಸದಲಿ ಸಾರೆ 3

ಪಂಥ ಕಳೆದುಕೊಂಡಿರೆಂದುಎಂಥ ನಗುತಾರಲ್ಲಇಂಥಮಾನಭಂಗವಾಗಿ ನಿಂತಿರ್ಯಾತಕೆ ಇಲ್ಲೆನೀವು ಕುಳಿತಿರ್ಯಾತಕೆ ಇಲ್ಲೆ 4

ಸೋತೆವಮ್ಮ ನಿಮಗೆರಮಿನಾಥನರಸಿಗೆ ಎಂದುರುಕ್ಮಿಣಿಗೆ ನೀತಿಲೆಜಯಪತ್ರಕೊಟ್ಟು ದ್ರೌಪತಿ ಎರಗಿದಳು 5
*******