Showing posts with label ರಾಘವೇಂದ್ರ ಗುರುರಾಯ ರಮಣೀಯ vijaya vittala. Show all posts
Showing posts with label ರಾಘವೇಂದ್ರ ಗುರುರಾಯ ರಮಣೀಯ vijaya vittala. Show all posts

Wednesday, 16 October 2019

ರಾಘವೇಂದ್ರ ಗುರುರಾಯ ರಮಣೀಯ ankita vijaya vittala

ವಿಜಯದಾಸ
ರಾಘವೇಂದ್ರ ಗುರುರಾಯ ರಮಣೀಯ ಕಾಯ
ಭೃಂಗ ಭವ ಭಂಗ ಪ

ನೋಡಿದೆ ನಿಮ್ಮ ಮಹಿಮೆಯ ಹಾಡಿ ಪಾಡುವೆನೊ ನಿತ್ಯ
ಆಡಿ ಕೊಂಡಾಡಲು ಬಲು ಗೂಢವಾಗಿದೆ
ನಾಡಿನೊಳಗೆ ವೊಮ್ಮೆ ಸ್ಮರಣೆ ಮಾಡಿದವ ಧನ್ಯ ಎನ್ನು
ಮೂಢ ಬುದ್ಧಿಯನು ಬಿಡಿಸು ಕೂಡಿಸು ಸಜ್ಜನರೊಳಗೆ 1

ನಾಮಾಭಿವಿಡಿದು ಉಮಾಪತಿ ಪರಿಯಂತ
ಈ ಮನ ಎರಗಲಿ ಯಾಮ ಯಾಮಕೆ
ಕಾಮಿಪೆ ಇದನೆ ಗುರುವೆ ವಾಮದಕ್ಷಣ ಮಾರ್ಗ
ನೇಮ ತಪ್ಪುದಂತೆ ತಿಳಿಸಿ ಭ್ರಾಮ ಬುದ್ಧಿಯ ಓಡಿಸುವುದು 2

ಚಿಂತಾಮಣಿ ಕಂಡ ಮೇಲೆ ಭ್ರಾಂತಿಗೊಳಿಪÀ ವಿಷಯ
ಚಿಂತಿಸಿ ಬೇಡುವುದು ಲೋಕಾಂತದ ಸುಖವು
ಇಂತು ಬಾಗಿ ನಿಂತು ಕೇಳುವಂತೆ ಮಾಡದಿರು ಕರುಣಿ
ಸಂತತ ನಿನ್ನ ಪಾದಕ್ರಾಂತನಾಗಿ ತುತಿಸುವೆ 3

ಸಾರಿಸಾರಿಗೆ ಈ ಚಿತ್ರ ತಾರತಮ್ಯವ ವಿಚಾರಗೈದು ನಲಿದಾಡಿ
ಮೇರೆ ಇಲ್ಲದೆ ಕೋಶ ಇಂದಿರೇಶನ್ನ ಹೃ
ದ್ವಾರಿಜದೊಳು ನಿಲಿಸಿ
ಆರಾಧನೆ ಮಾಡುವ ವೈಕಾರಿಕ ಭಾಗ್ಯವೆ ಬರಲಿ 4

ನಮೋ ನಮೋ ಯತಿರಾಜ ಮಮತೆ ರಹಿತ ಅನುಪಮ ಚರಿತಾ
ಪರಬೊಮ್ಮ ವಿಜಯವಿಠಲ ನಾ
ತುಮ್ಮದೊಳಚಿನಪ e್ಞÁನೋತ್ತುಮ ತುಂಗಭದ್ರವಾಸ 5
***

Ragavendra gururaya ramaniyakaya
Ragavendra padanbuja brunga – bavabayabanga || pa ||

Nodide ninna mahime hadipaduveno nitya
Adikondadalu balugudhavagide
Nadinolage omme smarane madidava dhanya enna
Mudha budhdhiya bidisu – kudisu sajjanarolage || 1 ||

Namabimanivididu umapatipariyanta
I mana eragali yamayamake
Kamipe idane guruve vamadakshinabaga marga
Nema tappadante tilisi bramabudhdhi odisuvudu || 2 ||

Cintamani kandamele brantigolipa vishaya
Cintisi beduvudu lokantada sukavu
Intu bagi nintu keluvante madadiru karuni
Santata ninna padakrantanagi tutisuve || 3 ||

Sari sarige I citra taratamya tattvava vi-
Caragaidu nalidadi mere illade
Kori indiresanna hrudvarijadolu nilisi
Aradhane maduva vaikarika bagyave barali || 4 ||

Namo namo yatiraja mamate sahita
Anupama carita caruhasanenipa ninna
Hemmeyindali ippavara bomma vijayaviththalana
Tummadolarcipa j~janottama tungabadravasa || 5 ||
***

ರಾಘವೇಂದ್ರ ಗುರುರಾಯ ರಮಣೀಯಕಾಯ
ರಾಘವೇ೦ದ್ರ ಪಾದಾ೦ಬುಜ ಭೃ೦ಗ – ಭವಭಯಭ೦ಗ            || ಪ ||

ನೋಡಿದೆ ನಿನ್ನ ಮಹಿಮೆ ಹಾಡಿಪಾಡುವೆನೊ ನಿತ್ಯ
ಆಡಿಕೊ೦ಡಾಡಲು ಬಲುಗೂಢವಾಗಿದೆ
ನಾಡಿನೊಳಗೆ ಒಮ್ಮೆ ಸ್ಮರಣೆ ಮಾಡಿದವ ಧನ್ಯ ಎನ್ನ
ಮೂಢ ಬುಧ್ಧಿಯ ಬಿಡಿಸು – ಕೂಡಿಸು ಸಜ್ಜನರೊಳಗೆ              || ೧ ||

ನಾಮಾಭಿಮಾನಿವಿಡಿದು ಉಮಾಪತಿಪರಿಯ೦ತ
ಈ ಮನ ಎರಗಲಿ ಯಾಮಯಾಮಕೆ
ಕಾಮಿಪೆ ಇದನೆ ಗುರುವೆ ವಾಮದಕ್ಷಿಣಭಾಗ ಮಾರ್ಗ
ನೇಮ ತಪ್ಪದ೦ತೆ ತಿಳಿಸಿ ಭ್ರಾಮಬುಧ್ಧಿ ಓಡಿಸುವುದು            || ೨ ||

ಚಿ೦ತಾಮಣಿ ಕ೦ಡಮೇಲೆ ಭ್ರಾ೦ತಿಗೊಳಿಪ ವಿಷಯ
ಚಿ೦ತಿಸಿ ಬೇಡುವುದು ಲೋಕಾ೦ತದ ಸುಖವು
ಇ೦ತು ಬಾಗಿ ನಿ೦ತು ಕೇಳುವ೦ತೆ ಮಾಡದಿರು ಕರುಣಿ
ಸ೦ತತ ನಿನ್ನ ಪಾದಾಕ್ರಾ೦ತನಾಗಿ ತುತಿಸುವೆ                  || ೩ ||

ಸಾರಿ ಸಾರಿಗೆ ಈ ಚಿತ್ರ ತಾರತಮ್ಯ ತತ್ತ್ವವ ವಿ-
ಚಾರಗೈದು ನಲಿದಾಡಿ ಮೇರೆ ಇಲ್ಲದೆ
ಕೋರಿ ಇ೦ದಿರೇಶನ್ನ ಹೃದ್ವಾರಿಜದೊಳು ನಿಲಿಸಿ
ಆರಾಧನೆ ಮಾಡುವ ವೈಕಾರಿಕ ಭಾಗ್ಯವೆ ಬರಲಿ                 || ೪ ||

ನಮೋ ನಮೋ ಯತಿರಾಜ ಮಮತೆ ಸಹಿತ
ಅನುಪಮ ಚರಿತ ಚಾರುಹಾಸನೆನಿಪ ನಿನ್ನ
ಹೆಮ್ಮೆಯಿ೦ದಲಿ ಇಪ್ಪವರ ಬೊಮ್ಮ ವಿಜಯವಿಠ್ಠಲನ
ತುಮ್ಮದೊಳರ್ಚಿಪ ಜ್ಞಾನೋತ್ತಮ ತು೦ಗಭದ್ರವಾಸ           || ೫ ||
***