ಎನಗೆ ನೀ ಬಂಧು ಎಂದೆಂದು ದಯಾಸಿಂಧು ||ಪ||
ತಮನ ಕೊಂದೆ ಶ್ರುತಿತತಿಯ ನೀ ತಂದೆ
ಕೂರುಮನಾಗಿ ಗಿರಿಯನು ಎತ್ತಿದೆ
ಕ್ಷಮೆಯ ಪೊತ್ತೆ ಹಿರಣ್ಯಕನ ಕಿತ್ತೆ
ತ್ರಿವಿಕ್ರಮನಾಗಿ ಬೆಳೆದೆ ತ್ರೈಲೋಕ್ಯವನಳೆದೆ ||೧||
ರಾಯರಾಯರ ಗೆಲಿದೆ ರಾವಣನ ಬಲವನು ಮುರಿದೆ
ಉಪಾಯದಿ ಗೋವಳನಾದೆ
ಸ್ತ್ರೀಯರ ಕೆಡಿಸಿದೆ ಕಲಿಯಾಗಿ ಕೊಲಿಸಿದೆ
ಕಾಯಜನ ತಾತ ಕಾಮಿತ ಫಲದಾತ ||೨||
ಸುರರ ಶಿರೋರನ್ನ ಕರುಣಾಸಂಪನ್ನ
ಮಾನ ವರಮಾನ್ಯ ಸಿರಿ ಹಯವದನ
ಪಾವನ್ನ ಪರಿಪೂರ್ಣ ಶಶಿವರ್ಣ
ನಿರುತ ನಿನ್ನವನ್ನ ಕಾಯಬೇಕೆನ್ನ ||೩||
***
Enage ni bandhu endendu dayasindhu ||pa||
Tamana konde shrutitatiya ni tande
kurumanagi giriyanu ettide
kshameya potte hiranyakana kitte
trivikramanagi belede trailokyavanalede ||1||
Rayarayara gelide ravanana balavanu muride
upayadi govalanade
striyara kediside kaliyagi koliside
kayajana tata kamitaphaladata ||2||
Surara shiroranna karunasampanna
mana varamanya siri hayavadana
pavanna paripurna shashivarna
niruta ninnavanna kayabekenna ||3||
***
ಎನಗೆ ನೀ ಬಂಧು ಎಂದೆಂದು ದಯಾಸಿಂಧು ಪ.
ತಮನ ಕೊಂದೆ ಶ್ರುತಿತತಿಯ ನೀ ತಂದೆ ಕೂ-ರುಮನಾಗಿ ಗಿರಿಯನೆತ್ತಿದೆಕ್ಷಮೆಯ ಪೊತ್ತೆ ಹಿರಣ್ಯಕನ ಕಿತ್ತೆ ತ್ರಿವಿ-ಕ್ರಮನಾಗಿ ಬೆಳೆದೆ ತ್ರೈಲೋಕ್ಯವನಳೆದೆ 1
ರಾಯರಾಯರ ಗೆಲಿದೆ ರಾವಣಬಲವನು ಮುರಿದೆ ಉ-ಪಾಯದಿ ಗೋವಳನಾದೆಸ್ತ್ರೀಯರ ಕೆಡಿಸಿದೆ ಕಲಿಯಾಗಿ ಕೊಲಿಸಿದೆಕಾಯಜನ ತಾತ ಕಾಮಿತಫಲದಾತ 2
ಸುರರ ಶಿರೋರನ್ನ ಕರುಣಾಸಂಪನ್ನ ಮಾನ-ವರ ಮಾನ್ಯ ಸಿರಿ ಹಯವದನ ಪಾವನ್ನಪರಿಪೂರ್ಣ ಶಶಿವರ್ಣನಿರುತ ನಿನ್ನವನ್ನ ಕಾಯಬೇಕೆನ್ನ 3
****