by ಪ್ರಸನ್ನವೆಂಕಟದಾಸರು
ಕ್ಷಣಕೆಲವಕೆ ನೆನೆ ಹರಿಯ ಮನವೆಕ್ಷಣಕೆ ಲವಕೆ ಹರಿಯ ಪ.
ಮನಕೆ ಶ್ರುತಿಗಳಿಗೆ ದೊರೆಯಶಶಿದಿನಕರವಂಶಕೆ ಹಿರಿಯಘನಕಲುಷದೊಳವತಾರಿಯ ಪೆತ್ತಜನಕ ತಿರುಮಲೆಯ ದೊರೆಯ 1
ಕನಕಾಂಗಿಯಳ ಸಿರಿಯಭವಕನಕೋದರರಿಗೆ ವರಿಯಮುನಿಕುಲಕಾಂತಿ ಅತಿಪರಿಯ ತನ್ನಜನಕನ ವರಕುಪಕಾರಿಯ 2
ಜನಕನಳಿಯ ಖಳರರಿಯದಿನದಿನಕೆ ಲಾವಣ್ಯದ ತೆರೆಯಸನಕಾದ್ಯರ ಮನೋಹರಿಯವೈರಿನಿಕರದ ಕದಳಿಗೆ ಕರಿಯ 3
ಮೀನ ಕಮಠಾದ್ಯವತಾರಿಯ ಭುವನಕೊಬ್ಬನೆ ಸುಖಕಾರಿಯಧನು ಕರದಿ ಮುರಿದ ಶೌರಿಯಮಾವನಕೆಡಹಿದ ಹೊಂತಕಾರಿಯ4
ತನ್ನ ಕರುಣಕೆನಿತ್ಯಗುರಿಯಾಗಿಹನ ಕಾಯುವನು ಪರಂಪರೆಯಎನ್ನ ಕುಲದೈವ ಮೇಲ್ಗಿರಿಯ ಪ್ರಸನ್ನವೆಂಕಟಕೃಷ್ಣ ನಮ್ಮ ಮರೆಯ 5
********