ಶ್ರೀ ಶ್ರೀನಿವಾಸ ತೀರ್ಥರ ವದನಾರವಿಂದದಲ್ಲಿ ಹೊರಹೊಮ್ಮಿದ ಶ್ರೀ ಬ್ರಹ್ಮಣ್ಯ ತೀರ್ಥರ ವೈಭವ
ಶ್ರೀಮಾನತ್ರ ದಿವಾಕರಃ ಕರುಣಯಾ -
ಬ್ರಹ್ಮೌಘವಾಂಛಾಕೃತೇ
ಶ್ರೀಮತ್ಪೂಗವನಾನ್ವವಾಯ-
ತಿಲಕಾದ್ರಾಮಾರ್ಯ ವಿಪ್ರೋತ್ತಮಾತ್ ।
ಲಬ್ಧ್ವಾ ಜನ್ಮ ನೃಸಿಂಹ ಸೇವನರತಃ -
ಕ್ಷೋಣೀಸುಚಿಂತಾಮಣಿ:
ಶ್ರೀ ಬ್ರಹ್ಮಣ್ಯ ಇತೀರಿತಃ ಸ ಭುವಿ: ನಃ -
ಕುರ್ಯಾನ್ಮುನಿರ್ಮಂಗಲಮ್ ।। 1 ।।
ಪೂರ್ವಂ ಶುಭ್ರತನು: ಕಲಾನಿಧಿರಸೌ -
ಲೀಢ್ಯಸ್ತಮೋಜಿಹ್ವಯಾ
ಮಾಲಿನ್ಯಸ್ಯ ವಶೋ ಯದೀಯಯಶಸಾಂ -
ತ್ರೈಲೋಕ್ಯಗಾನಾಂ ಕರ್ಯೈ: ।
ಧಾವಲ್ಯಂ ಪುನರಾಪ್ತವಾನಪಿ -
ಹ್ರಸತ್ಯನ್ಯಪ್ರಭಾಲಾಭತಃ
ಶ್ರೀ ಬ್ರಹ್ಮಣ್ಯ ಯತೀಶ್ವರಃ ಸ ಭುವಿ: -
ನಃ ಕುರ್ಯಾತ್ಪರಂ ಮಂಗಲಮ್ ।। 2 ।।
ಯದ್ವಾದಭಿಧಸಿಂಹನಾದಮತುಲಂ -
ವಾದೀಂದ್ರದಂತಾವಲಾ:
ಶೃಣ್ವಂತಃ ದೂರತೋsಪಿ ಚಕಿತಾ -
ದಿಕ್ಯಂದರಂ ಪ್ರಾದ್ರವನ್ ।
ಸೋsಯಂ ಶ್ರೀ ಯತಿರಾಜ ಶೂರ -
ಮೃಗರಾಟ್ ವೃಂದಾವನೇ ಸಂವಸನ್
ಶ್ರೀ ಬ್ರಹ್ಮಣ್ಯವರಾಭಿಧಃ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 3 ।।
ಯಸ್ಯ ಶ್ರೀಕರ ಪಂಕಜಾದೃತ -
ಮಹಾಮಂತ್ರಾಕ್ಷತೈ: ಸಾಧಿತಾಃ
ಸರ್ವೇsಭೀಷ್ಟಚಯಾ: ಸುರದ್ರುಮ-
ವರೈರ್ದಾತುಂ ನ ಶಕ್ಯಾ ಹಿ ತೇ ।
ಯದ್ವೃಂದಾವನ ಮೃತ್ತಿಕಾ-
ಧೃತಿರಹೋ ಕ್ರೂರಗ್ರಹೋದ್ಭುಂಜಿಕಾ
ಶ್ರೀ ಬ್ರಹ್ಮಣ್ಯ ಯತೀಶ್ವರಃ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 4 ।।
ಶ್ರೀಭಾಸ್ವನಪರೋsಯಮಾಂತರ-
ತಮಸ್ತೋಮಸ್ಯ ಸಂಭೇದಕೋ
ಗೋಭಿಶ್ಚತ್ರ ಸುವರ್ಣರಮ್ಯ-
ತನುಭಿ ಸಧ್ವಬ್ಧ ಸಂಹರ್ಷಕಃ ।
ಕಿಂಚಾತಿಗ್ಮರುಚಿರ್ಮನುಷ್ಯ -
ಸದೃಶಾಂ ಹರ್ಷೇಣ ದಶಾಕೃತಿ:
ಶ್ರೀ ಬ್ರಹ್ಮಣ್ಯ ಯತೀಶ್ವರಃ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 5 ।।
ಸಂಸಾರಂಬುನಿಧೌ ತರಂಗನಿಚಯೈ: -
ಸಂತಾಡಿತಾನಾಂ ಸತಾಮ್
ನಿತ್ಯಂ ಪಾರಮತಃ ಪರಂ ಮೃಗ-
ಯತಾಮಾಲಂಬನಾಪೇಕ್ಷಿಣಾಮ್ ।
ಜ್ಞಾನಾಭಿಖ್ಯದೃಡೋಡುಪೇನ -
ವಿಲಸನ್ ಸಂತಾರಕೋ ನಾವಿಕಃ
ಶ್ರೀ ಬ್ರಹ್ಮಣ್ಯವರಾಭಿಧಃ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 6 ।।
ಯದ್ವೃಂದಾವನಮಿಂದಿರೇಶ ಕರುಣಾ-
ವೃಂದಸ್ಯ ಸಂದಾಯಕಂ
ಮಂದಾರದ್ರುಮಮವಜ್ಜನೇಷ್ಟ-
ನಿಚಯಂ ಸಂಪಾದಯತ್ಪಾವಕಮ್ ।
ಸಾಂದ್ರಾನಂದಕದಂಬಮೂರ್ತಿ-
ರುಚಿರಂ ಸದ್ವೃಂದ ಸಂಸೇವಿತಂ
ಶ್ರೀ ಬ್ರಹ್ಮಣ್ಯವರಾಭಿಧಃ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 7 ।।
ಸೇವ್ಯಾ ಕಣ್ವನದೀ ಪವಿತ್ರ ಸಲೀಲಾ-
ರಾಮಾಪ್ರಮೇಯೋ ಹರಿಃ
ಕ್ಷೇತ್ರಂ ಜ್ಞಾನ ಮಂಟಪಾಖ್ಯಮನಿಶಂ -
ಹ್ಯಬ್ಬೂರುನಾಮ್ನಾಸ್ತಿಯಾತ್ ।
ತದ್ರಮ್ಯಸ್ಥಲ ಭೂಷಣಂ -
ವರಗುರುರ್ವೃಂದಾವನಂ ತದ್ಗತಃ
ಶ್ರೀ ಬ್ರಹ್ಮಣ್ಯ ಯತೀಶ್ವರಶ್ಚ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 8 ।।
ಇತ್ಯೇದ್ವರ ಮಂಗಲಾಷ್ಟಕಮಿದಂ-
ಶ್ರೀ ಶ್ರೀನಿವಾಸೋದಿತಮ್
ಸರ್ವಾಭೀಷ್ಟಕರಂ ಪ್ರಭಾತ -
ಸಮಯೇ ಭಕ್ತ್ಯಾ ಪಠನ್ ಮಾನವಃ ।
ಮಾಂಗಲ್ಯಾಡಿ ಶುಭಕ್ರಿಯಾಸು ಚ -
ವದನ್ ಬ್ರಹ್ಮಣ್ಯ ಕಾರುಣ್ಯತಃ
ಸುಜ್ಞಾನ ವಿವಿದಾರ್ಥ ಸಿದ್ಧಿಮಪಿ ಸ -
ಪ್ರಾಪ್ನೋತ್ಯಸೌ ಮಂಗಲಮ್ ।। 9 ।।
****
explanation by ಆಚಾರ್ಯ ನಾಗರಾಜು ಹಾವೇರಿ ಗುರು ವಿಜಯ ಪ್ರತಿಷ್ಠಾನ
ಶ್ರೀ ಶ್ರೀನಿವಾಸ ತೀರ್ಥರ ವದನಾರವಿಂದದಲ್ಲಿ ಹೊರಹೊಮ್ಮಿದ ಶ್ರೀ ಬ್ರಹ್ಮಣ್ಯ ತೀರ್ಥರ ವೈಭವ "
ಶ್ರೀಮಾನತ್ರ ದಿವಾಕರಃ ಕರುಣಯಾ -
ಬ್ರಹ್ಮೌಘವಾಂಛಾಕೃತೇ
ಶ್ರೀಮತ್ಪೂಗವನಾನ್ವವಾಯ-
ತಿಲಕಾದ್ರಾಮಾರ್ಯ ವಿಪ್ರೋತ್ತಮಾತ್ ।
ಲಬ್ಧ್ವಾ ಜನ್ಮ ನೃಸಿಂಹ ಸೇವನರತಃ -
ಕ್ಷೋಣೀಸುಚಿಂತಾಮಣಿ:
ಶ್ರೀ ಬ್ರಹ್ಮಣ್ಯ ಇತೀರಿತಃ ಸ ಭುವಿ: ನಃ -
ಕುರ್ಯಾನ್ಮುನಿರ್ಮಂಗಲಮ್ ।। 1 ।।
ಶ್ರೀ ಸೂರ್ಯದೇವನೇ ಈ ಭುವಿಯಲ್ಲಿ ಬ್ರಾಹ್ಮಣ ವೃಂದ ಅಭೀಷ್ಟ ಸಿದ್ಧಿಗೋಸ್ಕರ - ಕರುಣೆಯಿಂದ ಶ್ರೀಮತ್ಪೂಗವನ ವಂಶಕ್ಕೆ ತಿಲಕಪ್ರಾಯರಾದ ಶ್ರೀ ರಾಮಾಚಾರ್ಯರೆಂಬ ವಿಪ್ರೋತ್ತಮರಿಂದ ಜನ್ಮವನ್ನು ಪಡೆದು - ಶ್ರೀ ನೃಸಿಂಹನ ಸೇವೆಯಲ್ಲಿ ಆಸಕ್ತರಾಗಿ - ಭೂಮಿಯಲ್ಲಿ ಚಿಂತಾಮಣಿಪ್ರಾಯರಾಗಿ - ಶ್ರೀ ಬ್ರಹ್ಮಣ್ಯ ತೀರ್ಥರೆಂಬುದಾಗಿ ಲೋಕದಲ್ಲಿ ಪ್ರಖ್ಯಾತರಾದರು.
ಅಂಥಹಾ ಶ್ರೀ ಬ್ರಹ್ಮಣ್ಯ ಮುನಿಗಳು ಭೂಮಿಯಲ್ಲಿರುವ ನಮಗೆ ಮಂಗಲವನ್ನು ಉಂಟು ಮಾಡಲಿ !
ಪೂರ್ವಂ ಶುಭ್ರತನು: ಕಲಾನಿಧಿರಸೌ -
ಲೀಢ್ಯಸ್ತಮೋಜಿಹ್ವಯಾ
ಮಾಲಿನ್ಯಸ್ಯ ವಶೋ ಯದೀಯಯಶಸಾಂ -
ತ್ರೈಲೋಕ್ಯಗಾನಾಂ ಕರ್ಯೈ: ।
ಧಾವಲ್ಯಂ ಪುನರಾಪ್ತವಾನಪಿ -
ಹ್ರಸತ್ಯನ್ಯಪ್ರಭಾಲಾಭತಃ
ಶ್ರೀ ಬ್ರಹ್ಮಣ್ಯ ಯತೀಶ್ವರಃ ಸ ಭುವಿ: -
ನಃ ಕುರ್ಯಾತ್ಪರಂ ಮಂಗಲಮ್ ।। 2 ।।
ಶುಭ್ರ ಶರೀರವುಳ್ಳ ಚಂದ್ರನೂ - ಮೊದಲಿಗೆ ಕತ್ತಲೆಯ ಜಿಹ್ವೆಯಿಂದ ಗ್ರಸಿತನಾಗಿದ್ದು ಮಾಲಿನ್ಯಕ್ಕೆ ವಶನಾಗಿ - ಮೂರ್ಲೋಕದಲ್ಲಿಯೂ ಹರಡಿರುವ ಯಶಸ್ಸುಳ್ಳ ಯಾವ ಈ ಶ್ರೀ ಬ್ರಹ್ಮಣ್ಯ ತೀರ್ಥರೆಂಬ ಸೂರ್ಯನ ಕಿರಣಗಳಿಂದಲೇ ಶುಭ್ರತ್ವವನ್ನು ಪಡೆದನು.
ಹಾಗಿದ್ದಾಗ್ಯೂ ದಿನೇ ದಿನೇ ಕ್ಷಯಿಸುವನು.
ಇದಕ್ಕೆ ಕಾರಣವೆಂದರೆ....
ಸ್ವಯಂ ಪ್ರಭೆಯಿಲ್ಲದೇ ಇನ್ನೊಬ್ಬರ ಪ್ರಭೆಯನ್ನು ಅವಲಂಬಿಸಿರುವುದು.
ಭೂಮಿಯಲ್ಲಿ ಅಂಥಹಾ ಸ್ವಯಂ ಪ್ರಭಾವಂತರೂ ಮತ್ತು ಇತರರಿಗೆ ಪ್ರಭಾಪ್ರದರೂ ಎಂದು ಪ್ರಸಿದ್ಧರಾದ ಶ್ರೀ ಬ್ರಹ್ಮಣ್ಯ ಯತೀಶ್ವರರೂ ನಮಗೆ ಪರಮ ಮಂಗಲವನ್ನು ಉಂಟು ಮಾಡಲಿ !!
ಯದ್ವಾದಭಿಧಸಿಂಹನಾದಮತುಲಂ -
ವಾದೀಂದ್ರದಂತಾವಲಾ:
ಶೃಣ್ವಂತಃ ದೂರತೋsಪಿ ಚಕಿತಾ -
ದಿಕ್ಯಂದರಂ ಪ್ರಾದ್ರವನ್ ।
ಸೋsಯಂ ಶ್ರೀ ಯತಿರಾಜ ಶೂರ -
ಮೃಗರಾಟ್ ವೃಂದಾವನೇ ಸಂವಸನ್
ಶ್ರೀ ಬ್ರಹ್ಮಣ್ಯವರಾಭಿಧಃ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 3 ।।
ಯಾರ ವಾದವೆಂಬ ಅತುಲ ಸಿಂಹನಾದವನ್ನು ಶ್ರವಣ ಮಾಡಿ - ವಾದೇಂದ್ರರೆಂಬ ಗಜಗಳು ದೂರದಿಂದಲೇ ಹೆದರಿ ದಿಕ್ಕುಗಳೆಂಬ ಗುಹೆಗಳನ್ನು ಕುರಿತು ಓಡುವವೋ - ಅಂಥಹಾ ಯತಿರಾಜ ಶೂರ ಸಿಂಹರಾಗಿರತಕ್ಕ ಶ್ರೀ ಬ್ರಹ್ಮಣ್ಯ ತೀರ್ಥರೆಂಬುವರು ವೃಂದಾವನದಲ್ಲಿ ವಾಸಿಸುತ್ತಾ ಭೂಮಿಯಲ್ಲಿರುವ ನಮಗೆ ಸನ್ಮಂಗಲವನ್ನು ಉಂಟು ಮಾಡಲಿ !!!
ಯಸ್ಯ ಶ್ರೀಕರ ಪಂಕಜಾದೃತ -
ಮಹಾಮಂತ್ರಾಕ್ಷತೈ: ಸಾಧಿತಾಃ
ಸರ್ವೇsಭೀಷ್ಟಚಯಾ: ಸುರದ್ರುಮ-
ವರೈರ್ದಾತುಂ ನ ಶಕ್ಯಾ ಹಿ ತೇ ।
ಯದ್ವೃಂದಾವನ ಮೃತ್ತಿಕಾ-
ಧೃತಿರಹೋ ಕ್ರೂರಗ್ರಹೋದ್ಭುಂಜಿಕಾ
ಶ್ರೀ ಬ್ರಹ್ಮಣ್ಯ ಯತೀಶ್ವರಃ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 4 ।।
ಯಾರ ಸಂಪದ್ಯುಕ್ತವಾದ ಕರಕಮಲದಿಂದ ಅನುಗೃಹೀತ ಮಂತ್ರಾಕ್ಷತೆಗಳಿಂದ ಸಾಧಿತವಾದ ಸರ್ವಾಭೀಷ್ಟ ಸಮೂಹಗಳೇನುಂಟೋ - ಆ ಎಲ್ಲವನ್ನೂ ಕೊಡಲು ದೇವ ತರುಗಳಿಂದಲೂ ಶಕ್ಯವಿಲ್ಲ.
ಯಾರ ವೃಂದಾವನಗತ ಮೃತ್ತಿಕಾ ಧಾರಣವು ಕ್ರೂರ ಗ್ರಹಗಳನ್ನೂ ಭಂಜನ ಮಾಡುವುದೇನು ಆಶ್ಚರ್ಯ !
ಅಂಥಹಾ ಶ್ರೀ ಬ್ರಹ್ಮಣ್ಯ ಯತೀಶ್ವರರು ಭೂಮಿಯಲ್ಲಿರುವ ನಮಗೆ ಉತ್ತಮ ಮಂಗಲವನ್ನು ಉಂಟು ಮಾಡಲಿ !!!!
ಶ್ರೀಭಾಸ್ವನಪರೋsಯಮಾಂತರ-
ತಮಸ್ತೋಮಸ್ಯ ಸಂಭೇದಕೋ
ಗೋಭಿಶ್ಚತ್ರ ಸುವರ್ಣರಮ್ಯ-
ತನುಭಿ ಸಧ್ವಬ್ಧ ಸಂಹರ್ಷಕಃ ।
ಕಿಂಚಾತಿಗ್ಮರುಚಿರ್ಮನುಷ್ಯ -
ಸದೃಶಾಂ ಹರ್ಷೇಣ ದಶಾಕೃತಿ:
ಶ್ರೀ ಬ್ರಹ್ಮಣ್ಯ ಯತೀಶ್ವರಃ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 5 ।।
ಹೃದಯಾಂತಸ್ಥಿತವಾದ ತಮಸ್ಸಮೂಹವನ್ನು ಭೇದಿಸುವ ಇವರು - ಮತ್ತೂಬ್ಬ ಸಂಪದ್ಯುಕ್ತನಾದ ಸೂರ್ಯನೇ ಸರಿ !
ಆಶ್ಚರ್ಯಕರವಾದ ಹೊಂಬಣ್ಣದ ರಮ್ಯಾಕೃತಿಯುಳ್ಳ ಕಿರಣಗಳಿಂದ - ಸಾಧುಗಳೆಂಬ ಕಮಲಗಳಿಗೆ ವಿಕಾಸವನ್ನುಂಟು ಮಾಡುವವರೂ ಮತ್ತು ಇವರು ಮನುಷ್ಯರ ಕಣ್ಣಿಗೆ ಹರ್ಷದಿಂದ ನೋಡಲು ಯೋಗ್ಯವಾದ ಸ್ವರೂಪವುಳ್ಳ - ಶಾಂತ ತೇಜೋ ಮೂರ್ತಿಗಳು.
ಇಂಥಹಾ ಶ್ರೀ ಬ್ರಹ್ಮಣ್ಯ ತೀರ್ಥ ಮಹಾ ಸ್ವಾಮಿಗಳು ನಮಗೆ ಅತ್ಯಂತ ಮಂಗಲವನ್ನು ಉಂಟು ಮಾಡಲಿ !!!!!
ಸಂಸಾರಂಬುನಿಧೌ ತರಂಗನಿಚಯೈ: -
ಸಂತಾಡಿತಾನಾಂ ಸತಾಮ್
ನಿತ್ಯಂ ಪಾರಮತಃ ಪರಂ ಮೃಗ-
ಯತಾಮಾಲಂಬನಾಪೇಕ್ಷಿಣಾಮ್ ।
ಜ್ಞಾನಾಭಿಖ್ಯದೃಡೋಡುಪೇನ -
ವಿಲಸನ್ ಸಂತಾರಕೋ ನಾವಿಕಃ
ಶ್ರೀ ಬ್ರಹ್ಮಣ್ಯವರಾಭಿಧಃ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 6 ।।
ಸಂಸಾರವೆಂಬ ಸಮುದ್ರದಲ್ಲಿ ಅಲೆಗಳ ಸಮೂಹದ ಹೊಡೆತಕ್ಕೆ ಸಿಕ್ಕಿಬಿದ್ದು ನಿತ್ಯವೂ ಇದರಿಂದಾಚೆಯ ದಡವನ್ನು ಹುಡುಕುತ್ತಾ - ಆಶ್ರಯವನ್ನು ಅಪೇಕ್ಷಿಸುವ ಸಜ್ಜನರಿಗೋಸ್ಕರ - ಜ್ಞಾನವೆಂಬ ಹೆಸರಿಂದ ದೃಢವಾದ ತೆಪ್ಪದಿಂದ ದಾಟಿಸಲು ಸುಪ್ರಸಿದ್ಧ ನಾವಿಕನಂತಿರುವ ಶ್ರೀ ಬ್ರಹ್ಮಣ್ಯ ತೀರ್ಥ ಗುರುವರ್ಯರು ಭುವಿಯಲ್ಲಿರುವ ನಮಗೆ ಸನ್ಮಂಗಲವನ್ನು ಉಂಟು ಮಾಡಲಿ !!!!!!
ಯದ್ವೃಂದಾವನಮಿಂದಿರೇಶ ಕರುಣಾ-
ವೃಂದಸ್ಯ ಸಂದಾಯಕಂ
ಮಂದಾರದ್ರುಮಮವಜ್ಜನೇಷ್ಟ-
ನಿಚಯಂ ಸಂಪಾದಯತ್ಪಾವಕಮ್ ।
ಸಾಂದ್ರಾನಂದಕದಂಬಮೂರ್ತಿ-
ರುಚಿರಂ ಸದ್ವೃಂದ ಸಂಸೇವಿತಂ
ಶ್ರೀ ಬ್ರಹ್ಮಣ್ಯವರಾಭಿಧಃ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 7 ।।
ಯಾರ ಪರಮ ಪವಿತ್ರವಾದ ವೃಂದಾವನವು ಶ್ರೀ ಇಂದಿರೇಶನ ಕರುಣಾ ಸಮೂಹವನ್ನು ಸಾಧಿಸಿ ಕೊಡುವುದೋ - ದೇವ ಮಂದಾರ ವೃಕ್ಷದಂತೆ ಜನಗಳ ಇಷ್ಟ ಸಮೂಹವನ್ನು ಸಂಪಾದಿಸಿ ಕೊಡುವುದೋ - ಪೂರ್ಣಾನಂದ ಸಮ್ಮೋಹನಾದ ಶ್ರೀ ಹರಿ ಪರಮಾತ್ಮನ ದಿವ್ಯ ಸನ್ನಿಧಾನದಿಂದ ಮನೋಹರವಾದುದೋ - ಆದುದರಿಂದಲೇ ಸಜ್ಜನ ವೃಂದದಿಂದ ಸಂಸೇವಿತವೋ ಅಂಥಹಾ ಶ್ರೀ ಬ್ರಹ್ಮಣ್ಯ ಯತಿವರರು ನಮಗೆ ಶುಭವನ್ನುಂಟು ಮಾಡಲಿ !!!!!!!
ಸೇವ್ಯಾ ಕಣ್ವನದೀ ಪವಿತ್ರ ಸಲೀಲಾ-
ರಾಮಾಪ್ರಮೇಯೋ ಹರಿಃ
ಕ್ಷೇತ್ರಂ ಜ್ಞಾನ ಮಂಟಪಾಖ್ಯಮನಿಶಂ -
ಹ್ಯಬ್ಬೂರುನಾಮ್ನಾಸ್ತಿಯಾತ್ ।
ತದ್ರಮ್ಯಸ್ಥಲ ಭೂಷಣಂ -
ವರಗುರುರ್ವೃಂದಾವನಂ ತದ್ಗತಃ
ಶ್ರೀ ಬ್ರಹ್ಮಣ್ಯ ಯತೀಶ್ವರಶ್ಚ ಸ ಭುವಿ: ನಃ -
ಕುರ್ಯಾತ್ಪರಂ ಮಂಗಲಮ್ ।। 8 ।।
ಸೇವಿಸಲು ಯೋಗ್ಯವಾದ ಪವಿತ್ರ ಜಲವುಳ್ಳ ಕಣ್ವನದೀ - ಶ್ರೀ ರಾಮ ಪ್ರಮೇಯ ಸ್ವಾಮಿ ಜ್ಞಾನ ಮಂಟಪಾಖ್ಯ ಅಬ್ಬೂರು ಕ್ಷೇತ್ರ - ಅಂಥಹಾ ರಮ್ಯಾ ಸ್ಥಳಕ್ಕೆ ಭೂಷಣವಾದ ವರಗುರು ಶ್ರೀ ಬ್ರಹ್ಮಣ್ಯ ತೀರ್ಥರ ವೃಂದಾವನ ಹಾಗೂ ಆ ವೃಂದಾವನದಲ್ಲಿ ಸಂಸ್ಥಿತರಾಗಿರುವ ಶ್ರೀ ಬ್ರಹ್ಮಣ್ಯ ತೀರ್ಥರು ಭೂಮಿಯಲ್ಲಿ ವಾಸಿಸುವ ನಮಗೆ ಉತ್ಕೃಷ್ಟವಾದ ಶುಭವನ್ನು ಉಂಟು ಮಾಡಲಿ !!!!!!!!
ಇತ್ಯೇದ್ವರ ಮಂಗಲಾಷ್ಟಕಮಿದಂ-
ಶ್ರೀ ಶ್ರೀನಿವಾಸೋದಿತಮ್
ಸರ್ವಾಭೀಷ್ಟಕರಂ ಪ್ರಭಾತ -
ಸಮಯೇ ಭಕ್ತ್ಯಾ ಪಠನ್ ಮಾನವಃ ।
ಮಾಂಗಲ್ಯಾಡಿ ಶುಭಕ್ರಿಯಾಸು ಚ -
ವದನ್ ಬ್ರಹ್ಮಣ್ಯ ಕಾರುಣ್ಯತಃ
ಸುಜ್ಞಾನ ವಿವಿದಾರ್ಥ ಸಿದ್ಧಿಮಪಿ ಸ -
ಪ್ರಾಪ್ನೋತ್ಯಸೌ ಮಂಗಲಮ್ ।। 9 ।।
ಈ ರೀತಿಯಾಗಿ ಶ್ರೀ ಶ್ರೀನಿವಾಸ ನಾಮಕನಿಂದ ವಿರಚಿತವಾದ - ಸರ್ವಾಭೀಷ್ಟಕರವಾದ ಈ ಮಂಗಳಾಷ್ಟಕವನ್ನು ಪ್ರಾತಃ ಕಾಲದಲ್ಲಿ ಭಕ್ತಿಯಿಂದ ಪಠಿಸುವ ಮಾನವನು ಹಾಗೂ ಮಾಂಗಲ್ಯ ಮಹೋತ್ಸವಾದಿ ಶುಭ ಕಾರ್ಯಗಳಲ್ಲಿ ಪಾರಾಯಣ ಮಾಡತಕ್ಕವನು ಶ್ರೀ ಬ್ರಹ್ಮಣ್ಯ ತೀರ್ಥರ ಕಾರುಣ್ಯದಿಂದ ಸುಜ್ಞಾನವನ್ನೂ - ವಿವಿಧ ಪುರುಷಾರ್ಥ ಸಿದ್ಧಿಯನ್ನೂ - ಪರಮ ಮಂಗಲವನ್ನೂ ಹೊಂದುವನು.
" ಶ್ರೀ ಅಗ್ನಿದೇವರ ಅಂಶ ಸಂಭೂತರಾದ ಶ್ರೀ ಶ್ರೀನಿವಾಸ ತೀರ್ಥ ವಿರಚಿತ ಶ್ರೀ ಸೂರ್ಯಾಂಶ ಶ್ರೀ ಬ್ರಹ್ಮಣ್ಯ ತೀರ್ಥ ಮಂಗಳಾಷ್ಟಕ ಸಮಾಪ್ತವಾಯಿತು "
****