..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಏನು ದಾಸ ನಾನು ಹರಿಯೆ ನೀನು ಮೆಚ್ಚುವೆಯೇನೊ ಪ
ಏನು ಮಾಡಿದರೇನು ನಿನ್ನಯ
ಖೂನವರಿದೆನೇನೊ ಹರಿಯೆ ಅ.ಪ
ಲೋಕ ವಾರ್ತಿ ಎಲ್ಲ ಜರಿದು ಏಕ ಚಿತ್ತವಿಲ್ಲ
ಕಾಕು ಪೋಕರ ನೀಕರಿ ನಿನ್ನ ಸ್ವೀಕರಿಸಲಿಲ್ಲ ಬರಿದೆ 1
ನಿನ್ನ ಮಹಿಮೆಯನ್ನು ಕೇಳಿ ನಿನ್ನ ರೂಪವಿನ್ನು ಮನದಣಿಯೆ ನೋ
ಡೆನ್ನ ಮರೆಯದೆನ್ನ ದಾಸ್ಯವಿನ್ನು ಬರಿದೆ 2
ಭಾವ ತಿಳಿಯಲಿಲ್ಲ ಗುರುಗಳ ಸೇವೆ ಮಾಡಲಿಲ್ಲ
ಧಾವತಿಗೊಂಡೆ ಕೇವಲ ವಾಸುದೇವವಿಠಲ ಬರಿದೆ 3
***