Showing posts with label ಇಂದಿರೆ ನಿನ್ನ ಪೂಜೆ ಛೆಂದಾಗಿ ಮಾಡುವೆ ನಾನು indiresha INDIRENINNA POOJE CHENDAAGI MAADUVE NAANU. Show all posts
Showing posts with label ಇಂದಿರೆ ನಿನ್ನ ಪೂಜೆ ಛೆಂದಾಗಿ ಮಾಡುವೆ ನಾನು indiresha INDIRENINNA POOJE CHENDAAGI MAADUVE NAANU. Show all posts

Monday 1 November 2021

ಇಂದಿರೆ ನಿನ್ನ ಪೂಜೆ ಛೆಂದಾಗಿ ಮಾಡುವೆ ನಾನು ankita indiresha INDIRENINNA POOJE CHENDAAGI MAADUVE NAANU

ರಾಗ ಕಲ್ಯಾಣಿ ಏಕತಾಳ 


.ಇಂದಿರೆ ನಿನ್ನ ಪೂಜೆ ಛೆಂದಾಗಿ ಮಾಡುವೆ ನಾನು || PA ||

ಮಂದಹಾಸದಿ ಮೋದದಿಂದಲೇ ನೋಡು ದಯದಿ || A. PA ||

ಜರದ ಪೀತಾಂಬರ ಕರದೊಳು ಧರಿಸಿರುವೆನೆ
ಎರಕೋ ಹರಿಯ ಕೂಡ ಸರಸಿಜದಳ ನೇತ್ರಿಯೇ || 1 ||

ಮಂದಾರ ಮಲ್ಲಿಗೆ ಕುಂದದ ಚಂಪಕ ಜಾಜಿ
ತಂದು ನಿಂತಿಹೆ ಹರಿಸುಂದರಿ ಸರಸದಿ ಮುಡಿಯೇ || 2 ||

ಗಂಧಕುಂಕುಮ ವೀಳ್ಯಾ ಬುಂದ್ಯಾ ಭಕ್ಷಗಳನು
ಬಂದು ಹರಿಯ ಕೂಡಿ ಛೆಂದಾಗಿ ಭುಂಜಿಸು ಬೇಗ || 3 ||

ಹರಡಿ ಕಂಕಣ ದುಂಡು ಹೆರಳು ಭಂಗಾರಗಳನು
ಹರುಷದಿಂದಲಿ ಕೃಷ್ಣನರಸಿ ತಂದಿಹೆ ನಿನಗೆ || 4 ||

ಚಂದ್ರಶೇಖರ ಸುರವೃಂದಾದಿ ವಂದಿತ ಚರಣೆ
ಇಂದಿರೇಶನ ಸಹ ಬಂದಿಲ್ಲಿ ತೋರಿಸು ಮುಖವಾ || 5 ||
***

indire ninna pūje chendāgi māḍuve nānu || PA ||

mandahāsadi mōdadindalē nōḍu dayadi || A. PA ||

jarada pītāmbara karadoḷu dharisiruvene erakō hariya kūḍa sarasijadaḷa nētriyē || 1 ||

mandāra mallige kundada campaka jāji tandu nintihe harisundari sarasadi muḍiyē || 2 ||

gandhakuṅkuma vīḷyā bundyā bhakṣagaḷanu bandu hariya kūḍi chendāgi bhun̄jisu bēga || 3 ||

haraḍi kaṅkaṇa duṇḍu heraḷu bhaṅgāragaḷanu haruṣadindali kr̥ṣṇanarasi tandihe ninage || 4 ||

candraśēkhara suravr̥ndādi vandita caraṇe indirēśana saha bandilli tōrisu mukhavā || 5 ||

Plain English

indire ninna puje chendagi maduve nanu || PA ||

mandahasadi modadindale nodu dayadi || A. PA ||

jarada pitambara karadolu dharisiruvene erako hariya kuda sarasijadala netriye || 1 ||

mandara mallige kundada campaka jaji tandu nintihe harisundari sarasadi mudiye || 2 ||

gandhakunkuma vilya bundya bhaksagalanu bandu hariya kudi chendagi bhunjisu bega || 3 ||

haradi kankana dundu heralu bhangaragalanu harusadindali krsnanarasi tandihe ninage || 4 ||

candrasekhara suravrndadi vandita carane indiresana saha bandilli torisu mukhava || 5 ||
***

ಇಂದಿರೆ ನಿನ್ನ ಪೂಜೆ ಛೆಂದಾಗಿ ಮಾಡುವೆ ನಾನು ಪ

ಮಂದಹಾಸದಿ ಮೋದದಿಂದಲೇ ನೋಡು ದಯದಿ ಅ.ಪ.

ಜರದ ಪೀತಾಂಬರ ಕರದೊಳು ಧರಿಸಿರುವೆನೆಎರಕೋ ಹರಿಯ ಕೂಡ ಸರಸಿಜದಳ ನೇತ್ರಿಯೇ 1

ಮಂದಾರ ಮಲ್ಲಿಗೆ ಕುಂದದ ಚಂಪಕ ಜಾಜಿತಂದು ನಿಂತಿಹೆ ಹರಿಸುಂದರಿ ಸರಸದಿ ಮುಡಿಯೇ 2

ಗಂಧಕುಂಕುಮ ವೀಳ್ಯಾ ಬುಂದ್ಯಾ ಭಕ್ಷಗಳನುಬಂದು ಹರಿಯ ಕೂಡಿ ಛೆಂದಾಗಿ ಭುಂಜಿಸು ಬೇಗ 3

ಹರಡಿ ಕಂಕಣ ದುಂಡು ಹೆರಳು ಭಂಗಾರಗಳನುಹರುಷದಿಂದಲಿ ಕೃಷ್ಣನರಸಿ ತಂದಿಹೆ ನಿನಗೆ4

ಚಂದ್ರಶೇಖರ ಸುರವೃಂದಾದಿ ವಂದಿತ ಚರಣೆಇಂದಿರೇಶನ ಸಹ ಬಂದಿಲ್ಲಿ ತೋರಿಸು ಮುಖವಾ 5
********