..
kruti by ವೀರನಾರಾಯಣ Veeranarayana
ಮಂಗಳಂ ಜಯ ಮಂಗಳಂ ಪ
ಇಂಗಡಲ ಕುವರಿಗೆ ಮಂಗಳಕಾಯೆಗೆ ಅ.ಪ.
ಮೂಜಗದೊಳು ನಿತ್ಯ ಪೂಜಿತದೇವಿಗೆರಾಜೀವ ನಯನೆಗೆ ಭಾಗ್ಯವೀವಳಿಗೆ 1
ಹಸಿರು ಸೀರೆಯನುಟ್ಟು ಹಳದಿ ಕುಪ್ಪುಸತೊಟ್ಟುಎಸೆವ ಚಿನ್ನಾಭರಣನಿಟ್ಟು ಮೆರೆವವಳಿಗೆ 2
ಪ್ರತ್ಯಕ್ಷಾಪ್ರತ್ಯಕ್ಷ ಶಕ್ತಿಯ ದೇವಿಗೆನಿತ್ಯ ಸಂಸಾರಿಗಗತ್ಯವಿರುವವಳಿಗೆ 3
ಕುಲಗೋತ್ರವೆಣಿಸದಲೊಲಿಯುವ ದೇವಿಗೆನೆಲೆಗೊಡದ ಚಂಚಲೆಮಾಲಕುಮಿದೇವಿಗೆ 4
ಮದನನ ಮಾತೆಗೆ ಪದುಮಲಯಳಿಗೆಗದುಗಿನ ವೀರನಾರಾಯಣನ ಸತಿಗೆ 5
***