Showing posts with label ಸಿಕ್ಕಿದ್ಯೆಲ್ಲೋ ಕೃಷ್ಣಾ ನೀನು mahipati. Show all posts
Showing posts with label ಸಿಕ್ಕಿದ್ಯೆಲ್ಲೋ ಕೃಷ್ಣಾ ನೀನು mahipati. Show all posts

Wednesday, 11 December 2019

ಸಿಕ್ಕಿದ್ಯೆಲ್ಲೋ ಕೃಷ್ಣಾ ನೀನು ankita mahipati

ಮಿಶ್ರಪೀಲೂ ರಾಗ ಕೇರವಾ ತಾಳ

ಸಿಕ್ಕಿದ್ಯೆಲ್ಲೋ ಕೃಷ್ಣಾ ನೀನು ||ಪ||

ಸಿಕ್ಕಿದ್ಯೆಲ್ಲೋ ನಮ್ಮ ಕೈಯಾ
ಹೊಕ್ಕು ಮನಿಯಾ
ಹಕ್ಕಿಯೊಲಾದ್ಯೋ ತೆಕ್ಕಿಯಾ
ಪುಕ್ಕಸಾಟಿಯಾ ||೧||

ಬಿಟ್ಟರ ಗೊಲ್ಲತೇರಲ್ಲೋ
ಕಟ್ಟಿದಾ ಸೊಲ್ಲೋ
ಮುಟ್ಟಿ ಬಿಡುವರಲ್ಲೋ
ಘಟ್ಟ್ಯಾಗಿ ನಿಲ್ಲೋ ||೨||

ನಾವು ಬಲ್ಲೆವು ನಿನ್ನಾಟಾ
ಎವಿ ಹಾಕು ನೋಟಾ
ಹವಣಿಸಿ ಹಿಡಿದೇವೋ ನೀಟಾ
ಭಾವಿಸಿ ಈ ಮಾಟಾ ||೩||

ಬಲ್ಲತನವ ದೋರಿದ್ಯೋ
ಇಲ್ಲೆ ಮರುಳಾದ್ಯೋ
ನಿಲ್ಲೆ ನಮ್ಮೊಳು ನೀನಾದ್ಯೋ
ಎಲ್ಲಿಗೆ ಹೋದ್ಯೋ ||೪||

ವಶವಾಗಲಿಕ್ಕೆ ನಮಗ
ವಸುಧಿಯೊಳಗ
ಯಶೋದೆ ಹಡೆದಳು ಈಗ
ಲೇಸಾಗಿ ನಿನಗ ||೫||

ನಾವು ಹಿಡಿದೇವೆಂಬು ಮಾತಾ
ಪೂರ್ವಾರ್ಜಿತಾ
ನೆವನ ಮಾಡಿತೋ ನವನೀತಾ
ಸವಿದೋರಿ ಹಿತಾ ||೬||

ಭಾನುಕೋಟಿ ಸುವುದಯಾ
ಮುನಿಜನಾಶ್ರಯಾ
ನೀನಾಗಿ ಸಿಕ್ಕಿದ್ಯೋ ಕೈಯಾ
ದೀನ ಮಹಿಪತಿಯಾ ||೭||
****

ಸಿಕ್ಕಿದೆಲ್ಲೊ ಕೃಷ್ಣ ನೀನು ಸಿಕ್ಕಿದೆಲ್ಲೊ ನಮ್ಮ ಕೈಯ ಹೊಕ್ಕು ಮುನಿಯ ಹಕ್ಕಿಯೊಳಾದ್ಯೊ ತೆಕ್ಕಿಯ ಪುಕ್ಕಸಾಟಿಯ 1 

ಬಿಟ್ಟರ ಗೊಲ್ಲತೇರಲ್ಲೊ ಕಟ್ಟಿದ ಸೊಲ್ಲೊ ಮುಟ್ಟಿ ಬಿಡುವವರಲ್ಲೊ ಘಟ್ಯಾಗಿ ನಿಲ್ಲೊ 2 

ನಾವು ಬಲ್ಲೆವು ನಿನ್ನಾಟ ಎವಿ ಹಾಕುನೋಟಿ ಹವಣಿಸಿ ಹಿಡಿದೆವೊ ನೀಟ ಭಾವಿಸಿ ಈ ಮಾಟ 3 |

ಬಲ್ಲತನವದೋರಿದೊ ಇಲ್ಲಿ ಮರುಳಾದ್ಯೊ ನಿಲ್ಲೊ ನಮ್ಮೊಳು ನೀನಾದ್ಯೊ ಎಲ್ಲಿಗೆ ಹೋದ್ಯೊ 4 

ವಶವಾಗಲಿಕ್ಕ ನಮಗ ವಸುಧಿಯೊಳಗ ಯಶೋದೆ ಹಡೆದಳು ತಾ ಈಗ ಲೇಸಾಗಿ ನಿನಗ 5 

ನಾವು ಹಿಡಿದೇವೆಂಬುವ ಮಾತ ಪೂರ್ವಾರ್ಜಿತ ನವನೀತ ಸವಿದೋರಿ ಹಿತ 6 

ಭಾನುಕೋಟಿ ಸು ಉದಯ ಮುನಿಜನರಾಶ್ರಯ ನೀನಾಗಿ ಸಿಕ್ಕಿದ್ಯೊ ಕೈಯ ದೀನ ಮಹಿಪತಿಯ 7

***