Showing posts with label ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿ rangavittala ENU BHRAME MANUJARIGE ESHTU MAMATE PRKRUTIYALI. Show all posts
Showing posts with label ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿ rangavittala ENU BHRAME MANUJARIGE ESHTU MAMATE PRKRUTIYALI. Show all posts

Saturday, 4 December 2021

ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿ ankita rangavittala ENU BHRAME MANUJARIGE ESHTU MAMATE PRKRUTIYALI



ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿ
ಮೀನು ಗಾಳವ ನುಂಗಿ ಮೋಸಹೋದ ತೆರನಂತೆ  ||ಪ||

ನನ್ನ ಮನೆ ನನ್ನ ಸತಿ ನನ್ನ ಸುತರೆಂದೆನಿಸಿ
ಪೊನ್ನುಗಳ ಗಳಿಸಿ ಹೆಚ್ಚಾಗಿ ಹೋರ್ಯಾಡಿ
ಸಣ್ಣವರ ಮದುವೆ ಸಂಭ್ರಮದಿ ಮಾಡುವೆನೆಂದು
ಅನ್ನ ಮೊದಲು ಕಾಣದೆ ಅಂತರ ಪಿಶಾಚಿಯಂತೆ ||೧||

ಬಲುವೇದಿಕೆಯಲ್ಲಿ ಬಲ್ಲವರೆನಿಸಬೇಕೆನುತ
ಹಲವು ಬುದ್ಧಿಯಲ್ಲಿ ಹಿರ‍್ರನೆ ಹಿಗ್ಗುತ 
ಮಲಿನ ಮನಸಿನಜ್ಞಾನದಲಿ ತಾನರಿಯದೆ
ಬಲೆಯಲ್ಲಿ ಸಿಲುಕಿದ ಪಕ್ಷಿಯಂತೆ ಬಳಲುತಿಹ ||೨||

ಮಿಗಿಲು ಆಸೆಗೆ ಬಿದ್ದು ಬಗೆ ಬಗೆ ಹೂಣಿಕೆಯಲಿ
ಪೋಗದಲ್ಲಿ ಹೋಗುವರು ಹೊಲ ಬಿಟ್ಟು ತಿಳಿಯರು
ಖಗವಾಹನ ಮುದ್ದು ರಂಗವಿಠಲನ ನಾಮ ಸ್ಮರಿಸಲು
ವಿಗಡ ಸಂಸಾರ ಹಗರಣ ನೀರಗುಳ್ಳೆಯಂತೆ ||೩||
***
Enu bhrame manujarige eshtu mamate prakrutiyalli |
meenu gaalava nungi mosahoda teranante || pa ||

Nanna mane nanna sati nanna sutarendenisi |
honnugala galisi heccaagi horaadi |
sannavara maduve sambhramadi maaduvenendu |
anna modalu kaanade antar pishaaciyante || 1 ||

Balu Odikeyalli ballavarenisabekenuta |
halavu buddhiyali hirrane higguta |
balina manasinaj~jaanadali taanariyade |
baleyalli silukida pakshiyante balalutiha || 2 ||

Migilu aasege biddu bage bage hoonikeyali |
hogadalli hoguvaru holabittu tiliyaru |
khagavaahana muddu rangaviththalana naama smarisalu |
vigada samsaara hagarana neeragulleyante || 3 ||
***


Enu bhrame manujarige eShTu mamate prakRutiyali
mInu gaaLava nuMgi mOsahOda teranaMte  ||pa||

nanna mane nanna sati nanna sutareMdenisi
ponnugaLa gaLisi heccaagi hOryaaDi
saNNavara maduve saMbhramadi maaDuveneMdu
anna modalu kaaNade aMtara piSaaciyaMte ||1||

baluvEdikeyalli ballavarenisabEkenuta
halavu buddhiyalli hirrane higguta 
malina manasinaj~jaanadali taanariyade
baleyalli silukida pakShiyaMte baLalutiha ||2||

migilu Asege biddu bage bage hUNikeyali
pOgadalli hOguvaru hola biTTu tiLiyaru
Kagavaahana muddu raMgaviThalana naama smarisalu
vigaDa saMsaara hagaraNa nIraguLLeyaMte ||3||
***

ಏನು ಭ್ರಮೆ ಮನುಜರಿಗೆ ಎಷ್ಟು ಮಮತೆ ಪ್ರಕೃತಿಯಲಿ
ಮೀನು ಗಾಳವ ನುಂಗಿ ಮೋಸಹೋದ ತೆರನಂತೆ ||ಧ್ರುವ||

ನನ್ನ ಮನೆ ನನ್ನ ಸತಿ ನನ್ನ ಸುತರೆಂದೆನಿಸಿ
ಹೊನ್ನುಗಳ ಗಳಿಸಿ ಹೆಚ್ಚು ಹೋರ್ಯಾಡಿ
ಸಣ್ಣವರ ಮದುವೆ ಸಂಭ್ರಮದಿ ಮಾಡುವೆನೆಂದು
ಅನ್ನ ಮೊದಲು ಕಾಣದೆ ಅಂತರಪಿಶಾಚಿಯಂತೆ ||೧||

ಬಲುವೋದಿಕೆಯಲ್ಲಿ ಬಲ್ಲವರೆನಿಸಬೇಕೆನುತ
ಹಲವು ಬುದ್ಧಿಯಲಿ ಹಿರ್ರನೆ ಹಿಗ್ಗುತ
ಮಲಿನ ಮನಸಿನಜ್ಞಾನದಲಿ ತಾನರಿಯದೆ
ಬಲೆಯಲ್ಲಿ ಸಿಲುಕಿದ ಪಕ್ಷಿಯಂತೆ ಬಳಲುತಿಹ ||೨||

ಮಿಗಿಲು ಆಸೆಗೆ ಬಿದ್ದು ಬಗೆ ಬಗೆ ಹೂಣಿಕೆಯಲಿ
ಹೊಗದಲ್ಲಿ ಹೊಗುವರು ಹೊಲಬಿಟ್ಟು ತಿಳಿಯರು
ಖಗವಾಹನ ಮುದ್ದು ರಂಗವಿಠಲನ ನಾಮ ಸ್ಮರಿಸಲು
ವಿಗಡ ಸಂಸಾರ ಹಗರಣ ನೀರಗುಳ್ಳೆಯಂತೆ ||೩||
********