Showing posts with label ಜಯತು ಗೋಕುಲವಾಸ ದೈತ್ಯಪೂತವಿನಾಶ purandara vittala. Show all posts
Showing posts with label ಜಯತು ಗೋಕುಲವಾಸ ದೈತ್ಯಪೂತವಿನಾಶ purandara vittala. Show all posts

Friday, 6 December 2019

ಜಯತು ಗೋಕುಲವಾಸ ದೈತ್ಯಪೂತವಿನಾಶ purandara vittala

ರಾಗ ಸೌರಾಷ್ಟ್ರ ಝಂಪೆ ತಾಳ

ಜಯತು ಗೋಕುಲವಾಸ ದೈತ್ಯಪೂತವಿನಾಶ
ಜಯತು ಕ್ಲೇಶವಿನಾಶ ಸರ್ವಲೋಕೇಶ ||೧||

ಜಯತು ರುಕ್ಮಿಣಿನಾಥ ಅನಾಥರಿಗೆ ನಾಥ
ಜಯತು ಮಥುರಾನಾಥ ಪಾಲಿಸೋ ದಾತ ||೨||

ಜಯತು ಪಾವನಗಾತ್ರ ಚಾರುತರ ಚಾರಿತ್ರ
ಜಯತು ಜಲಜಾನೇತ್ರ ಮುನಿನುತಿಪಾತ್ರ ||೩||

ಜಯತು ಸಾವಿರನಾಮ ನೀಡೆನಗೆ ಪರಂಧಾಮ
ಜಯತು ಸಾರ್ವಭೌಮ ಭಕ್ತಿಯದು ಪರಮ ||೪||

ಜಯತು ತುಲಸೀಹಾರ ದಿವ್ಯದೊಂದಾಕಾರ
ಜಯತು ನಿನ್ನ ವಿಚಾರ ಅದು ಬಲು ಪಾರ ||

ಜಯತು ಪಾಂಡವಪಕ್ಷ ತುಂಟಯೋಧನಶಿಕ್ಷ
ಜಯತು ಲೋಕಾಧ್ಯಕ್ಷ ಧರ್ಮಸಂರಕ್ಷ ||

ಜಯತು ಶ್ರೀಭೂಲೋಲ ಭಕ್ತಜನಪರಿಪಾಲ
ಜಯತು ಪಾವನಶೀಲ ತಂದೆ ಪುರಂದರವಿಠಲ ||
*********