Showing posts with label ಅಭಯವೀಗಲೇ ಬೇಡೆ ಗುರು ಸುಬೋಧೇಂದ್ರಾರ್ಯರ pranesha vittala subodhendra teertha stutih. Show all posts
Showing posts with label ಅಭಯವೀಗಲೇ ಬೇಡೆ ಗುರು ಸುಬೋಧೇಂದ್ರಾರ್ಯರ pranesha vittala subodhendra teertha stutih. Show all posts

Saturday, 1 May 2021

ಅಭಯವೀಗಲೇ ಬೇಡೆ ಗುರು ಸುಬೋಧೇಂದ್ರಾರ್ಯರ ankita pranesha vittala subodhendra teertha stutih

 subodhendra teertha rayara mutt yati stutih

ರಾಗ : ಪೂರ್ವೀ  ತಾಳ : ಏಕ 


ಅಭಯವೀಗಲೇ ಬೇಡೆ । ಗುರು ।

ಸುಬೋಧೇಂದ್ರಾರ್ಯರ -

ನೋಡೆ ಸಖಿ  ।। ಪಲ್ಲವಿ ।।


ಪಾಪ ಕಳೆವಳಾಕಾಶ -

ಗಂಗೆ । ಬಹು ।

ತಾಪ ಕಳೆವ ದ್ವಿಜನಾಥ ।

ಆ ಪಾದಪ ದೈನ್ಯ ಹರೀ -

ಸುಗುಣವು ।

ಈ ಪುರುಷರಿಗೊಪ್ಪುವುದಲ್ಲೇ -

ಸಖಿ ।। ಚರಣ ।।


ಮೀನಾ ಕೂರ್ಮ ದ್ವಿಜ -

ನೋಡಿ ಸ್ಮರಿಸಿ ಮುಟ್ಟಿ ।

ಸೂನುಗಳನು ಸಲಹುವ ತೆರದಿ ।

ಸು ನೋಟದಿ ನೆನೆದು -

ಪಾದಸ್ಪರ್ಶ । ವಿ ।

ತ್ತಾನುತರನು ಪೋರೆವರು -

ಬಿಡದೆ ಸಖಿ ।। ಚರಣ ।।


ಈ ಸಂಯಮಿಗಳ 

ಕೃಪೆಯೊಂದಿರುತಿರೆ ।

ಏನು ಸಾಧನ ಇನ್ನೇತಕೆಲೆ ।

ನಾಶ ವೈಕುಂಠವೇ ಸರಿ । ಪ್ರಾ ।

ಣೇಶವಿಠ್ಠಲ ನಿವರಲ್ಲಿಹದಕೆ -

ಸಖಿ  ।। ಚರಣ ।।

****