..
ನಾನು ನನ್ನದು ಎಂಬ ಜಾಣ ಶೌರಿ ಪ
ಕಾಣಿಸದೆ ಖತಿಗೊಳಿಸುವುದುಚಿತಲ್ಲ ಮೊರೆ ಕೇಳು ಅ.ಪ
ಕಾಣುವುದು ಕೇಳುವುದು ಗಂಧ ರಸ ಸ್ಪರ್ಶಗಳು
ನಾನಾ ಬಗೆ ವಿಷಯಗಳು ನೀನೆ ರಂಗ
ಭಾನು ಕೋಟಿ ತೇಜ ಭಾವ ಭಕ್ತಿ ಸುಪ್ರೀಯ
ನಾ ನಿನ್ನವರ ಪಾದರಜ ರಕ್ಷಿತನೊ ಸ್ವಾಮಿ 1
ಶ್ರೀ ರಮಣಿ ಆನಂದ ಅಂಬುಧಿಯೆ ಅಬುಜಭವ
ವೀರ ಮೃಡ ಸುರ ಪೂಜ್ಯ ಪಾದ ವನಜ
ಆರು ನಾಲ್ಕು ತತ್ವ ಆದರ್ಶ ಪ್ರತಿಫಲಿತ
ಆನಂದ ಚಿತ್ಪ್ರಚುರ ಅನುರೂಪನೆ ಪಾಹೀ 2
ಕಲ್ಯಾಣ ಗುಣವನಧಿ ಜಯೇಶವಿಠಲ
ಕಲ್ಯಾಣ ಮಾಡೆನಗೆ ಕಾರುಣ್ಯಸಿಂಧು
ಎಲ್ಲ ಗುಣತ್ರಯ ರೂಪ ನಿನ್ನದೆಂಬೊ e್ಞÁನ
ಎಲ್ಲ ಕಾಲದಿ ಕೊಟ್ಟು ಶಿಷ್ಟರಲಿ ಇಡು ಎನ್ನ 3
***