Showing posts with label ಉಪ್ಪವಡಿಸಯ್ಯ ತ್ರಿವಿಕ್ರಮ ನಿನ್ನ ಪುರದೊಳಗೆ ಇಪ್ಪ ಮುಕುತರಿಗೆ ಸಲ್ಲದು ನಿದ್ರೆ hayavadana. Show all posts
Showing posts with label ಉಪ್ಪವಡಿಸಯ್ಯ ತ್ರಿವಿಕ್ರಮ ನಿನ್ನ ಪುರದೊಳಗೆ ಇಪ್ಪ ಮುಕುತರಿಗೆ ಸಲ್ಲದು ನಿದ್ರೆ hayavadana. Show all posts

Wednesday 1 September 2021

ಉಪ್ಪವಡಿಸಯ್ಯ ತ್ರಿವಿಕ್ರಮ ನಿನ್ನ ಪುರದೊಳಗೆ ಇಪ್ಪ ಮುಕುತರಿಗೆ ಸಲ್ಲದು ನಿದ್ರೆ ankita hayavadana

 ..

ಉಪ್ಪವಡಿಸಯ್ಯ ತ್ರಿವಿಕ್ರಮ ನಿನ್ನ ಪುರದೊಳಗೆ

ಇಪ್ಪ ಮುಕುತರಿಗೆ ಸಲ್ಲದು ನಿದ್ರೆ ನಿನಗಿಲ್ಲ

ಕಲ್ಪಾಂತದಲಿ ನಿತ್ಯವಾದ ವೇದವ ನೆನೆವ

ಸುಪ್ರಭಾವನಿಗೇಕೆ ಹೀನಮನುಜರ ಸಾಮ್ಯ ಪ.


ಹರಿನಾಲ್ಕು ಮನ್ವಂತ್ರಗಳನು ಹಗಲನು ಮಾಳ್ಪ

ವಿಧಿ ನಿನ್ನ ಕುವರನೆ ನಿದ್ರೆಗೊಪ್ಪದೆ ಬಂದ

ಇದು ಸರ್ವಸೊಪನ ಅನಿಮಿಷರೆಂಬ ಬಿರುದಿನವ

ರಿದಕೆ ಕೋಪಿಸಿ ಬಂದರು

ವಿಧಿ ತನ್ನ ಹಗಲ ನಡೆಸುತ ನಿನಗೆ ಈ ತೆರನ

ಮದನಪಿತ ತಾಳದೆ ಇಳೆಗೆ ನಡೆತಂದ

ಸದುಬುಧರು ತಮ್ಮ ವಿಷಯವ ನೆನೆವ ಜಂತುಗಳು

ಇದು ತಾಳೆವೆನುತ ಬಾಗಿಲೊಳು ಬಂದೈದಾರೆ 1


ನಿದ್ರೆಗೈವರ ಹೃದಯದಲ್ಲಿ ಭೂಭೂಯೆಂಬ

ಎದ್ದು ಬಹ ಶ್ವಾಸದಭಿಮಾನಿ ಮುಖ್ಯಪ್ರಾಣ

ಕ್ಷುದ್ರಗತಿ ತನ್ನಾಳ್ದಗಿದು ಪುಸಿಯೆನುತ ಬಂದ

ಮಧ್ವಸದ್ಭಾಷ್ಯಕಾರ

ಹೊದ್ದಿ ಕರಗಳ ಮುಗಿದು ಜೀವರಿಗು ನಿನಗು ಪ್ರ-

ಬುದ್ಧಜನೆನುತ ಬಂದ ವೇದಾಂತದೇವಿಯರು

ನಿರ್ದೋಷ ನೀನೆತ್ತ ನಿದ್ರೆಯೆತ್ತೆನುತ ಪಾದ-

ಪದ್ಮಗಳ ಪಿಡಿದು ಪಾಡುವ ಸಾಮಗಳ ಸವಿದು 2


ಅಪ್ರಾಕೃತನೆ ನಿನಗೆ ಈ ಪ್ರಕೃತಿಗುಣಗಳಿಂ-

ದಿಪ್ಪ ಯುಕ್ತಿಗಳ ಸುಪ್ತಿಗಳು ಸಲ್ಲವು ದೇವ

ಅಪ್ರಬುದ್ಧರ ಮುಂದೆ ಆಡುವಾಟಗಳು ಈ

ಸುಪ್ರಬುದ್ಧರ ಸಭೆಯಲಿ

ಸರ್ಪತÀಲ್ಪನೆ ತೋರಿದಯ್ಯ ಸಾಕೈನಟನೆ

ಸುಪ್ರಭಾತವು ಬಂತು ಹಯವದನ ದಿನದಿನದಿ

ತಪ್ಪದೆ ಮಾಡುವಘ್ರ್ಯದಿ ಸತ್ಕರ್ಮಗಳ

ಒಪ್ಪುಗೊಳು ಅಪ್ರತಿಮಮಹಿಮ ತ್ರಿವಿಕ್ರಮರಾಯ 3

***