Showing posts with label ನಿಗಮನುಳುಹಿಸಿ ನಗನೆಗದಿಹಗೆ ಜಗದೋದ್ದಾರ ಸುಭಗತ ಪ್ರಿಯಗೆ mahipati. Show all posts
Showing posts with label ನಿಗಮನುಳುಹಿಸಿ ನಗನೆಗದಿಹಗೆ ಜಗದೋದ್ದಾರ ಸುಭಗತ ಪ್ರಿಯಗೆ mahipati. Show all posts

Wednesday, 1 September 2021

ನಿಗಮನುಳುಹಿಸಿ ನಗನೆಗದಿಹಗೆ ಜಗದೋದ್ದಾರ ಸುಭಗತ ಪ್ರಿಯಗೆ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ನಿಗಮನುಳುಹಿಸಿ ನಗನೆಗದಿಹಗೆ ಜಗದೋದ್ದಾರ ಸುಭಗತ ಪ್ರಿಯಗೆ ಸುಗಮ ಧರಿ ಮೂರಡಿಯ ಮಾಡಿ ಸುಗೊಡಲ ಪಿಡಿದಿಹಗೆ ಬಗೆದು ಜಲಿಧಿಲಿ ಸೇತು ಗಟ್ಟಿದ ಖಗವಾಹನ ಯದುಕುಲ ಲಲಾಮಗೆ ಜಗಮೋಹಿಸುವ ಬೌದ್ಯಕಲ್ಕಿಗೆ ಶರಣು ಸುಶರಣು 1 

ಸಿರಿಯನಾಳುವ ದೊರಿಯೆ ನಿನ್ನ ಮರೆಯ ಹೊಕ್ಕಿಹ ಚರಣಕಮಲ ಸರಿಯ ಬಂದ್ಹಾಂಗೆನ್ನ ಹೊರವದು ನಿನ್ನ ದಯ ಘನವು ಬಿರುದು ನಿನ್ನದು ಸಾರುತಿಹುದು ಕರಿಯ ವರದಾನಂದ ಮೂರುತಿ ಸುರಿಸಿ ಕರುಣಾಮೃತವುಗರೆವುದು ತರಳ ಮಹಿಪತಿಗೆ 2 

ಮೂರ್ತಿ ಸದ್ಗುರು ನೆನೆವರನುದಿನ ಸಾರ್ಥ ಸದ್ಗುರು ಜನವನದೊಳನುಕೂಲ ಸದ್ಗುರು ತಾನು ತಾಂ ಎನಗೆ ಸಾರ ನೀಡುತ ತನುಮನದೊಳನುವಾಗಿ ಸಲಹುವ ದೀನಮಹಿಪತಿ ಸ್ವಾಮಿ ಭಾನುಕೋಟಿ ತೇಜನಿಗೆ 3 

ಶರಣಜನಾರಾಭರಣವಾಗಿಹ ಮೂರ್ತಿ ಸದ್ಗುರು ತರಣೋಪಾಯದ ಸಾರಸುಖವಿರುವ ನಿಜದಾತ ಪರಮಪಾವನ ಗೈಸುತಿಹ ವರ ಶಿರೋಮಣಿ ಭಕ್ತವತ್ಸಲ ಚರಣ ಸ್ಮರಣಿಲೆ ಪೊರೆವದನುದಿನ ತರಳ ಮಹಿಪತಿಗೆ 4 

ನೋಡದೆನ್ನವಗುಣದ ದೋಷವ ಮಾಡುವದು ಸದ್ಗುರು ದಯ ಘನ ನೀಡುವುದು ನಿಜ ಸಾರಸುಖವನು ಕರುಣದೊಲವಿಂದ ಬೇಡುವÀದು ನಿನ್ನಲ್ಲಿ ಪೂರಣ ಪ್ರೌಢ ಘನಗುರುಸಾರ್ವಭೌಮನೆ ಮೂಢ ಮಹಿಪತಿ ರಕ್ಷಿಸನುದಿನ ಸರ್ವಕಾಲದಲಿ 5 

ಸ್ವಾಮಿ ಸದ್ಗುರು ಸಾರ್ವಭೌಮನೆ ಕಾಮ ಪೂರಿತ ಕಂಜನಾಭನೆ ಸಾಮ ಗಾಯನ ಪ್ರಿಯ ಸಲವ್ಹೆನ್ನಯ ಶ್ರೀ ನಿಧಿಯೆ ಮಾಮನೋಹರ ಮನ್ನಿಸೆನ್ನ ನೀ ನೇಮದಿಂದಲಿ ಹೊರೆವದನುದಿನ ಕಾಮಧೇನಾಗಿಹ ಕರುಣದಿ ದೀನಮಹಿಪತಿಗೆ 6 

ಕುಂದ ನೋಡದೆ ಬಂದು ಸಲಹೆನ್ನಯ್ಯ ಪೂರ್ಣನೆ ಇಂದಿರಾವಲ್ಲಭನೆ ತಂದಿ ತಾಯಿ ನೀ ಎನಗೆ ಬಂಧು ಬಳಗೆಂದೆಂದು ನಿನ್ನನೆ ಹೊಂದಿ ಕೊಂಡಾಡುವ ಮೂಢ ನಾ ಬಂದ ಜನ್ಮವು ಚಂದಮಾಡು ನೀ ಕಂದ ಮಹಿಪತಿಗೆ 7 

ದೀನಬಂದು ದಯಾಬ್ಧಿ ಸದ್ಗುರು ಭಾನುಕೋಟಿ ತೇಜಪೂರ್ಣನೆ ನ್ಯೂನ ನೋಡದೆ ಪಾಲಿಸೆನ್ನ ನೀ ಘನಕರುಣದಲಿ ನೀನೆ ತಾಯಿತಂದೆಗೆ ನೀನೆ ಬಂಧುಬಳಗ ಪೂರಣ ನೀನೆ ನೀನಾಗ್ಹೊರೆವದನುದಿನ ದೀನಮಹಿಪತಿಗೆ 8

***