ಕಾಖಂಡಕಿ ಶ್ರೀ ಮಹಿಪತಿರಾಯರು
ನಿಗಮನುಳುಹಿಸಿ ನಗನೆಗದಿಹಗೆ ಜಗದೋದ್ದಾರ ಸುಭಗತ ಪ್ರಿಯಗೆ ಸುಗಮ ಧರಿ ಮೂರಡಿಯ ಮಾಡಿ ಸುಗೊಡಲ ಪಿಡಿದಿಹಗೆ ಬಗೆದು ಜಲಿಧಿಲಿ ಸೇತು ಗಟ್ಟಿದ ಖಗವಾಹನ ಯದುಕುಲ ಲಲಾಮಗೆ ಜಗಮೋಹಿಸುವ ಬೌದ್ಯಕಲ್ಕಿಗೆ ಶರಣು ಸುಶರಣು 1
ಸಿರಿಯನಾಳುವ ದೊರಿಯೆ ನಿನ್ನ ಮರೆಯ ಹೊಕ್ಕಿಹ ಚರಣಕಮಲ ಸರಿಯ ಬಂದ್ಹಾಂಗೆನ್ನ ಹೊರವದು ನಿನ್ನ ದಯ ಘನವು ಬಿರುದು ನಿನ್ನದು ಸಾರುತಿಹುದು ಕರಿಯ ವರದಾನಂದ ಮೂರುತಿ ಸುರಿಸಿ ಕರುಣಾಮೃತವುಗರೆವುದು ತರಳ ಮಹಿಪತಿಗೆ 2
ಮೂರ್ತಿ ಸದ್ಗುರು ನೆನೆವರನುದಿನ ಸಾರ್ಥ ಸದ್ಗುರು ಜನವನದೊಳನುಕೂಲ ಸದ್ಗುರು ತಾನು ತಾಂ ಎನಗೆ ಸಾರ ನೀಡುತ ತನುಮನದೊಳನುವಾಗಿ ಸಲಹುವ ದೀನಮಹಿಪತಿ ಸ್ವಾಮಿ ಭಾನುಕೋಟಿ ತೇಜನಿಗೆ 3
ಶರಣಜನಾರಾಭರಣವಾಗಿಹ ಮೂರ್ತಿ ಸದ್ಗುರು ತರಣೋಪಾಯದ ಸಾರಸುಖವಿರುವ ನಿಜದಾತ ಪರಮಪಾವನ ಗೈಸುತಿಹ ವರ ಶಿರೋಮಣಿ ಭಕ್ತವತ್ಸಲ ಚರಣ ಸ್ಮರಣಿಲೆ ಪೊರೆವದನುದಿನ ತರಳ ಮಹಿಪತಿಗೆ 4
ನೋಡದೆನ್ನವಗುಣದ ದೋಷವ ಮಾಡುವದು ಸದ್ಗುರು ದಯ ಘನ ನೀಡುವುದು ನಿಜ ಸಾರಸುಖವನು ಕರುಣದೊಲವಿಂದ ಬೇಡುವÀದು ನಿನ್ನಲ್ಲಿ ಪೂರಣ ಪ್ರೌಢ ಘನಗುರುಸಾರ್ವಭೌಮನೆ ಮೂಢ ಮಹಿಪತಿ ರಕ್ಷಿಸನುದಿನ ಸರ್ವಕಾಲದಲಿ 5
ಸ್ವಾಮಿ ಸದ್ಗುರು ಸಾರ್ವಭೌಮನೆ ಕಾಮ ಪೂರಿತ ಕಂಜನಾಭನೆ ಸಾಮ ಗಾಯನ ಪ್ರಿಯ ಸಲವ್ಹೆನ್ನಯ ಶ್ರೀ ನಿಧಿಯೆ ಮಾಮನೋಹರ ಮನ್ನಿಸೆನ್ನ ನೀ ನೇಮದಿಂದಲಿ ಹೊರೆವದನುದಿನ ಕಾಮಧೇನಾಗಿಹ ಕರುಣದಿ ದೀನಮಹಿಪತಿಗೆ 6
ಕುಂದ ನೋಡದೆ ಬಂದು ಸಲಹೆನ್ನಯ್ಯ ಪೂರ್ಣನೆ ಇಂದಿರಾವಲ್ಲಭನೆ ತಂದಿ ತಾಯಿ ನೀ ಎನಗೆ ಬಂಧು ಬಳಗೆಂದೆಂದು ನಿನ್ನನೆ ಹೊಂದಿ ಕೊಂಡಾಡುವ ಮೂಢ ನಾ ಬಂದ ಜನ್ಮವು ಚಂದಮಾಡು ನೀ ಕಂದ ಮಹಿಪತಿಗೆ 7
ದೀನಬಂದು ದಯಾಬ್ಧಿ ಸದ್ಗುರು ಭಾನುಕೋಟಿ ತೇಜಪೂರ್ಣನೆ ನ್ಯೂನ ನೋಡದೆ ಪಾಲಿಸೆನ್ನ ನೀ ಘನಕರುಣದಲಿ ನೀನೆ ತಾಯಿತಂದೆಗೆ ನೀನೆ ಬಂಧುಬಳಗ ಪೂರಣ ನೀನೆ ನೀನಾಗ್ಹೊರೆವದನುದಿನ ದೀನಮಹಿಪತಿಗೆ 8
***
No comments:
Post a Comment