Showing posts with label ಬಂದಾರೆ ಅತ್ತಿಗೆಯರು ಚಂದನೋಡಿರೆಚಂದ ನೋಡಿರೆ ಇಂದಿರೇಶನ ramesha. Show all posts
Showing posts with label ಬಂದಾರೆ ಅತ್ತಿಗೆಯರು ಚಂದನೋಡಿರೆಚಂದ ನೋಡಿರೆ ಇಂದಿರೇಶನ ramesha. Show all posts

Wednesday 4 August 2021

ಬಂದಾರೆ ಅತ್ತಿಗೆಯರು ಚಂದನೋಡಿರೆಚಂದ ನೋಡಿರೆ ಇಂದಿರೇಶನ ankita ramesha

.. 

ಬಂದಾರೆ ಅತ್ತಿಗೆಯರು ಚಂದನೋಡಿರೆಚಂದ ನೋಡಿರೆ ಇಂದಿರೇಶನ ಮುದ್ದುತಂಗಿಯರು ಕರೆಯಲು ಬಂದಾರೆ ಪ.

ಸಾಲು ದೀವಿಗೆಯಂತೆ ಬಾಲೆಯರು ನಿಂತಾರೆ ಮ್ಯಾಲೆ ಸುಭದ್ರೆ ದ್ರೌಪತಿಯೆ ಇಂದೀವರಾಕ್ಷಿಮ್ಯಾಲೆ ಸುಭದ್ರೆ ದ್ರೌಪತಿ ನುಡಿದಳು ಮೇಲೆಂದು ನಿಮ್ಮ ದೊರೆತನ ಇಂದೀವರಾಕ್ಷಿ 1

ಕೃಷ್ಣನ ಮಡದಿಯರು ಎಷ್ಟು ದಯವಂತರು ಅಷ್ಟೂರಲ್ಲಿದ್ದ ಗರುವನೆಅಷ್ಟ್ಟೂರಲ್ಲಿದ್ದ ಗರುವನೆ ತುರುಬಿಗೆ ಮಲ್ಲಿಗೆ ಮಾಡಿ ಮುಡಿದಾರೆ2

ಫುಲ್ಲನಯನರ ದೈವ ಎಲ್ಲಿವರ್ಣಿಸಬೇಕುಎಲ್ಲರಲ್ಲಿದ್ದ ಗರುವನೆ ಎಲ್ಲರಲ್ಲಿದ್ದ ಗರುವನೆ ತಮ್ಮಲ್ಲಿಟ್ಟುಕೊಂಡಾರೆವಿನಯದಿ ಸಖಿಯೆ ಇಂದೀವರಾಕ್ಷಿ 3

ಹಿರಿಯ ಅತ್ತಿಗೆ ತಾನು ಗರುವಿನ ಸೀರೆಯನುಟ್ಟುಬರಿಯ ಬಿಂಕದ ಕುಪ್ಪುಸವ ತೊಟ್ಟುಬರಿಯ ಬಿಂಕದ ಕುಪ್ಪುಸವ ತೊಟ್ಟುಕರೆಯಲಿ ನಮ್ಮ ಇದುರಿಗೆ ಇಂದೀವರಾಕ್ಷಿ4

ಮಡದಿ ಸತ್ಯಭಾಮೆ ಬಡಿವಾರದ ಸೀರೆಯನುಟ್ಟುಕಡುಕೋಪವೆಂಬೊ ಕುಪ್ಪುಸವಕಡುಕೋಪವೆಂಬೊ ಕುಪ್ಪುಸವ ತೊಟ್ಟುಒಡಗೂಡಿ ನಮ್ಮ ಕರೆಯಲು ಇಂದೀವರಾಕ್ಷಿ5

ಅಷ್ಟು ಮಡದಿಯರು ಅತಿ ಸಿಟ್ಟಿನ ಸೀರೆಯನುಟ್ಟುಅಷ್ಟ ಮದವೆಂಬೊ ಕುಪ್ಪುಸವಅಷ್ಟ ಮದವೆಂಬೊ ಕುಪ್ಪುಸವ ತೊಟ್ಟುಧಿಟ್ಟಯರು ನಮ್ಮ ಕರೆಯಲು ಇಂದೀವರಾಕ್ಷಿ6

ಭಾಪುರಿ ಅತ್ತಿಗೆಯರು ಕೋಪದೊಸ್ತಗಳಿಟ್ಟುಭೂಪರಾಮೇಶನ ಮಡದಿಯರುಭೂಪರಾಮೇಶನ ಮಡದಿಯರು ಬಂದರೆದ್ರೌಪತಿ ದೇವಿಯ ಕರೆಯಲು ಇಂದೀವರಾಕ್ಷಿ 7

****