yes
ಗುರುರಾಯರ ನಂಬಿರೋ | ರಾಘವೇಂದ್ರ
ಗುರುರಾಯರ ನಂಬಿರೋ || ಪ ||
ಗುರುರಾಯರ ನಂಬಿ | ದುರಿತ ದುಷ್ಕೃತ ಹರಿಸಿ
ಪುರುಷಾರ್ಥ ಪರಮವ ಕರಗತ ಕೈಗೊಳ್ಳಿ || ಅಪ||
ಪರಿಮಳೇತ್ಯಾದಿ ಸಂದ್ಗ್ರಂಥ | ವಿರಚಿಸಿ
ಪರಮೋಚ್ಚಪ್ರದವೆನಿಸುವಂಥ |
ಎರಡೆರಡ್ಹತ್ತು ಮತ್ತೆ | ಎರಡೈದು ಗ್ರಂಥವ
ಧರಣಿ ಸುರರಿಗಿತ್ತು | ಕರುಣವ ತೋರಿದ || 1 ||
ರಾಮಕೃಷ್ಣ ನರಹರೀ | ವೇದವ್ಯಾಸ
ಮಾಮನೋಹರ ವೃಂದಾವನದಿ
ವಾಮಾಂಗ ಎನಿಸೀಹ | ಶ್ರೀಮಹಿಳೆಸಹಿತಾಗಿ
ಕಾಮಿತಾರ್ಥದ ಹರಿ | ನೇಮದಿ ನೆಲಸೀಹ || 2 ||
ಕೂಸೆರಡರ ದಯದೀ | ಮಂತ್ರಾಲಯ
ದೇಶಕೆ ಪೋಗಿ ಮುದದೀ |
ಲೇಸು ಸೇವೆಯ ಗೈಯ್ಯೆ | ಕಾಸರೋಗವನೀಗಿ
ಮೇಶ ಗುರುಗೋವಿಂದ | ದಾಸನ್ನಾಗಿಸಿದ || 3 ||
********