ಚನ್ನಪಟ್ಟಣದ ಅಹೋಬಲದಾಸರು
ತುಳಸಿರಾಮದಾಸರ ಅಂತಿಮ ಯಾತ್ರೆ ಬೆಂಗಳೂರಿಗೆ ಹೋಗಿ ಬಂದರೂ ಮೈಸೂರಿಂದಾ ಪ
ಬೆಂಗಳೂರಿಗೆ ಹೋಗಿಬಂದ ಜಂಗಮನು ತಾನಾಗಿ ನಿಂದಾ ಕಂಗಳೆರಡರ ಮಧ್ಯ ತಾ ನಿಜ ಲಿಂಗನಾಗಿ ಕಾಣಬಂದಾ ಅ.ಪ ಬಿದಿಗೆ ಪಾಡ್ಯವ ಮಾಡಿ ನೋಡೆಂದಾ ಬಂದಾಗ ಬರದಾ ವಿಧಿಯ ಬರಹವ ತೊಡೆದುಕೊಂಡೆಂದ ಕದಿವ ಕಳ್ಳರ ಕಂಡುಹಿಡಿದು ಮದನಪಿತನಾ ಯುಧದಿ ಹೊಡೆದೂ ನದಿಯ ಸ್ನಾನವ ಮಾಡಿ ನಿಜ ಪದವಿ ತೋರಿದ ನಮ್ಮ ದೇಶಿಕ 1
ಸೃಷ್ಟಿ ತದಿಗೆಯೊಳಿರಲು ಬೇಡೆಂದಾ ಅಲ್ಲಾಗ ತನ್ನ ಇಷ್ಟದೈವದ ಪೂಜೆ ಮಾಡೆಂದಾ ದೃಷ್ಟಿಗೋಚರಮಾದ ಗುರುವು ಸೃಷ್ಟಿಗಧಿಕಾ ತುಲಶಿರಾಮನ ಇಷ್ಟದಿಂದಲಿ ಭಜಿಸಿನೋಡಲು ಸ್ಪಷ್ಟನಾಗಿ ಕಾಣುತೈತೆ 2
***