Showing posts with label ರಂಗನಾಯಕ ರಾಜೀವ ಲೋಚನ ರಮಣನೇ purandara vittala RANGANAYAKA RAJEEVALOCHANA RAMANANE. Show all posts
Showing posts with label ರಂಗನಾಯಕ ರಾಜೀವ ಲೋಚನ ರಮಣನೇ purandara vittala RANGANAYAKA RAJEEVALOCHANA RAMANANE. Show all posts

Friday 17 December 2021

ರಂಗನಾಯಕ ರಾಜೀವ ಲೋಚನ ರಮಣನೇ purandara vittala RANGANAYAKA RAJEEVALOCHANA RAMANANE




ರಂಗನಾಯಕ ರಾಜೀವ ಲೋಚನ
ರಮಣನೇ ಬೆಳಗಾಯಿತು ಏಳೆನ್ನುತಾ ।ಪ।

ಅಂಗನೇ  ಲಕುಮಿ ತಾ ಪತಿಯನೆಬ್ಬಿಸಿದಳು
ಶೃಂಗಾರದ ನಿದ್ರೆ ಸಾಕೆನ್ನುತಾ ।।ಪ।।

ಪಕ್ಷಿರಾಜನು ಬಂದು ಬಾಗಿಲಲ್ಲಿ ನಿಂದು
ಅಕ್ಷಿ ತೆರೆದು ಬೇಗ ಈಕ್ಷೀಸೆಂದು
ಪಕ್ಷಿ ಜಾತಿಗಳೆಲ್ಲಾ ಚಿಲಿಪಿಲಿಗುಟ್ಟುತಾ
ಸೂಕ್ಷ್ಮದಲ್ಲಿ ನಿನ್ನ ಸ್ಮರಿಸುವವೋ ಕೃಷ್ಣ ।।ಪ।।


ಸನಕ ಸನಂದನ  ಸನತ್ಸುಜಾತರು ಬಂದು
ವಿನಯದಿಂ ಕರ ಮುಗಿದು ಓಲೈಪರು
ಘನಶುಕ  ಶೌನಕ ವ್ಯಾಸ ವಾಲ್ಮೀಕರು
ನೆನೆದು ನೆನೆದು ಕೊಂಡಾಡುವರು  ಹರಿಯೇ ।।ಪ।।

ಸುರರು ಕಿನ್ನರರು ಕಿಂಪುರುಷರು ಉರಗುರು
ಪರಿಪರಿಯಲಿ  ನಿನ್ನ ಸ್ಮರಿಸುವರು
ಅರುಣನು ಬಂದು ಉದಯಾಚಲದಲಿ ನಿಂದು
ಕಿರಣ ತೋರುವನು  ಭಾಸ್ಕರನು ಶ್ರೀಹರಿಯೇ ।।ಪ।।

ಪದುಮನಾಭನೇ  ನಿನ್ನ ನಾಮಾಮೃತವನ್ನು
ಪದುಮಾಕ್ಷಿಯರು ತಮ್ಮ ಗೃಹದೊಳಗೆ
ಉದಯದೊಳೆದ್ದು ಸವಿದಾಡುತ್ತಾ  ಪಾಡುತ್ತಾ
ದಧಿಯ ಕಡೆವರೇಳೋ  ಮಧುಸೂಧನ ಕೃಷ್ಣಾ।।ಪ।।

ಮುರಮಥನನೇ  ನಿನ್ನ ಚರಣದ  ಸೇವೆಯ
ಕರುಣಿಸಬೇಕೆಂದು ತರುಣಿಯರು
ಪರಿಪರಿಯಿಂದಲೇ  ಸ್ಮರಿಸಿ ಹಾರೈಪರು
ಪುರಂದರ ವಿಠಲ ನೀನೇಳೋ  ಶ್ರೀ ಹರಿಯೇ।।ಪ।।
***


pallavi

ranganAyaka svmi rAjIvalOcana beLagAyitELennuta angane lakumi tA patiyanebbisidaLu shrngArada nidre sAkennuta

caraNam 1

pakSirAjanu bandu bAgiLoLage nindu akSiteredu bEga IkSisemba
pakSi jAtigaLella cilipili guTTuda sUkSmadali ninnanu smarisuvuvO krSNa

caraNam 2

sanaka sanandana sanatsujAtaru bandu vinayadi kai mugidu Olaiparu
ghana suka shaunaka vyAsa vAlmIkaru nenedu koNDADuvaro hariyE

caraNam 3

suraru kinnararu kimpuruSaru uragaru paripariyali ninna smsrisuvaru
araNanu bandu dayAcaladali ninda kiraNa tOruva bhAskaranu shrI hariyE

caraNam 4

padumanAbhane ninna nAmAmrtavanu padumAkSiyaru tamma maneyoLage
udayadoLeddu savidADuta pADuta dadhiya kaDevarELu madhusUdana krSNa

caraNam 5

muramathanane ninna caraNada sEveya karuNisa bEkendu teruNiyaru
paripariyindali smarisi hAraiparu purandara viTTala nInELo hariyE
***

ಪುರಂದರದಾಸರು

ರಂಗನಾಯಕಸ್ವಾಮಿ ರಾಜೀವಲೋಚನ ಬೆಳಗಾಯಿತೇಳೆನ್ನುತ
ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳುಶೃಂಗಾರದ ನಿದ್ರೆ ಸಾಕೆನ್ನುತ ಪ.

ಪಕ್ಷಿರಾಜನು ಬಂದು ಬಾಗಿಲೊಳಗೆನಿಂದುಅಕ್ಷಿ ತೆರೆದು ಬೇಗ ಈಕ್ಷಿಸೆಂಬ ||ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತಸೂಕ್ಷ್ಮದಲಿ ನಿನ್ನನು ಸ್ಮರಿಸುವುವೊ ಕೃಷ್ಣ 1

ಸನಕ - ಸನಂದನ - ಸನತ್ಸುಜಾತರು ಬಂದುವಿನಯದಿ ಕೈಮುಗಿದು ಓಲೈಪರು ||ಘನಶುಕ - ಶೌನಕ - ವ್ಯಾಸ ವಾಲ್ಮೀಕರುನೆನೆದು ಕೊಂಡಾಡುವರೊ ಹರಿಯೇ 2

ಸುರರು ಕಿನ್ನರರು ಕಿಂಪುರುಷರು ಉರಗರುಪರಿಪರಿಯಲಿ ನಿನ್ನ ಸ್ಮರಿಸುವರು ||ಅರುಣನು ಬಂದುದಯಾಚಲದಲ್ಲಿ ನಿಂದಕಿರಣ ತೋರುವ ಭಾಸ್ಕರನು ಶ್ರೀ ಹರಿಯೇ 3

ಪದುಮನಾಭನೆ ನಿನ್ನ ನಾಮಾಮೃತವನುಪದುಮಾಕ್ಷಿಯರು ತಮ್ಮ ಮನೆಯೊಳಗೆ ||ಉದಯದೊಳೆದ್ದು ಸವಿದಾಡುತ ಪಾಡುತದಧಿಯ ಕಡೆವರೇಳು ಮಧುಸೂದನ ಕೃಷ್ಣ 4

ಮುರುಮಢನನೆ ನಿನ್ನ ಚರಣದ ಸೇವೆಯಕರುಣಿಸಬೇಕೆಂದು ತರುಣಿಯರು ||ಪರಿಪರಿಯಿಂದಲಿ ಸ್ಮರಿಸಿ ಹಾರೈಪರುಪುರಂದರವಿಠಲ ನೀನೇಳೊ ಹರಿಯೇ 5
**********