Showing posts with label ಕ್ಷೇತ್ರಕ್ಷೇತ್ರಗಳಲ್ಲಿ ಕ್ಷೇತ್ರಜ್ಞನಾರೆಂದು uragadrivasa vittala ankita suladi. Show all posts
Showing posts with label ಕ್ಷೇತ್ರಕ್ಷೇತ್ರಗಳಲ್ಲಿ ಕ್ಷೇತ್ರಜ್ಞನಾರೆಂದು uragadrivasa vittala ankita suladi. Show all posts

Monday 2 August 2021

ಕ್ಷೇತ್ರಕ್ಷೇತ್ರಗಳಲ್ಲಿ ಕ್ಷೇತ್ರಜ್ಞನಾರೆಂದು uragadrivasa vittala ankita suladi

 ಧ್ರುವತಾಳ

ಕ್ಷೇತ್ರಕ್ಷೇತ್ರಗಳಲ್ಲಿ ಕ್ಷೇತ್ರಜ್ಞನಾರೆಂದು

ಕ್ಷೇತ್ರದೊಳು ಜ್ಞೇಯವಸ್ತುವನ್ನೇ ತಿಳಿದು

ಗಾತ್ರವ ದಂಡಿಸಿ ಯಾತ್ರೆಯ ಮಾಡಿ

ಚಿತ್ರಚರಿತ ಹರಿಭಕ್ತರೊಡನೆ ಕೂಡಿ

ರಾತ್ರಿ ಹಗಲೆನ್ನದೆ ಸ್ತೋತ್ರಮಾಡುತ ಸಂ-

ವಿತ್ರನಾಗಿ ಸತತ ಪುತ್ರಕಳತ್ರರಿಂದಧಿಕ

ಪ್ರೀತಿಯ ನಿತ್ಯ ಇಟ್ಟು ಶ್ರೀಪತಿಪಾದ

ಭಕ್ತಿಯಿಂದಲಿ ನೆನೆದು ಎತ್ತಿ ಸಂಚರಿಸಲು

ಅತ್ತತ್ತ ಕ್ಷೇತ್ರವು ಉತ್ತಮೋತ್ತಮ ನಮ್ಮ

ಶ್ರೀ ವೇಂಕಟೇಶನು ಅತ್ತಿತ್ತ ಬಿಡದೆ ನಮ್ಮ

ಉದ್ಧರಿಪ ಭವÀದಿಂದ 1


ಮಟ್ಟತಾಳ

ಭೂತಪಂಚಕ ಮಹದಹಂಕಾರದಿ ಬುದ್ಧಿ

ಸತ್ವಾದಿಗುಣತ್ರಯ ಶ್ರೋತ್ರಾದಿ ಪಂಚಕ

ಮನಸು ಕಮೇಂದ್ರಿಯ ತತುಮಾತ್ರಗಳೆಲ್ಲ

ಕ್ಷೇತ್ರವೋ ಶ್ರೀಪತಿಗೆ ನಿತ್ಯಾಭಿಮಾನಿಗಳು

ಕ್ಷೇತ್ರಕ್ಕೆ ಇಹರಯ್ಯ ತತ್ವಾಭಿಮಾನಿಗಳೆಂದೆನಿಸುವರು

ಇವರ ಅಂತರದಿ ಹರಿ ತಾ ನಿರಂತರದಿ ನಿಂತು

ತತ್ತತ್ಕಾರ್ಯಗಳ ಪ್ರೇರಿಸಿ ಮಾಡಿಸುವ

ಬಿತ್ತರಿಸಲು ಸಲ್ಲ ಕ್ಷೇತ್ರಜ್ಞನಾ ಮಹಿಮೆ

ಚಿತ್ತಜಪಿತ ನಮ್ಮ ಶ್ರೀವೇಂಕಟೇಶನೆ

ನಿತ್ಯ ಸರ್ವತÀ್ರದಿ ವ್ಯಾಪ್ತ ನಿರ್ಲಿಪ್ತ 2


ತ್ರಿವಿಡಿತಾಳ

ಭಿನ್ನ ಜೀವರೊಳು ಅಭಿನ್ನ ತಾನಾಗಿ

ಭಿನ್ನರೂಪಕ್ರಿಯವ ಭಿನ್ನ ಭಿನ್ನವೇ ಮಾಡಿ

ಭಿನ್ನಜೀವರ ಇಚ್ಛೆಗನುಸರಿಸಿ ಪ್ರೇರಿಸಿ

ಭಿನ್ನಕಾರ್ಯಗಳ ಫಲ ಭಿನ್ನವನ್ನೆ ಇತ್ತು

ತನ್ನಿಚ್ಛೆಯಿಂದ ಚೇತನ ಅಚೇತನದಲ್ಲಿ

ನನ್ನಿಯಿಂದಲಿ ಚರಿತ ತನ್ನ ಕಿಳಿಗೊಡದಲೆ

ಘನ್ನಕಾರ್ಯವನೆಸಗಿ ಜೀವರನುಭವಕೀವ

ಪನ್ನಂಗಶಯನ ಶ್ರೀ ವೇಂಕಟೇಶನು ಸರ್ವ

ಕ್ಷೇತ್ರದೊಳಿದ್ದು ನನ್ನಿಯಿಂದಲಿ ಪೊರೆವ 3


ಅಟ್ಟತಾಳ

ಪ್ರಕೃತಿ ಮೊದಲಾದ ತತ್ಪಂಗಳೆಲ್ಲ

ಅಕಳಂಕ ಶ್ರೀಹರಿಗೆ ಕ್ಷೇತ್ರಂಗಳಾಗಿಹವು

ಸಕಲಾಭಿಮಾನಿಗಳು ದೇಹಕ್ಷೇತ್ರದೊಳಿಹರು

ಪ್ರಕೃತಿ ಪರಿಣಾಮದಿಂ ಜೀವಸ್ವರೂಪ ವೈ

ತಕ್ಕ ಕ್ಷೇತ್ರ ವಿಕಾರವಿದಕಿಹುದಯ್ಯ

ಸುಖದುಖ ಧೈರ್ಯೇಚ್ಛ ಚೇತನ ಶರೀರವು

ತಕ್ಕ ಅಭಿಮಾನಿಗಳು ನಿಂತು ನಡಿಸುವರಯ್ಯ

ಪಕ್ಕಿವಾಹನನಿಂದ ಪ್ರೇರಿತವು ಪ್ರಕೃತಿಯು

ಮಿಕ್ಕಮಾತೇನು ಶ್ರೀಹರಿಗಿದು ಕ್ಷೇತ್ರವು

ಪ್ರಕೃತಿಜನ್ಯವಾದ ದೇಹವಿಲ್ಲದೆ ಜೀವ

ತಕ್ಕ ಸಾಧನವನ್ನು ಮಾಳ್ಪುದಿಲ್ಲೆಂದಿಗು

ಲೋಕೇಶಪಿತÀ ನಮ್ಮ ಶ್ರೀ ವೇಂಕಟೇಶನ

ಅಜಾಂಡಾಂತರ್ಬಹಿ ಸರ್ವಕ್ಷೇತ್ರಜ್ಞನಯ್ಯ 4


ಆದಿತಾಳ

ಅಣುಮಹತ್ತಿಗಿಂತ ಅಣುಮಹತ್ತಾಗಿ

ಪಾಣಿಪಾದದಿ ಪೂರ್ಣ ದೇಹಶಕ್ತಿಯ ತನು

ಪೂರ್ಣಶಕ್ತಿಯೆಂತೊ ಇಂದ್ರಿಯ ಶಕ್ತಿ

ಪೂರ್ಣ ಅಂಗದ ಶಕ್ತಿ ಎಂತೋ ಅಂತಿರ್ಪುದಯ್ಯ

ಕಾಣಿಸಿಕೊಳ್ಳದಲೇ ಕಾರ್ಯ ನಡೆಯುವುದಯ್ಯ

ಗುಣಗಣ ಪರಿಪೂರ್ಣ ಬ್ರಹ್ಮಾದಿವಂದ್ಯನು

ಕ್ಷಣದೊಳು ತಾ ನೆನೆಸೆ ಬ್ರಹ್ಮಾಂಡ ಕೋಟಿಗಳು

ಗಣನೆಯಿಲ್ಲದೆ ಸೃಷ್ಟಿಲಯವ ಗೈಸಲು ಬಲ್ಲ

ತೃಣ ಮೊದಲು ಬ್ರಹ್ಮಾದಿ ಜೀವಗಣಗಳನ್ನು

ಕ್ಷಣ ಬಿಡದಲೆ ರಕ್ಷಿಸುವ ಶ್ರೀ ವೇಂಕಟೇಶಾ 5


ಜತೆ

ಜ್ಞೇಯವಸ್ತುವು ಸರ್ವನಿಯಾಮಕನು ನೀನೆ

ಶ್ರೀಯರಸನೆ ಕಾಯೋ ಶ್ರೀ ವೇಂಕಟೇಶನೆ

*****