ಪಿಳ್ಳಂಗೋವಿಯ ಚೆಲುವ ಕೃಷ್ಣನ
ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿ|| ಪ ||
ಎಲ್ಲಿ ನೋಡಿದರಲ್ಲಿ ತನಿಲ್ಲ ದಿಲ್ಲವೆಂದು ಬಲ್ಲ ಜಾಣರು || ಅ.ಪ ||
ನಂದಗೋಪನ ಮಂದಿರಗಳ ಸಂದುಗೊಂದಿನಲಿ
ಚಂದ ಚಂದದ ಗೋಪ ಬಾಲರ ವೃಂದ ವೃಂದದಲಿ
ಸುಂದರಾಂಗದ ಸುಂದರೀಯರ ಹಿಂದು ಮುಂದಿನಲಿ
ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ||೧||
ಶ್ರೀ ಗುರುಕ್ತ ಸದಾ ಸುಮಂಗಳ ಯೋಗ ಯೋಗದಲಿ
ಅಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ
ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ
ಭಾಗವತರು ಸದಾ ಬಾಗಿ ಪಡುವ ರಾಗ ರಾಗದಲಿ||೨||
ಈ ಚರಾಚರದೊಳಗೆ ಜನಂಗಳ ಆಚೆ ಈಚೆಯಲಿ
ಕೆಚರೇಂದ್ರನ ಸುತನ ರಥದ ಚೌಕ ಪೀಠದಲಿ
ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ
ವೀಚುಕೊಂಡದ ಪುರಂದರ ವಿಠಲನ ಲೋಚನಾಗ್ರದಲಿ||೩||
****
ರಾಗ : ಕಲ್ಯಾಣಿ ತಾಳ : ತ್ರಿವಿಡೆ (raga, taala may differ in audio)
pillangoviya chelva krishnana elli nodidiri l
rangana elli nodidiri l
elli nodidaralli tanilla dillavendu balla janare ll
nandagopana mandirangala sandu gondinali l
chanda chandada gopa balara vrunda vrundadali l
sundarangada sundariyara hindu mundinali l
andadakala kanda karugala mande mandeyali ll
Sri gurukta sada sumangala yoga yogadali l
Agamartha dolage maduva yaga yagadali l
Srige bhagyanagi vartipa boga bogadali l
bhagavataru sada hadi paduva raga ragadali ll
i chara charadolage janangala ache icheyali l
kecharendrana sutana rathada achcha pithadali l
nachade madhava keshava emba vacha kangalali l
pichukondada purandara vittalana lochanagradali ll
***
pillangoviya cheluva krsnana elli nodidiri rangana elli nodidiri
elli nodidaralli tanilla dillavendu balla janaru
nandagopana mandiragala sandugondinali
chanda chandada gopa balara vrnda vrnadadali
sundarangada sundariyara hindu mundinali
andadakala kanda karugala manda mandeyali||1||
shri gurukta sada sumangala yoga yogadali
agamartadolage maduva yaga yagadali
Shrige bhagyanagi vartipa bhoga bhogadali
bhagavataru sada bagi paduva raga ragadali||2||
ee characharadolage janangala Ache Icheyali
kesarendrana sutana rathada chauka pithadali
nacade madhava emba bhaktara vacakangalali
vicukondada purandara vittalana locanagradali ||3||
***
pallavi
piLLangOviya celuva. rAgA: kalyANi. tripuTa tALA. P : piLLangOviya celuva krSNana elli nODidiri rangana elli nODidiri
anupallavi
elli nODidaralli tAnilla dillavendu balla jANaru
caraNam 1
nandagOpana mandiragaLa sandugondinali canda candada gOpa bAlara vrndA vrnadadali
sundarAngada sundariyara hindu mundinali andadAkaLa kanda karugaLa manda mandeyali
caraNam 2
shrI gurUkta sadA sumangaLa yOga yOgadali AgamArtadoLage mADuva yAga yAgadali
shrIge bhagyanAgi vartipa bhOga bhOgadali bhAgavataru sadA bAgi pADuva rAga rAgadali
caraNam 3
I caracaradoLage janangaLa Ace Iceyali kEcarendrana sutana rathada cauka pIThadali
nAcade mAdhava emba bhaktara vAcakangaLali vIcukonDada purandara viTTalana lOcanAgradali
***
ಕೀರ್ತನೆ :- ಪಿಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ || ಪಲ್ಲವಿ||
ಎಲ್ಲಿ ನೋಡಿದರಲ್ಲಿ ತಾನಿಲ್ಲದಿಲ್ಲವೆಂದು ಬಲ್ಲ ಜಾಣರೇ|| ಅನುಪಲ್ಲವಿ||
ಅರ್ಥ :- ಸರ್ವೋತ್ತಮನಾದ ಶ್ರೀ ಹರಿಯ ವ್ಯಾಪ್ತಿ ಹಾಗು ವ್ಯಾಪ್ಯಾರಗಳ ಪರಿಚಯವನ್ನು ನೀಡಲು ದಾಸರು, ಶ್ರೀನಿಧಿ ಎಲ್ಲ ಕಡೆಗೆ ಇರುವನು,ಆದರೆ ನಮ್ಮ ಕಣ್ಣಿಗೆ ಎಲ್ಲ ಕಡೆಗೆ ಕಾಣಿಸುವನೇ..!?ಅಂದರೆ ನಾವು ಅವನ ಉಪಾಸನೆಯನ್ನು ಅಷ್ಟು ಆಳವಾಗಿ ಮಾಡುತ್ತೇವಾ?? ಎಲ್ಲವೂ ಅವನದೇ ಸಂಕಲ್ಪ ಅವನದೇ ಸ್ವಾಮಿತ್ವ ಎನ್ನುವ ಭಾವ ನಮ್ಮಲ್ಲಿ ಉಂಟಾ!? ಅಷ್ಟು ವಿಶಾಲವಾಗಿ ಶಾಸ್ತ್ರ ಪುರಾಣಗಳ ಹಾಗು ಆಚರಣೆಗಳ ಬಗ್ಗೆ ನಮಗೆ ತಿಳಿದಿದೆಯೆ !? ಎಂಬ ಅರ್ಥದಲ್ಲಿ "ನೀವು ಅವನನ್ನು ಎಲ್ಲಿ ನೋಡಿದ್ದೀರಿ ?" ಎಂದು ಪ್ರಶ್ನಿಸುತ್ತಾರೆ ಹಾಗು ಆ ಪ್ರಶ್ನೆಯ ಮೂಲಕ ನಾವು ದೇವರನ್ನು ಎಲ್ಲ ಕಡೆಗೂ ಕಾಣಬೇಕಾದುದು ನಮ್ಮ ಧರ್ಮ ಹಾಗು ಅದೇ ಮನುಷ್ಯ ಜನ್ಮದ ಸಾರ್ಥಕತೆ ಎಂಬ ಉಪದೇಶವನ್ನು ನೀಡುತ್ತಾರೆ.
🌷🌷🌷🌷🌷🌷🌷🌷🌷
ನುಡಿ :- ೧
ನಂದಗೋಪನ ಮಂದಿರಂಗಳ ಸಂದುಗೊಂದಿನಲಿ|
ಚಂದಚಂದದ ಗೋಪಬಾಲರ ವೃಂದ ವೃಂದದಲಿ ||
ಅರ್ಥ:- ನಾವು ಯಾವ ರೀತಿಯಲ್ಲಿ, ಎಲ್ಲಿ ಹಾಗು ಹೇಗೆ ಕೃಷ್ಣನನ್ನು ಕಾಣಬೇಕು ಹಾಗು ಎಲ್ಲೆಲ್ಲಿ ಅವನ ಸನ್ನಿಧಾನವಿದೆ ಎಂದು ಮಾರ್ಗವನ್ನು ತೋರಿಸುತ್ತಾರೆ ದಾಸರು.
ನಂದಗೋಪ ಒಬ್ಬ ಕರ್ತವ್ಯನಿಷ್ಠ ಪುರುಷ, ತನ್ನ ಸಂಸಾರವನ್ನು ಏಕಪ್ರಕಾರವಾಗಿ ನ್ಯಾಯಯುತವಾಗಿ ನಡೆಸಿಕೊಂಡು ತನ್ನ ಜೀವನವನ್ನು ಸಾಧನೆಯನ್ನು ನಿಭಾಯಿಸುವ ಶ್ರೇಷ್ಠ ವ್ಯಕ್ತಿ.
ಕಂಸ ರಾಕ್ಷಸನಾಗಿದ್ದರೂ, ನಂದ, ತನ್ನ ಕರ್ತವ್ಯವನ್ನು ತಾನು ಮಾಡುತ್ತಿದ್ದನು. ಇಬ್ಬರೂ ಹೆಂಡಿರನ್ನು ಸಮಾನವಾಗಿ ಕಾಣುತ್ತಿದ್ದನು, ಶ್ರೀ ಕೃಷ್ಣ ಬಲರಾಮರ ಹಾಗು ಸುಭದ್ರಾರನ್ನು ಯೋಗ್ಯ ರೀತಿಯಲ್ಲಿ ಸಂರಕ್ಷಿಸುತ್ತಿದ್ದನು. ತಾನಿರುವ ಗೋಕುಲವನ್ನು ಚೆನ್ನಾಗಿ ನೋಡಿಕೊಂಡು ಸ್ನೇಹ ಭಾವದಿಂದ ಇರುತ್ತಿದ್ದನು.
ಒಬ್ಬ ಉತ್ತಮ ಪುರುಷ, ಸಾಧಕ ಯಾವ ರೀತಿ ಇರಬೇಕು ಎಂದು ಸಂದೇಶವನ್ನು ನೀಡಿದ ವ್ಯಕ್ತಿ. ಅಂತಹ ಪುರುಷರಲ್ಲಿ ಕೃಷ್ಣನ ಅಧಿಷ್ಠಾನವಿರುತ್ತದೆ. ಒಬ್ಬ ಪುರುಷ ಕೃಷ್ಣನನ್ನು ಒಲಿಸಬೇಕಾದರೆ ಅಥವಾ ಅವನ ಕುರಿತು ಸಾಧನೆ ಮಾಡಿ ಯಶಸ್ಸು ಪಡೆಯಬೇಕಾದರೆ ನಂದಗೋಪನಂತೆ ಧರ್ಮದಿಂದರಬೇಕು, ಬ್ರಹ್ಮಚರ್ಯವನ್ನು ಪಾಲಿಸಬೇಕು ಹಾಗು ಗೃಹಸ್ಥ ಆಶ್ರಮವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು.
🥀🥀🥀🥀🥀🥀🥀🥀🥀
ಪ್ರತಿಯೊಬ್ಬರಿಗೂ ೪ ಅವಸ್ಥೆ ಇರುತ್ತವೆ ಬಾಲ್ಯ ಕೌಮಾರ ಯೌವ್ವನ ಹಾಗು ವೃದ್ಧಾಪ್ಯ
ಬಾಲಕರು ಕೇವಲ ನೋಡಲು ಸುಂದರವಾಗಿ, ಟಿಪ್ ಟಾಪ್ ಆಗಿ ಇದ್ದರೆ ಸಾಲದು, ಜೊತೆ ಜೊತೆಗೆ ಧರ್ಮವನ್ನು ಪಾಲಿಸುವವರಾಗಿರಬೇಕು.
ಗೋಪಬಾಲರು ಹೇಗೆ ಕೃಷ್ಣನ ಹಿಂದ್ಹಿಂದೆ ತಿರುಗಾಡುತ್ತಿದ್ದರೋ ಹಾಗೆ ಚಿಕ್ಕವರಿದ್ದಾಗ ಕೃಷ್ಣನ ರೂಪವಾದ ಶ್ರೀಮದ್ಭಗವದ್ಗೀತೆಯನ್ನು ಅನುಸರಿಸಬೇಕು,ಕೃಷ್ಣ ಹೇಳಿದಂತೆ ಕೇಳಬೇಕು. ಹಾಗೆ ಮಾಡಲು ಮೊದಲು ತಂದೆ ತಾಯಿಗಳು ಹೇಳಿದ್ದನ್ನು ಎಷ್ಟೇ ಕಠಿಣವಾದರೂ ಕೇಳಬೇಕು.ಅಂತಹ ಯೋಗ್ಯ ಮಕ್ಕಳಲ್ಲಿ ಶ್ರೀ ಕೃಷ್ಣನ ಸನ್ನಿಧಾನವಿರುತ್ತದೆ. ಒಬ್ಬ ಒಳ್ಳೆಯ ಮನುಷ್ಯ, ಬಾಲಕ, ಯುವಕ ಹಾಗು ಪುರುಷನಿಂದ ಮಾತ್ರ ಧರ್ಮ ಪರಿಪಾಲನೆ ಸಾಧ್ಯ. ಎಲ್ಲಿ ಧರ್ಮವೋ ಅಲ್ಲಿ ಕೃಷ್ಣ.
ನುಡಿಯ ಮುಂದುವರಿದ ಭಾಗ :-
ಸುಂದರಾಂಗದ ಸುಂದರಿಯರ ಹಿಂದು ಮುಂದಿನಲಿ|
ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ || ೧||
ಸೌಂದರ್ಯವಿದ್ದರೆ ಶ್ರೇಷ್ಠವಲ್ಲ, ಶ್ರೀ ಕೃಷ್ಣ ನಮ್ಮ ಹಿಂದೆ ಮುಂದೆ ಸುಳಿದಾಡುತ್ತಿರಬೇಕು ಹಾಗೆ ನಾವಿರಬೇಕು. ಕೃಷ್ಣ ಎಲ್ಲಿರುವನು??
ಧರ್ಮವಿದ್ದಲ್ಲಿ, ನ್ಯಾಯವಿದ್ದಲ್ಲಿ ಕೃಷ್ಣನ ಸಂಪೂರ್ಣ ಸನ್ನಿಧಾನವಿರುತ್ತದೆ. ಗೋಪಿಕಾ ಸ್ತ್ರೀಯರು ಕೃಷ್ಣನನ್ನು ಬಿಟ್ಟಗಲುತ್ತಿರಲಿಲ್ಲ, ಅವನನ್ನು ತಮ್ಮ ನಿವಾಸಕ್ಕೆ ಕರೆದು ಬೆಣ್ಣೆ ಕೊಡುತ್ತಿದ್ದರೆ, ಆತನನ್ನು ಮುದ್ದಾಡಿ ಬಣ್ಣಿಸುತ್ತಿದ್ದರೂ, ಅವನ ಅನೇಕ ಲೀಲೆಗಳನ್ನು ಸಾಕ್ಷಾತಾಗಿ ಕಾಣುವ ಭಾಗ್ಯಶಾಲಿಗಳಾಗಿದ್ದರು, ಶ್ರೀ ಕೃಷ್ಣನಿಂದಲೇ ಉಪದೇಶ ಪಡೆಯುವ ಶ್ರೇಷ್ಠ ಯೋಗ್ಯತೆಯುಳ್ಳವರಾಗಿದ್ದರು. ಶ್ರೀ ಕೃಷ್ಣನಿಗೆ ಮಾಡಿದ ಅಡಿಗೆಯನ್ನು ಉಣಿಸುವ ಉತ್ಕೃಷ್ಟವಾದ ಭಕ್ತಿಯುಳ್ಳವರಾಗಿದ್ದರೂ ಋಷಿ ಪತ್ನಿಯರು, ಕೃಷ್ಣನನ್ನು ತಮ್ಮ ಗೃಹದ ಕಾರ್ಯಗಳಲ್ಲಿ ಕಾಣುವ ಉತ್ತಮ ಸಾಧಕರಾಗಿದ್ದರು.
ಮಥುರೆಗೆ ಕೃಷ್ಣ ತೆರಳುವಾಗ ಅಕ್ರೂರನನ್ನು ದೂರುವಷ್ಟು ಅಕ್ಕರೆಯುಳ್ಳವರಾಗಿದ್ದರು. ಶ್ರೀ ಕೃಷ್ಣನಿಗಾಗಿ ತಮ್ಮ ಎಲ್ಲ ಭೋಗಗಳನ್ನು ತೈಜಿಸುವರಂತವರಾಗಿದ್ದರು.ಇದೇ ಬಗೆಯಲ್ಲಿ ಧರ್ಮದಿಂದ ಬ್ರಹ್ಮಚರ್ಯದಿಂದಿರುವ ಸ್ತ್ರೀಯರಲ್ಲಿ ಶ್ರೀ ನಂದನಂದನನ ಸನ್ನಿಧಾನವಿರುತ್ತದೆ. ಆ ರೀತಿಯ ಜೀವನ ನಡೆಸಿದರೆ,ಆತ ಸದಾ ನಮ್ಮ ಕಾವಲುಗಾರನಾಗಿ ರಕ್ಷಣೆ ಮಡುವನು. ನಾವು ಕರೆದಲ್ಲಿ ಬರುವನು. ಒಂದು ಹೆಣ್ಣು ಒಳ್ಳೆಯ ಮಗಳಾಗಿ, ಅಕ್ಕಳಾಗಿ, ತಂಗಿಯಾಗಿ, ಸಮಾಜಕ್ಕೆ ಮಾದರಿ ಹೆಣ್ಣಾಗಿ, ಶ್ರೀಶನ ಭಕ್ತೆಯಾಗಿ ಹಾಗೂ ಆದರ್ಶ ಪತ್ನಿಯಾಗಿ ಬಾಳಬೇಕು ಎನ್ನುವುದು ದಾಸರ ಹೃದಯ.
🪷🪷🪷🪷🪷🪷🪷🪷🪷
ನುಡಿ :- ೨
ಈಚರಾಚರದೊಳಗೆ ಅಜಾಂಡದ ಆಚೆ ಈಚೆಯಲಿ|
ಖೇಚರೇಂದ್ರನ ಸುತನ ರಥದ ಅಚ್ಛಪೀಠದಲಿ||
ಮೊದಲನೆಯ ನುಡಿಯಲ್ಲಿ ಶ್ರೀಹರಿಯ ಒಂದು ಬಗೆಯ ವ್ಯಾಪ್ತಿಯನ್ನು ತಿಳಿಸಿ, ಇಲ್ಲಿ ವಿಶಾಲವಾದ ವ್ಯಾಪ್ತಿಯ ಪರಿಚಯವನ್ನು ದಾಸರು ನೀಡುತ್ತಾರೆ. ಚಲಿಸುವ ಜೀವರಾಶಿಗಳಲ್ಲಿ, ಚಲಸದಿರುವ ಸ್ಥಾವರ ಹಾಗು ಜಡ ವಸ್ತುಗಳಲ್ಲಿ ಕೃಷ್ಣ ಅಣುವಾಗಿ ಹಾಗು ಬ್ರಹ್ಮಾಂಡದ (ಗಾಳಿ ನೀರು ಆಕಾಶ ಅಗ್ನಿ ಹಾಗು ಭೂಮಿಯಲ್ಲಿ) ಒಳಗೆ, ಹೊರಗೆ (ಸೂರ್ಯ ಮಂಡಲ, ಚಂದ್ರ ಮಂಡಲ, ನಕ್ಷತ್ರ ರಾಶಿ, ದಿಗ್ದೇವತೆಗಳು, ದೇವಾನುದೇವತೆಗಳು ಮೊದಲಾದವರಲ್ಲಿ ಮಹತ್ತಾಗಿ ವ್ಯಾಪಿಸಿದ್ದಾನೆ. ಅವನು ಬೇರೆ ಎಲ್ಲೋ ಇದ್ದಾನೆಯೋ!? ಇಲ್ಲ. ಇದು ಎಲ್ಲಾ ಯತಿಗಳು ಕುಳಿತು ಸಮಾಜವನ್ನು ಮುನ್ನಡೆಸುತ್ತಾ ಅನುಗ್ರಹಿಸುವ ಹಾಗು ಶ್ರೀಮದಾಚಾರ್ಯರು ಕುಳಿತಂತಹ ಹಂಸ ಪೀಠದಲ್ಲಿ ವಿರಾಜಮಾನನಾಗಿದ್ದಾನೆ.
ನುಡಿಯ ಮುಂದುವರೆದ ಭಾಗ :-
ನಾಚದೆ ಮಾಧವ ಕೇಶವ ಎಂಬ ವಾಚ್ಯ ಕಂಗಳಲಿ|
ವೀಚುಕೊಂಡದ ಪುರಂದರ ವಿಠ್ಠಲನ ಲೋಚನಾಗ್ರದಲಿ ||೨||
ಅಂತಹ ಪೀಠದಲ್ಲಿ ಕುಳಿತಿರುವ ಶ್ರೀಕೃಷ್ಣನಿಗೆ ತಾನು ಸರ್ವಶ್ರೇಷ್ಠನೆಂಬ ಜಂಭವೇ !?
ಖಂಡಿತವಾಗಿ ಇಲ್ಲ..
ಆತನನ್ನು ಸರ್ವದಾ ಸ್ತುತಿಸುವ ಧ್ಯಾನಿಸುವ ಆತನಿಗಾಗಿಯೇ ಜೀವನ ಮೀಸಲಿಟ್ಟಿರುವ ಮಹಾನುಭಾವರ ಕಣ್ಣಿನಲ್ಲಿ ಅಂದರೆ ಅವರ ಮನವೆಂಬ ಕಣ್ಣಿನಲ್ಲಿ ಅವರ ಸಾಧನೆ ಭಕ್ತಿ ಶ್ರಮ ಆಲೋಚನೆಗಳು ಹಾಗು ಆಚರಣೆಗಳಲ್ಲಿ ಕೃಷ್ಣನಿದ್ದಾನೆ. ಯಾರಿಗೂ ಅಂಜದೆ ಅಳುಕದೆ ಎಂತಹ ಸಮಸ್ಯೆಗಳು ಬಂದರೂ ಎಡೆಬಿಡದೆ ಧರ್ಮವನ್ನು ಪಾಲಿಪ, ಕೃಷ್ಣ ಹಾಕಿಕೊಟ್ಟ ಮಾರ್ಗದಲ್ಲಿಯೇ ಜೀವನ ನಡೆಸುವ ಪ್ರತಿಯೊಬ್ಬ ಸಾತ್ವಿಕರಲ್ಲಿ ರುಕ್ಮಿಣಿಪತಿ ಇದ್ದಾನೆ.
ಹಾಗದರೆ ಅವನು ಕೇವಲ ದೊಡ್ಡವರಲ್ಲಿ ಮಾತ್ರ ಇರುವನೋ !? ನಮ್ಮಂತಹ ಕನಿಷ್ಠ ಸಹಜ ಜನರಲ್ಲಿ ಇಲ್ಲವೇ !!
ಖಂಡಿತವಾಗಿಯೂ ಇರುತ್ತಾನೆ ಉಡುಪಿಯಲ್ಲಿರುವ ಕೃಷ್ಣ ಎಲ್ಲ ಅಂತರಂಗದ ಅರಮನೆಯಲ್ಲಿ ಇದ್ದಾನೆ. ಆತ ಸರ್ವೋತ್ತಮನಾದರೂ ಯಾವುದೇ ದುರಹಂಕಾರ ಉದಾಸೀನ ದ್ವೇಷಗಳು ಅವನಿಗಿಲ್ಲ, ಆದರೆ ಅನಂತ ಕಲ್ಯಾಣ ಗುಣ ಪರಿಪೂರ್ಣನಾದ ಅವನ ಪೊಗಳುವ ಪ್ರತಿಯೊಂದು ಮನಸ್ಸಿನಲ್ಲಿ ಶಾಶ್ವತವಾಗಿರುತ್ತಾನೆ.
ಅವನನ್ನು ಹುಡುಕುವ, ನಾನಾ ಬಗೆಯ ಸಾಹಸಗಳನ್ನು ಮಾಡುವ ಗೋಜಿಗೆ ಹೋಗುವುದೇ ಬೇಡ, ನಮ್ಮಲ್ಲಿಯೇ ನೆಲೆಸಿದ್ದಾನೆ. ನಾವು ನೋಡಬೇಕು ಅಷ್ಟೇ..!!
ನಮ್ಮಲ್ಲಿ ಅವನನ್ನು ಕಂಡಾಗಲೇ ನಮ್ಮ ಜನ್ಮ ಸಾರ್ಥಕ. ಅದಕ್ಕಾಗಿಯೆ ದಾಸರು "ಎಲ್ಲಿ ನೋಡಿದಿರಿ!?" ನೋಡಿದ್ರಾ, ಇಲ್ಲವಾ, ನೋಡಿದರೆ ಎಲ್ಲಿ ನೋಡಿದಿರಿ!?
ಕರ್ಮದಲ್ಲಿಯೋ, ಜ್ಞಾನದಲ್ಲಿಯೋ, ಕರ್ತವ್ಯದಲ್ಲಿಯೋ, ಧರ್ಮದಲ್ಲಿಯೋ, ಭೋಗಗಳಲ್ಲಿಯೋ ಅಥವಾ ತಾಮಸಿಕ ಅಂಧಕಾರದಲ್ಲಿಯೋ !??
ನಾವು ಎಲ್ಲಿ ನೋಡುತ್ತೇವೆ, ಅಲ್ಲಿ ಆ ರೂಪದಲ್ಲಿಯೇ ಕಾಣುತ್ತಾನೆ, ಅದರ ಅನುಸಾರವಾಗಿಯೇ ನಡೆದುಕೊಳ್ಳುತ್ತಾನೆ.
ಹಾಗಾಗಿ ನಮ್ಮ ತಲೆಗೆ ಬಂದಂತೆ ನೋಡುವುದು ಬೇಡ, ನಾವು ಹೇಳಿದಂತೆ ಧರ್ಮದ ಕಣ್ಣಿನಲ್ಲಿಯೇ ಶ್ರೀ ಬಲರಾಮಾನುಜನನ್ನು ಕಾಣಿರಿ ಎಂದು ಒಂದೊಂದಾಗಿ ವಿವರಿಸಿ ನಮಗೆ ಉನ್ನತಿಗೆ ಉನ್ನತವಾದ ಮಾರ್ಗದರ್ಶನ ಮಾಡುತ್ತಾರೆ ದಾಸರು....
ಅದಕ್ಕೆ ವ್ಯಾಸರಾಜರೆಂದರೂ "ದಾಸರೆಂದರೆ ಪುರಂದರ ದಾಸರಯ್ಯ"
ನನ್ನ ಬರಹದಲ್ಲಿ ಏನಾದರೂ ತಪ್ಪಿದ್ದರೆ ಅದು ನನ್ನ ದೋಷ ಮತ್ತೆ ಏನಾದರೂ ಸರಿಯಾಗಿ ಬರೆದಿದ್ದರೆ ನನ್ನ ಗುರುಗಳ ಅಂತರ್ಯಾಮಿಯಾದ ಶ್ರೀ ವೇದವ್ಯಾಸ ದೇವರಲ್ಲಿ ಅರ್ಪಿತ
✍️ಭಾಗ್ಯಶ್ರೀ ದೇಶಪಾಂಡೆ
****