Audio by Vidwan Sumukh Moudgalya
ಶ್ರೀ ಪ್ರಾಣೇಶದಾಸಾರ್ಯ ವಿರಚಿತ ಶ್ರೀ ಮಾಧವತೀರ್ಥರ ಸ್ತೋತ್ರ ಪದ
ಸಾಧಿತಾಖಿಲಸತ್ತತ್ವಂ ಬಾಧಿತಾಖಿಲದುರ್ಮತಂ।
ಬೋಧಿತಾಖಿಲಸನ್ಮಾರ್ಗ ಮಾಧವಾಖ್ಯ ಯತಿಂ ಭಜೇ॥
ರಾಗ : ದೇಶ್ ಆದಿತಾಳ
ನೋಡಿದೆ ನಾ ಧನ್ಯನಿಂದಿಗೆ ನೋಡಿದೆ
ಗುರು ಮಾಧವತೀರ್ಥರ ವೃಂದಾವನವನ್ನು॥ಪ॥
ಗಂಗೆಗೇನು ಪ್ರಯೋಜನವಿಳೆಯೊಳು ಬಾಹದಕೆ
ಪಿಂಗಳಗೇನು ಜ್ಞಾನಿಗಳಿಗೇನು
ತುಂಗಮಹಿಮೆಯಿಂದೆ ಅಜ್ಞಜನರ ಪಾಪ
ಹಿಂಗಿಸಬೇಕೆಂಬದಲ್ಲದೆ ಮನವೆ॥೧॥
ನರಹರಿಗುರುಸುತ ವರದ ಅಕ್ಷೋಭ್ಯಮುನಿ
ಕರ ಪೂಜಿತಾರವಿಂದನಾಭರಲ್ಲಿ
ಧರಾದರಜತೀರದಿ ಸತ್ಯ ಮುನಿಗಳಿಂದ
ನಿರುತಾರಾಧನೆ ಕೊಳುತಿರ್ಪರು ಮನವೆ॥೨॥
ಏನು ಇವರ ಬಣ್ಣಿಸಲಿ ಎನ್ನಿಂದೊಶವಿಲ್ಲ
ಆನತ ಜನರಿಗೆ ಕರುಣಿಸಿ
ಪ್ರಾಣೇಶವಿಠಲನ ಧಾಮ ತೋರಿಸುವರು
ಕ್ಷೋಣಿಯೊಳಗೆ ಅಪ್ರತಿಮ ಮಹಿಮರು॥೩॥
***