ಕಾಖಂಡಕಿ ಶ್ರೀ ಕೃಷ್ಣದಾಸರು
ಜೋಗಿ ಬಂದ ಕಾಣೇ ಈತ ಮಹಾಯೋಗಿ ಬಂದ ಕಾಣೇ ಗಗನ ಮಣಿಯ ಮೀರುವ ತೇಜದ ದತ್ತ ದಿಗಂಬರ ನೆನಿಪೆ ನೋಡಮ್ಮಾ ಪ
ತವೆ ಸಂಜೆ ಧಾರೆಗಳು ಹೊಳೆವ ಲೊ ಪ್ಪುವ ಕೆಂಜೆಡಿಯಗಳು ಕುವಲಯ ಶಾಮನು ಕಿರೀಟ ಕುಂಡಲದಿಂದ ಠವಠವಿಸುವ ಮೊಗದಾ ನೋಡಮ್ಮಾ 1
ಕೇಶರ ಗಂಧವನು ನುಂಪಿಟ್ಟು ತ್ರಿಸರೋಜ ಮಾಲೆಯನು ಭೂಷಿತ ದಿವ್ಯಾಂಬರ ಕಾಂಚಿ ಧಾಮದಿ ಘೋಷಿಪ ಘಂಟೆಗಳು ನೋಡಮ್ಮಾ 2
ಮೆಟ್ಟಿದ ಪಾದುಕೆಯಾ ರತನದ ಬೊಟ್ಟಿಲಿ ಜಪ ಮಾಲೆಯಾ ನೆಟ್ಟನೆ ನೆನೆವ ರುದ್ಧರಿಸಲು ತಾರಕ ಸೃಷ್ಟಿಗೆ ಗುರುವಾಗಿಹ ನೋಡಮ್ಮಾ 3
ಆದಿ ಯೋಗವನು ಪ್ರಕಟಿಸಿ ಹಾದಿಯ ತೋರುವನು ದ್ವಾದಶ ನಾದದ ಭೇದ ತೋರುವ ಶಂಖ ನೂಡುತ ನಲಿಯುತಲಿಹ ನೋಡಮ್ಮಾ 4
ಮೂರ್ತಿ ಚಿ-ಹ್ನವನು ದೋರುವಾ ಶ್ರೀ ಮನೋರಮ ದೇವನು ನೇಮದ ಮಹಿಪತಿ ನಂದನ ಪ್ರಭು ಭಕ್ತ ಕಾಮಿತಾರ್ಥವ ನೀಡುವ ನೋಡಮ್ಮಾ 5
***