ಕಾಖಂಡಕಿ ಶ್ರೀ ಮಹಿಪತಿರಾಯರು
ಎಲ್ಲಾರಿಗೆಲ್ಲಿಹದು ಫುಲ್ಲನಾಭನ ಸೇವೆ ಸುಲಭವಲ್ಲವಿದು ದುರ್ಲಭ ಸದ್ಗುರು ಮಾರ್ಗ ಪ
ಕೋಟ್ಯಾನುಕೋಟಿಗೊಬ್ಬ ಮುಟ್ಟಿ ಕಂಡಿದರಲಿ ನೆಟ್ಟಿಸಿ ತನ್ನೊಳು ತಾ ದೃಷ್ಟಿಸಿ ಗುರುಪಾದ 1
ಮಾತಿನಂತಲ್ಲವಿದು ಜ್ಯೋತಿರ್ಮಯದ ಸುಖ ನೆÉೀತಿನೆÉೀತಿವೆಂಬುದು ಶ್ರುತಿ ಸಾರುತದ ವಾಕ್ಯ 2
ಹರಡಿಸಿರಾಗದು ಮೂರುಲೋಕದೊಳಗ ಕರುಣಿಸಿದರಾಹುದು ಗುರು ಕೃಪೆಯಿಂದ 3
ವರ್ಮ ತಿಳಿಯದೆಂದೆಂದು ಕರ್ಮತಮಂಧರಿಗೆ ಬ್ರಹ್ಮ ಸುಖದೋರುವ ಸ್ವಾಮಿ ಸದ್ಗುರು ಧರ್ಮ 4
ಸೇವೆ ಸೂತ್ರನರಿಯದ ಭಾವಿ ಮಹಿಪತಿಗೆ ಭಾವಭಕ್ತಿಯ ಕೊಟ್ಟು ಪಾವನಗೈಸಿದ 5
***