Showing posts with label ತ್ವಂ ಶಾರದಂ ಒಂದೆಂಟು ಲೆಕ್ಕದ ದ್ವಾರ purandara vittala. Show all posts
Showing posts with label ತ್ವಂ ಶಾರದಂ ಒಂದೆಂಟು ಲೆಕ್ಕದ ದ್ವಾರ purandara vittala. Show all posts

Saturday 7 December 2019

ತ್ವಂ ಶಾರದಂ ಒಂದೆಂಟು ಲೆಕ್ಕದ ದ್ವಾರ purandara vittala

ರಾಗ ಕಾಂಭೋಜ ಆದಿತಾಳ

ತ್ವಂ ಶಾರದಂ ||ಪ||

ಒಂದೆಂಟು ಲೆಕ್ಕದ ದ್ವಾರ, ಅದು
ಒಂದು ದಿನ ತೊಳೆಯದಿದ್ದರೆ ವಿಕಾರ , ಸಂದು-
ಸಂದಿಲಿ ಕ್ರಿಮಿರಾಶಿ ಘೋರ , ಅದು
ಶುಕ್ಲ ಶೋಣಿತ ಸಂಬಂಧ ಶರೀರ ||

ಕಣ್ಣಿಂದ ಸಿಕ್ಕು ಸೋರುವ್ಯ್ದು , ಮೂಗು
ಕಣ್ಣಿಂದ ಶ್ಲೇಷ್ಮ ತೋರುವುದು , ಅದು
ಉಣದಿದ್ದರೆ ಎಂಜಲಹುದು , ನಿನ್ನ
ಪ್ರಾಣ ಬಿಟ್ಟರೆ ದುರ್ಗಂಧ ನಾರುವುದು ||

ಕಣ್ಣ ಮುಚ್ಚಿ ಕಣ್ಣ ತೆರೆವ , ಅವ
ಬಣ್ಣಬಣ್ಣದ ತತ್ವನೊರೆವ , ಪರ-
ಹೆಣ್ಣಿಗಾಗಿ ತಾನು ಜರೆವ , ಒಳ್ಳೆ
ಪುಣ್ಯವಂತನ ನೋಡಿ ತನ್ನೊಳಗೆ ತಾನು ಬೆರೆವ ||

ಮಾತಿನಲ್ಲಿ ಹರಿದಾಸ , ಅವ
ನೀತಿಯಲ್ಲಿ ಬ್ರಹ್ಮರಾಕ್ಷಸ , ಅವ
ಭೀತಿಯಿಲ್ಲದೆ ಬ್ರಹ್ಮದ್ವೇಷ ಮಾಡಿ
ಸಾತ್ವಿಕನೆನಿಸುವುದು ಪರಿಹಾಸ ||

ವೈದಿಕ ವೃತ್ತಿಯನೆ ಎತ್ತಿ , ಅವ
ಓದನಕೆ ಮನೆಮನೆಯ ಸುತ್ತಿ , ಅತಿ-
ಮೋದದಲಿ ಸತಿಯೊಡನೆ ಮುತ್ತಿ , ಬಲು
ಬಾಧಿಸುತ ಅವನೋದನವೊತ್ತಿ || *

ಪುರಾಣಿಕನಾಗಿ ಪುಟ್ಟಿ , ಅವ
ತರತರದ ಬೋಳೇರ ಕೂಟವ ಕಟ್ಟಿ , ಬಹು ಜ-
ನರಲ್ಲಿ ಪಿಟಿಪಿಟಿಗುಟ್ಟಿ , ಹಣ
ಬಾರದೊ ಬಾಹೊದೊ ಎಂಬಲ್ಲಿ ದೃಷ್ಟಿ ||

ವ್ಯಾಪಾರಿ ತನು ಎಂದೆನಿಸಿ , .....
ಭೂಪತಿ ಸೇವೆ ಅಂಗೀಕರಿಸಿ , ಆ-
ಪಾಪದ ದ್ರವ್ಯ ಸತ್ಕರಿಸಿ , ವೇಶ್ಯ -
ಸ್ತ್ರೀಪಾಲನೆ ಮಾಡಿ ಕೊನೆಯ ಸಮ್ಮತಿಸಿ ||

ಸಚ್ಛಾಸ್ತ್ರ ಶ್ರವಣವನೆ ಮಾಡಿ , ಗೋ-
ವತ್ಸದಂತೆ ಗುರುಗಳ ಹಿಂದೆ ಓಡಿ , ....
ಕುತ್ಸಿತರ ಸಂಗವೀಡಾಡಿ , ಮದ-
ಮತ್ಸರ ತೊರೆದು ಹರಿದಾಸರೊಳಗಾಡಿ ||

ಅದ್ವೈತ ಮತಗಳನೆ ಜರೆದು , ಗುರು-
ಮಧ್ವರಾಯರೆಂಬೊ ಬಿರುದು , ನಮ್ಮ
ಮುದ್ದು ಪುರಂದರವಿಠಲನ್ನ ಅರಿದು , ಅವ
ಶುದ್ಧಾತ್ಮನಾಗಿ ಸುಖದಲ್ಲಿರಬಹುದು ||
********