Showing posts with label ಇಂದಿರೇಶನೆ ಸುಂದರಾಂಗನೆ ಮಂದಹಾಸದಿಂದ ಬೇಗ ಬಂದು ರಕ್ಷಿಸೈ namagiri. Show all posts
Showing posts with label ಇಂದಿರೇಶನೆ ಸುಂದರಾಂಗನೆ ಮಂದಹಾಸದಿಂದ ಬೇಗ ಬಂದು ರಕ್ಷಿಸೈ namagiri. Show all posts

Thursday, 5 August 2021

ಇಂದಿರೇಶನೆ ಸುಂದರಾಂಗನೆ ಮಂದಹಾಸದಿಂದ ಬೇಗ ಬಂದು ರಕ್ಷಿಸೈ ankita namagiri

 kruti by ವಿದ್ಯಾರತ್ನಾಕರತೀರ್ಥರು vidyaratnakara teertharu 

ಇಂದಿರೇಶನೆ ಸುಂದರಾಂಗನೆ

ಮಂದಹಾಸದಿಂದ ಬೇಗ ಬಂದು ರಕ್ಷಿಸೈ 1

ಮರೆಯಬೇಡವೊ ಸಿರಿಯ ಅರಸನೆ

ಪೊರೆಯದಂತೆ ಮರೆಯಬಹುದೆ ಸಿರಿಯನಾಥನೆ 2

ರಂಗ ರಮಣನೆ ಭುಜಂಗಶಯನನೆ

ಮಂಗಳಾಂಗ ನಿನ್ನ ಕರುಣಾಪಾಂಗ ಬೇಡುವೆ 3

ಮಾರಜನಕನೆ ಉದಾರಚರಿತನೆ

ಭಾರವೇನೊ ದೀನಜನರುದ್ಧಾರ ಮಾಡುವುದು 4

ನಾಮಗಿರೀಶನೆ ನಿಸ್ಸೀಮ ಮಹಿಮನೆ

ಪ್ರೇಮವಿಟ್ಟು ಪಾಲಿಸೆನ್ನ ಸ್ವಾಮಿ ನರಹರೆ 5

***