..
kruti by ಬೇಲೂರು ವೈಕುಂಠ ದಾಸರು belur vaikunta dasaru
ಒಲವಿಲ್ಲವೆನ್ನಬಹುದೇ ನೀರೆ ನಿನ್ನಲ್ಲಿ
ಚೆಲುವ ವೇಲಾಪುರದ ಚೆನ್ನಿಗನಿರವ ನೋಡಿ ಪ
ತರಳೆ ನಿನ್ನಯ ಮೋಹ ವಿರಹದಿರವದ ಬಗೆಯ
ಸ್ಮರನರಳ ಸರಳುಗಳ ಉರವಣಿಯ ಘನವಾ
ಪರೆಯದಿಂ ಮೋದಕದಿ ಬಿಂದುಗಳು ಮೊಳಗೆ ಕ
ಸ್ತುರಿ ತಿಲಕ ಮಸುಳಿಸಲು ಬಂದ ಗುಣಮಣಿಯೇ 1
ನೀಲಜೀಮೂತಸನ್ನಿಭದೋರೆದುರುಬಿನ
ಮೇಲೆ ಸುತ್ತಿದ ಬೆಂಮುರಿ ಜಾರೆಗುರುಳೂ
ಭಾಳದಿಂ ಪರೆಯೆ ಕಡುತವಕದಿಂದೆನ್ನ ನುಡಿ
ಗೇಳುತಲೆ ಬಂದನಿದೆ ನೋಡೆ ಗುಣಮಣಿಯೇ 2
ಸೋಗೆ ಮುಡಿಯಳೆ ನಿನ್ನ ಕಾಂಬೆನೆಂದರ್ಥಿಯಲಿ
ರಾಗ ಮಿಗೆ ವೈಕುಂಠ ವಿಠಲನಾಥ ತಾನಾದ
ಆ ಗರುವ ವೇಲಾಪುರದ ಚೆನ್ನ ಬಂದನಿದೆ
ಬೇಗದಿಂ ನೆರೆದು ಸುಖಿಯಾಗು ಪೆಣ್ಮಣಿಯೆ 3
***