Showing posts with label ಏನು ಧನ್ಯರೋ ಜಗದಿ ಎಂಥ shyamasundara ENU DHANYARO JAGADI RAGHUPREMA TEERTHA STUTIH. Show all posts
Showing posts with label ಏನು ಧನ್ಯರೋ ಜಗದಿ ಎಂಥ shyamasundara ENU DHANYARO JAGADI RAGHUPREMA TEERTHA STUTIH. Show all posts

Monday, 6 September 2021

ಏನು ಧನ್ಯರೋ ಜಗದಿ ಎಂಥ ankita shyamasundara ENU DHANYARO JAGADI RAGHUPREMA TEERTHA STUTIH



ಏನು ಧನ್ಯರೋ ಜಗದಿ ಎಂಥ ಮಾನ್ಯರೋ |
ಕ್ಷೋಣಿ ವಿಬುಧ ಶ್ರೇಣಿ ನಮಿಪ
ಮೌನಿ ಶ್ರಿ ರಘುಪ್ರೇಮತೀರ್ಥರು ಪ

ಕಲಿಯುಗದಿ ಕÀ್ರತುಗೈದ ಇಳಿಯ ಜನಕ ಸಾಧ್ಯವೆಂದು
ತಿಳಿದು ನಾಕದಿಂದಳಿದು ಬಂದು
ಕುಲಿಶಪಾಣಿಯಂತೆ ತೋರ್ಪರು 1

ಧೂರ್ತರಿಂದ ದೂರವಿದ್ದು | ಸ್ವಾರ್ಥರಹಿತರಾಗಿ | ಸಕಲ
ತೀರ್ಥಕ್ಷೇತ್ರ ಚರಿಸಿ ಜನ್ಮ ಸಾರ್ಥಕೆನಿಸಿದ ಯತಿಯು 2

ಧನ ಧಾನ್ಯ ಭರಿತ ಸದನ ತೃಣಸಮಾನವೆನಿಸಿ ಮುದದಿ |
ವಿನಯಶೀಲ ದ್ವಿಜರಿಗಿತ್ತು ಮುನಿಯೆನಿಸಿ ವಿರುಕ್ತರು 3

ಚತುರಾಶ್ರಮ ವ್ರತದಿ ನೇಮ ಸತತಾ ಚರಿಸುತಲಿ |
ಶಿಷ್ಯರಾದಿಗೆ ವ್ರತಬೋಧವೃಷ್ಟಿ ಹಿತದಿಗರೆದು
ಪೊರೆವ ಯತಿಯು 4

ಶ್ರೀಮಧ್ವಸುಮತವಾರಿಧಿ ಸೋಮನೆಂದೆನಿಸಿ |
ಜಿತ ಕಾಮರಾಗಿ ಕಠಿಣ ತಪದಿ | ಶ್ರೀ |
ಶಾಮಸುಂದರನ ವಲಿಸಿದವರು 5
**********