>>
ಮಂದರ ಧರನೆಂಬೊ ಕೋಲಸುಂದರಾಂಗನೆಂಬೊ ಯಾದವೇಂದ್ರಚಂದ್ರನೆಂಬೊ ಕೋಲ ಪಿಡಿದು ನಿಂತಾರು ಪ.
ಹದಿನಾರು ಸಾವಿರ ಮಂದಿಮುದದಿಂದ ಹೆಜ್ಜೆಯನಿಕ್ಕುತ ಚದುರೆಯರು ಕೋಲಾಟಕ್ಕಾಗಿಒದಗಿ ನಿಂತಾರು1
ನೂರು ಮಂದಿ ನಾರಿಯರೆಲ್ಲಹಾರಭಾರ ಅಲಿಯುತಲೆಮುರಾರಿಯ ಮುಂದೆಲ್ಲಸಾಲು ಸಾಲಿಲೆನಿಂತರು 2
ನೀಲ ವರ್ಣನ ಮಡದಿಯರೆಲ್ಲಮೇಲಾದ ಕೋಲಾಟಕ್ಕಾಗಿಬಾಲೆಯರು ಬಂದೆಲ್ಲಸಾಲಾಗಿ ನಿಂತರು3
ಚಕ್ರಧರನ ಮಡದಿಯರೆಲ್ಲಚಕ್ಕನೆ ಕೋಲಾಟಕ್ಕಾಗಿನಕ್ಕು ಮುಗುಳನಗೆಯಸಖ್ಯದಲೆ ನಿಂತರು 4
ಪ್ರೇಮದಿಂದ ನಾರಿಯರೆಲ್ಲಭಾವೆ ರುಕ್ಮಿಣಿಗೆ ಎರಗಿಶ್ರೀಮಂತ ಧೀಮಂತ ನಮ್ಮಸ್ವಾಮಿ ಗೆಲಿಸೆಂದು 5
ಅಂಗನೆಯರು ರಾಮೇಶನ ಮಂಗಳ ಮಹಿಮೆಯಬೆಳದಿಂಗಳ ತುಂಬಿದರುಮೋಹನಾಂಗ ಚಂದ್ರಗೆ 6
****