ಶ್ರೀ ಪ್ರಸನ್ನವೆಂಕಟದಾಸಾರ್ಯ ವಿರಚಿತ
ಕೊಲ್ಹಾಪುರದ ಶ್ರೀಮಹಾಲಕ್ಷ್ಮಿಯ ಸ್ತುತಿ ಪದ
( ಸಾಂಪ್ರದಾಯಿಕ ಧಾಟಿ )
ಭಜಮನೋ ಭಜಮನೋ ಭಜಮನೋ॥ಪ॥
ಭಜಮನೋ ಸುಜನಜೀವನ ತ್ರಿಜಗಪಾವನ ಶ್ರೀವಿಶ್ವ
ಶ್ರೀ ವಿಶ್ವಕುಟುಂಬಿ ಅಜಭವನುತ ಕೊಲ್ಹಾಪುರವಾಸಿನಿ ಅಂಬ॥ಅ.ಪ॥
ನಿಜಬಾಲೆ ನಿಜಬಾಲೆ ನಿಜಬಾಲೆ
ನಿಜಬಾಲೆ ನೇತ್ರವಿಶಾಲೆ ಕಸ್ತೂರಿ ಬಾಲೆ ಕುಂಕುಮಡಾಲೆ
ಮೇಲೆ ಇರಿಸಿದ ಚೌರ್ಯಾಲಂಕೃತ ವಾಲೆಬುಗುಡಿ ಬಾಫುಲೆ॥೧॥
ತನುಗಂಧ ತನುಗಂಧ ತನುಗಂಧ
ತನುಗಂಧ ಈಕೆಯ ಚಂದ ಬಿಡದಿಂದೆಂದ
ಮಂದರಧರಗೋವಿಂದನು ಬಲ್ಲನು
ಈಕೆಯ ಆನಂದ ॥೨॥ ಭಜಮನೋ....
ಶೃಂಗಾರ ಶೃಂಗಾರ ಶೃಂಗಾರ....
ಶೃಂಗಾರ ಹೆರಳುಬಂಗಾರ ಮಂಗಳಕಾರ ಸೂತ್ರದುಂಗೂರ
ಹಾರ ಪದಕ ವಿಸ್ತಾರ ಕಂಬುಕಂದಾರ॥೩॥
ಅನುಮೋದ ಅನುಮೋದ ಅನುಮೋದ
ಅನುಮೋದ ಈಕೆಯ ಪಾದ ಸರಗುಳಿ ಸಾದಾ ಭರಣವಗಾದ
ಆದರದಿಂದಲಿ ಪಿಲ್ಲೆ ಕಾಲುಂಗುರ ನಾದಿಪೊ ಗೆಜ್ಜೆವಿನೋದ॥೪॥
ಭಜಮನೋ....
ಹರಿಪ್ರೀಯೆ ಹರಿಪ್ರೀಯೆ ಹರಿಪ್ರೀಯೆ .........
ಹರಿಪ್ರೀಯೆ ಬ್ರಹ್ಮನ ತಾಯೆ ಕೋಮಲಕಾಯೆ ಬುಧಜನಸಾಯೆ
ಅಯಾಸಿಲ್ಲದೆ ಕಾಯೆಂದೆನುತಲಿ ಬಾಯೊಳು ಸ್ತೋತ್ರವ ಗೈಯೇ॥೫॥
ಕುಣಿದಾಡಿ ಕುಣಿದಾಡಿ ಕುಣಿದಾಡಿ...
ಕುಣಿದಾಡಿ ನಲಿವದು ನೋಡಿ ನಾಚಿಕೀಡ್ಯಾಡಿ ಭಕುತಿಯ ಮಾಡಿ
ರೂಡಿಯೊಳಗೆ ಇಷ್ಟಾರ್ಥವ ನೀಡುವಳೈ ಮುದಗೂಡಿ॥೬॥
ನಮಗಿಂದು ನಮಗಿಂದು ನಮಗಿಂದು....
ನಮಗಿಂದು ಭಕ್ತರಬಂಧು ಮುಂದೆಲಿತಂದು
ತಂದು ತೋರಿಸೌ ಪ್ರಸನ್ವೆಂಕಟನ ಮುಂದಾಗೋಚರವನ್ನು॥೭॥
ಭಜಮನೋ.....
****