Showing posts with label ಸರಸೀಔಂಬಕಿ ನೀರೇ ಎನಗ ತ್ವರತದಿ ತೋರೆ ಸರಸಿರುಹ ವಂದ್ಯನಾ gurumahipati. Show all posts
Showing posts with label ಸರಸೀಔಂಬಕಿ ನೀರೇ ಎನಗ ತ್ವರತದಿ ತೋರೆ ಸರಸಿರುಹ ವಂದ್ಯನಾ gurumahipati. Show all posts

Wednesday, 1 September 2021

ಸರಸೀಔಂಬಕಿ ನೀರೇ ಎನಗ ತ್ವರತದಿ ತೋರೆ ಸರಸಿರುಹ ವಂದ್ಯನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಸರಸೀಔಂಬಕಿ ನೀರೇ ಎನಗ|ತ್ವರತದಿ ತೋರೆ| ಸರಸಿರುಹ ವಂದ್ಯನಾ ಪ 


ಪಲ್ಲವಧರದಲಿಂದಾ|ಕೊಳಲು ನಾನಾ ಪರಿಯಾ| ಬಲ್ಲತನದಲಿ ಊದಲು| ಹುಲ್ಲೆಯಂದದಿ ಮನಸು|ಮರಳು ಗೊಂಡಾಥನಿಗೆ| ಭುಲ್ಲವಿಸುತಿಹುದಮ್ಮಾ ನಮ್ಮಾ 1 

ಕೈರವ ಸರ್ವೋದಯವ ಕಂಡು|ಮುದದಿಂದ| ಚಕೋರ ಸಂತೋಷಿಸುವಂತೆ| ನೀರಜಾನನ ನೋಡ ಲಕ್ಷಣದಿ ನೋಟಕ| ಪಾರಣೆ ಯಾಗುದಮ್ಮಾ ನಮ್ಮಾ 2 

ಪರಮ ಜ್ಞಾನಾಂಗನೆಒಂದೊಂದು ಘಳಿಗೆ ವತ್ಸರ| ದಂತೆ ಪೋಗುತಿಹುದು| ತರಿತ ಮಹಿಪತಿ ನಂದ|ನೋಡಿ ಯನನು ತೋರೆದಡೆ| ಹರನ ನಿಲ್ಲದಮ್ಮಾ ನಮ್ಮಾ 3

***