Showing posts with label ಡಂಬಕ ಭಕುತಿಗೆ ಮೆಚ್ಚಿಕೊಳ್ಳನೊ ಕೃಷ್ಣ purandara vittala. Show all posts
Showing posts with label ಡಂಬಕ ಭಕುತಿಗೆ ಮೆಚ್ಚಿಕೊಳ್ಳನೊ ಕೃಷ್ಣ purandara vittala. Show all posts

Thursday, 5 December 2019

ಡಂಬಕ ಭಕುತಿಗೆ ಮೆಚ್ಚಿಕೊಳ್ಳನೊ ಕೃಷ್ಣ purandara vittala

ಪುರಂದರದಾಸರು
ಡಂಬಕ ಭಕುತಿಗೆ ಮೆಚ್ಚಿಕೊಳ್ಳನೊ ಕೃಷ್ಣ - ಹಾರಿ |ಡೊಂಬಲಾಗ ಹಾಕಿ ಹೊರಳಿದರಿಲ್ಲ ಪ.

ವಟವಟನೆ ಕಪಿಯಂತೆ ಒದರಿಕೊಂಡರೆ ಇಲ್ಲ |ಬೆಟ್ಟದಿಂದಲಿ ಕೆಳಗೆ ಬಿದ್ದರಿಲ್ಲ ||ಬಿಚ್ಚಿಟ್ಟರೆ ಇಲ್ಲ ನಿರ್ಭಾಗ್ಯರ್ಗೆಂದೆಂದು |ಅಚ್ಯುತಾನಂತನ ದಯವಿಲ್ಲದೆ 1

ಕೆಟ್ಟೆನೆಂದರೂ ಇಲ್ಲ ಕ್ಲೇಶಪಟ್ಟರೂ ಇಲ್ಲ |ಸುಟ್ಟ ಸಂಸಾರದೊಳು ಸುಖವು ಇಲ್ಲ ||ಕೋಟಲೆಗಂಜಿದರಿಲ್ಲ ಕೊಸರಿಕೊಂಡರು ಇಲ್ಲ |ವಿಠಲನ ದೂರಿದರಿಲ್ಲ ವಿಧಿಯ ಬೈದರಿಲ್ಲ 2

ಕನ್ನಹೊಕ್ಕರು ಇಲ್ಲ ಕಡಿದಾಡಿದರು ಇಲ್ಲ |ಕುನ್ನಿಯಂತೆ ಮನೆಮನೆಯ ಕೂಗಿದರಿಲ್ಲ ||ಹೊನ್ನಿನಾಸೆಗೆ ಹೋಗಿ ಹೊಡೆದುಕೊಂಡರು ಇಲ್ಲ |ಪನ್ನಗಾದ್ರಿ ಪುರಂದರವಿಠಲನ ದಯವಿರದೆ 3
***

pallavi

Dambhaka bhaktige mecci koDanu krSNa

anupallavi

DombalAgava hAki DONDoNDe horaLidarilla

caraNam 1

hecceccu bayasidarilla heccarige tatigilla kaccekai shuddhavillade karmavilla
bacciTTarilla nirbhAgyarige indenna acyutAnanda shrIhariya nene kaNDya manave

caraNam 2

keTTanendaru illa klEsha baTTaru illa aTTaDisi niSTUra Adidarilla
vaTa vatane kapyendodari koNDaru illa beTTadinda talegeLage biddaru illa

caraNam 3

kannaviTTaru illa kaDidADidaru illa kunniyantyAvAga kUgidaru illa
tAne koDadannaka kosari koNDaru illa cenna purandara viTTalanna duritarilla
***