Showing posts with label ಳಳ- RSS- ಬಾ ಬಾ ಸಂಘಸ್ಥಾನದ others BA BA SANGHASTHANADA rss. Show all posts
Showing posts with label ಳಳ- RSS- ಬಾ ಬಾ ಸಂಘಸ್ಥಾನದ others BA BA SANGHASTHANADA rss. Show all posts

Friday, 24 December 2021

ಬಾ ಬಾ ಸಂಘಸ್ಥಾನದ others BA BA SANGHASTHANADA rss

 


 

RSS song .

ಬಾ ಬಾ ಸಂಘಸ್ಥಾನದ ಕಡೆಗೆ ||ಪ||


ಸ್ವಾರ್ಥದ ಸೋಪಾನದ ತುಳಿತುಳಿಯುತ ಬಾಬಾ ಭೂಮಾತೆಯ ಮಡಿಲೆಡೆಗೆ

ಉರಿಯಾರದೆ ಕಿಡಿ ಕಾರದೆ ಬೆಳಗುವ ಚಿರಸ್ನೇಹದ ವರದೀಪದ ಕಡೆಗೆ ||೧||


ತುಂಬಿದ ಹೃದಯದ ಸೋದರವೃಂದವು ಆದರದಿಂದಲಿ ಕರೆಯುವ ಕಡೆಗೆ

ಎದೆಯಾಳದಿ ಅತಿ ಪ್ರೀತಿಯ ಮಮತೆಯ ಮೈತ್ರಿಯ ಸಾಗರ ಮೊರೆಯುವ ಕಡೆಗೆ ||೨||


ಸ್ವಾರ್ಥವ ಮರೆಯಿಸಿ ಸ್ಫೂರ್ತಿಯ ದೊರಕಿಸಿ ಭಾವಾವೇಶವು ಹೊಮ್ಮುವ ಕಡೆಗೆ

ಚೇತನಚಿಲುಮೆಯ ಶತಶತ ಧಾರೆಯ ಬಗೆಯಾವೇಗವು ಚಿಮ್ಮುವ ಕಡೆಗೆ ||೩||


ಅನುಶಾಸನದಾದೇಶವ ನೀಡುವ ಮಹಿಮಾನ್ವಿತ ಆದರ್ಶದ ಎಡೆಗೆ

ಚಾರಿತ್ರ್ಯದ ಆರಾಧನೆ ನಡೆಯುವ ಭಾರತಭೂಮಿಯ ಭಕ್ತರ ಗುಡಿಗೆ ||೪||

***

bA bA saMGasthAnada kaDege ||pa||


svaarthada sOpAnada tuLituLiyuta bAbA BUmAteya maDileDege

uriyArade kiDi kArade beLaguva cirasnEhada varadIpada kaDege ||1||


tuMbida hRudayada sOdaravRuMdavu AdaradiMdali kareyuva kaDege

edeyALadi ati prItiya mamateya maitriya sAgara moreyuva kaDege ||2||


svArthava mareyisi sphUrtiya dorakisi BAvAvESavu hommuva kaDege

cEtanacilumeya SataSata dhaareya bageyAvEgavu cimmuva kaDege ||3||


anuSAsanadAdESava nIDuva mahimAnvita AdarSada eDege

cAritryada ArAdhane naDeyuva BArataBUmiya Baktara guDige ||4||

***