ಅಂಬಲಿ ಪರಮಾನ್ನ ||ನಂಬಿ||
ಹಂಬಲಿಸುತಲಿರು ಹರಿಲೋಕಾನಂದವೆಂಬ
ಪೀಯೂಷಪಾನ ||ಹಂಬಲಿಸು||
||ನಂಬಿ ನೆಚ್ಚದಿರು||
ದುರುಳಾಜನರ ಸಂಗವೆಂಬುದು ಎಂದಿಗೂ
ನೊಣ ಬೆರಸಿದ ಊಟ
ಪರಮಭಾಗವತರ ಪದಸಂಗವೆಂಬುದು
ಮಸ್ತಕ ಮಣಿ ಮುಕುಟಾ
||ದುರುಳಾಜನರ||
ಮರೆ ಮೋಸಗೊಳಿಸುವ ಸತಿಸುತರೆಂಬೋದೆ
ಕೇವಲ ಯಮಕಾಟ||ಮರೆ||
ಪರತತ್ವನಾದ ಶ್ರೀಹರಿಯನ್ನು ಭಜಿಸುವುದೆ
ವೈಕುಂಠಕೆ ಓಟಾ....
||ನಂಬಿ ನೆಚ್ಚದಿರು||
ಬಿದ್ದ ಕಾಳಿಗೆ ಕಾಳು ಕೂಡಿ ಹಾಕುವುದೆಲ್ಲ
ಹಾರಿ ಹೋಗುವ ಹೊಟ್ಟು
ಇದ್ದಾಗ ದಾನ ಧರ್ಮಂಗಳ ಮಾಡೋದು
ಕೈವಲ್ಯಕೆ ಮೆಟ್ಟು
||ಬಿದ್ದ ಕಾಳಿಗೆ||
ಹೊದ್ದಿರುವರ ಕಂಡಾಸೆಯಪಟ್ಟರೆ
ಹೋಗುವಿ ನೀ ಕೆಟ್ಟು||ಹೊದ್ದಿರುವ||
ಬುದ್ಧಿಹೀನರಿಗೆ ಪೇಳದಿರೆಲೊ ತತ್ವಸಾರ
ಸುಂದರ ಗುಟ್ಟೂ....
||ನಂಬಿ ನೆಚ್ಚದಿರು||
ಅಲ್ಪಾವಕಾಶವು ಈ ಶರೀರವು
ಗಾಳಿಗೊಡ್ಡಿದ ದೀಪ
ಅಲ್ಪ ಸಂತೋಷನಾಗು ಅದು ನಿನಗೆ
ನೋಡು ,ಹಾಲುಸಕ್ಕರೆ ತುಪ್ಪ
||ಅಲ್ಪಾವಕಾಶವು||
ಬಲ್ಪಂಥ ಮಾಡದಿರು ಜನುಮಜನ್ಮದಲಿ
ಬಿಡದೆಲೊ ಸಂತಾಪ||ಬಲ್ಪಂಥ||
ಸ್ವಲ್ಪಕಾಲಾದರೂ ಮಧ್ವಮತವಪೊಂದು
ಭವವೇ ನಿರ್ಲೇಪಾ....
||ನಂಬಿ ನೆಚ್ಚದಿರು||
ಹರಿಗರ್ಪಿಸದ ಕರ್ಮ ಆವುದಾದರು
ಸೂಳೆಗಿಕ್ಕಿದ ವಿತ್ತ
ಹರಿಗೆ ವಿಶ್ವಾಸದಿ ಅಣುಮಾತ್ರ ಅರ್ಪಿಸೆ
ಅವನೆ ನಿರ್ಮಲ ಚಿತ್ತ
||ಹರಿಗರ್ಪಿಸದ||
ನಿರುತಗ್ರಾಸಕೆ ಚಿಂತೆಮಾಡಲು ಒದಗದು
ಪುಣ್ಯವು ನಿನಗೆತ್ತ||ನಿರುತ||
ಅರೆ ಮನವಿಲ್ಲದೆ ದೃಢಮನದಿಪ್ಪುದೆ
ಸಂಪಾದನೆ ಭತ್ಯಾ....
||ನಂಬಿ ನೆಚ್ಚದಿರು||
ಭಾವ ವಿರಕ್ತಿಯ ವಹಿಸದಿದ್ದರೆ
ನಿನಗಾಗುವುದು ಖೇದ
ಸಾವಿರಕೊಂದೆ ಮಾತು ಹರಿದಾಸನೆನಿಸೋದು
ಪರಿಪರಿಯಾಸ್ವಾದ
||ಭಾವ ವಿರಕ್ತಿಯ||
ದೇವಕಿಸುತ ನಮ್ಮ ವಿಜಯವಿಠ್ಠಲನಂಘ್ರಿ
ತೀರ್ಥ ಪ್ರಾಸಾದ||ದೇವಕಿ||
ಸೇವಿಸದಾ ನರ ನಿತ್ಯ ನರಕವಾಸ
ಎನ್ನುತಲಿದೆ ವೇದಾ....
||ನಂಬಿ ನೆಚ್ಚದಿರು||
************
ನಂಬಿ ನೆಚ್ಚದಿರು ನರಲೋಕ ಸುಖವೆಂಬ,
ಅಂಬಲಿ ಪರಮಾನ್ನ ಪ
ಹಂಬಲಿಸುವುದು ಹರಿಲೋಕಾನಂದವೆಂಬ
ಪೀಯೂಷಪಾನ ಅ.ಪ
ದುರಳ ಜನರ ಸಂಗವೆಂಬೋದೆ ಎಂದಿಗು
ನೊಣ ಬೆರಸಿದ ಊಟ
ಪರಮಭಾಗವತರ ಪದಸಂಗವೆಂಬುದು
ಮಸ್ತಕದ ಮಣಿ ಮಕುಟ
ಕೇವಲ ಯಮಕಾಟ
ಪರತತ್ವವಾದ ಶ್ರೀಹರಿಯ ತಿಳಿವುದೆ ವೈಕುಂಠಕೆ ಓಟ 1
ಹಾರಿ ಹೋಗುವ ಹೊಟ್ಟು
ಇದ್ದಾಗ ದಾನ ಧರ್ಮಂಗಳ ಮಾಡೋಡು ಕೈವಲ್ಯಕೆ ಮೆಟ್ಟು
ಹೊದ್ದಿರುವರ ಕಂಡಾಸೆಯಪಟ್ಟರೆ ಹೋಗುವಿ ನೀ ಕೆಟ್ಟು
ಬುದ್ಧಿಹೀನರಿಗೆ ಪೇಳದಿರೆಲೊ ತತ್ವಸಾರ ಸುಂದರ ಗುಟ್ಟು 2
ಅಲ್ಪಾವಕಾಶವು ಈ ಶರೀರವು ಗಾಳಿಗೊಡ್ಡಿದ ದೀಪ
ನೋಡು ಹಾಲುಸಕ್ಕರೆ ತುಪ್ಪ
ಬಲ್ಪಂಥ ಮಾಡದಿರು ಜನ್ಮಜನ್ಮದಲಿ ಬಿಡದೆಲೊ ಸಂತಾಪ
ಸ್ವಲ್ಪಕಾಲಾದರೂ ಮಧ್ವಮತವೊಂದು ಭವವೇ ನಿರ್ಲೇಪ3
ಕರ್ಮ ಆವುದಾದರು ಸೂಳೆಗಿಕ್ಕ್ಕಿದ ವಿತ್ತ
ಹರಿಗೆ ವಿಶ್ವಾಸದಿ ಅಣುಮಾತ್ರ ಅರ್ಪಿಸೆ ಅವನೆ ನಿರ್ಮಲ ಚಿತ್ತ
ನಿರುತಗ್ರಾಸಕೆ ಚಿಂತೆಮಾಡಲು ಒದಗದು ಪುಣ್ಯವು ನಿನಗೆತ್ತ
ಅರೆಮನವಿಲ್ಲದೆ ದೃಢಮನದಿಪ್ಪುದೆ ಸಂಪಾದನೆ ಭತ್ಯ4
ಭಾವವಿರಕ್ತಿಯ ವಹಿಸದಿದ್ದರೆ ನಿನಗಾಗುವುದು ಖೇದ
ಪರಿಪರಿಯಾಸ್ವಾದ
ದೇವಕಿಸುತ ನಮ್ಮ ವಿಜಯವಿಠ್ಠಲನಂಘ್ರಿ ತೀರುಥ ಪ್ರಾಸಾದ
ನಿತ್ಯ ನರಕವಾಸ ಎನ್ನತಲಿದೆ ವೇದ 5
***********