RSS song .
ಧರೆಯ ಹೃದಯ ಗೆಲ್ಲುತ ಮೆರೆಯಲಿಹುದು ಭಾರತ
ಭರತ ಭೂಮಿ ಧರೆಯಲಿ ಗರಿಮೆ ಹಿರಿಮೆಗಳಿಸಲಿ
ಎಂಬುದೊಂದೆ ಹಂಬಲ ಧರ್ಮವೊಂದೆ ಬೆಂಬಲ ||ಪ||
ತ್ಯಾಗ ಶೌರ್ಯ ಸಾಹಸ ದೇಶಕೆಲ್ಲ ಅರ್ಪಿತ
ಧ್ಯೇಯಗೀತೆ ಹಾಡುತ ಬಾಳನದಕೆ ನೀಡುತ ||೧||
ಸ್ವಾಭಿಮಾನ ಉಳಿಯಲು ಶ್ರೇಷ್ಠ ಜ್ಞಾನ ಬೆಳಗಲು
ನಾಡ ಕೀರ್ತಿ ಬೆಳೆಸಲು ಗಳಿಸಿ ಶಕ್ತಿ ಭುಜದೊಳು ||೨||
ಕಷ್ಟಗಳನು ಸಹಿಸುತ ದುಷ್ಟಬಲವ ದಹಿಸುತ
ಹಿಂದುರಾಷ್ಟ್ರ ಬೆಳಗಲು ಸಂಘಶಕ್ತಿ ಕಟ್ಟಲು ||೩||
ರಾಷ್ಟ್ರದೇಳ್ಗೆಗಾಗಿಯೆ ಜಯದ ಗಾನ ಮೊಳಗಲಿ
ಶತ್ರುದಮನಕಾಗಿಯೆ ಶಸ್ತ್ರ ಹೊಳೆಯುತೇಳಲಿ ||೪||
ಧ್ಯೇಯ ಪಥದಿ ಸಾಗುವ ಬಲದಿ ಜಯವ ಪಡೆಯುವ
ಛಲದಿ ಕೆಡುಕ ತೊಡೆಯುವ ಮುಂದೆ ಮುಂದೆ ನಡೆಯುವ ||೫||
***
dhareya hRudaya gelluta mereyalihudu BArata
Barata BUmi dhareyali garime hirimegaLisali
eMbudoMde haMbala dharmavoMde beMbala ||pa||
tyAga Sourya sAhasa dESakella arpita
dhyEyagIte hADuta bALanadake nIDuta ||1||
svABimAna uLiyalu SrEShTha j~jAna beLagalu
nADa kIrti beLesalu gaLisi Sakti BujadoLu ||2||
kaShTagaLanu sahisuta duShTabalava dahisuta
hiMdurAShTra beLagalu saMGaSakti kaTTalu ||3||
rAShTradELgegAgiye jayada gAna moLagali
SatrudamanakAgiye Sastra hoLeyutELali ||4||
dhyEya pathadi sAguva baladi jayava paDeyuva
Caladi keDuka toDeyuva muMde muMde naDeyuva ||5||
***